ನೆರೆದಿದ್ದ ಸಾವಿರಾರು ಭಕ್ತರ ನಡುವೆ ಕಾರ್ಣಿಕ ನುಡಿದ ಪೂಜಾರಿ: ವಿಡಿಯೋ ನೋಡಿ

ನೆರೆದಿದ್ದ ಸಾವಿರಾರು ಭಕ್ತರ ನಡುವೆ ಕಾರ್ಣಿಕ ನುಡಿದ ಪೂಜಾರಿ: ವಿಡಿಯೋ ನೋಡಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 15, 2024 | 9:11 PM

ದಾವಣಗೆರೆ ತಾಲೂಕಿನ ನೀಲಾನಹಳ್ಳಿ ಆಂಜನೇಯ ಸ್ವಾಮಿ ಕಾರ್ಣಿಕ ಯನ್ನು ಇಂದು ಸಾವಿರಾರು ಭಕ್ತರ ನಡುವೆ ಪೂಜಾರಿ ನುಡಿದಿದ್ದಾರೆ. ‘ಮಾತಾಯಿ ಬಂಗಾರದ ತೊಟ್ಟಿಲ ಕಟ್ಯಾಳಲೇ, ನರಲೋಕದ ಜನ ಚಿನ್ನದ ಕಿರೀಟ ಇಟ್ಟರಲೇ, ವರುಣ ಆರ್ಭಟಕ್ಕೆ ಹುಟ್ಟಿದ ಶಿಶು ಸಂತೋಷವಾದಿತಲೇ’ ಎಂದು ಕಾರ್ಣಿಕವನ್ನು ನುಡಿಯಲಾಗಿದೆ.

ದಾವಣಗೆರೆ, ಮಾರ್ಚ್​ 15: ದಾವಣಗೆರೆ ತಾಲೂಕಿನ ನೀಲಾನಹಳ್ಳಿ ಆಂಜನೇಯ ಸ್ವಾಮಿ ಕಾರ್ಣಿಕ (Karnika) ವನ್ನು ಇಂದು ಸಾವಿರಾರು ಭಕ್ತರ ನಡುವೆ ಪೂಜಾರಿ ನುಡಿದಿದ್ದಾರೆ. ‘ಮಾತಾಯಿ ಬಂಗಾರದ ತೊಟ್ಟಿಲ ಕಟ್ಯಾಳಲೇ, ನರಲೋಕದ ಜನ ಚಿನ್ನದ ಕಿರೀಟ ಇಟ್ಟರಲೇ, ವರುಣ ಆರ್ಭಟಕ್ಕೆ ಹುಟ್ಟಿದ ಶಿಶು ಸಂತೋಷವಾದಿತಲೇ’ ಎಂದು ಕಾರ್ಣಿಕವನ್ನು ನುಡಿಯಲಾಗಿದೆ. ಆಂಜನೇಯ ಸ್ವಾಮೀಯ ಕಾರ್ಣಿಕವನ್ನ ಭಕ್ತ ಸಾಗರ ವ್ಯಾಖ್ಯಾನಿಸಿದ್ದು, ‘ಬರುವ ದಿನಗಳಲ್ಲಿ ಮಳೆ ಬೆಳೆ ಸಮೃದ್ಧವಾಗಲಿದೆ. ‌ಮಾನವ ಕುಲವೇ ದೇವರಿಗೆ ಚಿನ್ನದ ಕಿರೀಟ ಹಾಕಿ ಭಕ್ತಿ ಸಮರ್ಪಿಸುವಷ್ಟು ಸಮೃದ್ಧ ಕಾಲ ಬರಲಿದೆ ಎಂದು ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: Mar 15, 2024 09:02 PM