ಪ್ರಸಕ್ತ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ: ದೇವಸ್ಥಾನದ ಧರ್ಮದರ್ಶಿ ಅಪಸ್ವರ

‘ಸಂಪಾದಿತಲೇ ಪರಾಕ್’ ಇದು ಈ ವರ್ಷದ ವಿಜಯನಗರ ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ. ಆದರೆ ಇದೀಗ ಈ ನುಡಿಯ ಬಗ್ಗೆಯೇ ಅಪಸ್ವರ ಕೇಳಿಬಂದಿದೆ. ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಓಡೆಯರ್​​ ಈ ವರ್ಷದ ಕಾರ್ಣಿಕ ನುಡಿಗೆ ಅಪಸ್ವರ ನುಡಿದಿದ್ದಾರೆ. ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನವಾಣಿ ಎಂದಿದ್ದಾರೆ. ಆ ಮೂಲಕ ಧರ್ಮಧರ್ಶಿ ಹಾಗೂ ಗೊರವಯ್ಯ ನಡುವೆ ಜಟಾಪಟಿ ಮುಂದುವರೆದಿದೆ.

ಪ್ರಸಕ್ತ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ: ದೇವಸ್ಥಾನದ ಧರ್ಮದರ್ಶಿ ಅಪಸ್ವರ
ಕಾರ್ಣಿಕ ನುಡಿ, ಧರ್ಮಧರ್ಶಿ ವೆಂಕಪ್ಪಯ್ಯ ಓಡೆಯರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2024 | 9:56 PM

ವಿಜಯನಗರ, ಫೆಬ್ರವರಿ 26: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ (mailaralingeshwara Karanika 2024) ನುಡಿ ಹೊರ ಬಿದ್ದಿದೆ. ಹೂವಿನಹಡಗಲಿಯಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ‘ಸಂಪಾದಿತಲೇ ಪರಾಕ್’ ಎಂದು ಕಾರ್ಣಿಕ ನುಡಿಯಲಾಗಿದೆ. ಆದರೆ ಪ್ರಸಕ್ತ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ. ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನವಾಣಿ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಓಡೆಯರ್ ಹೇಳಿದ್ದಾರೆ. ಆ ಮೂಲಕ ಗೊರವಯ್ಯ ರಾಮಪ್ಪ ವಿರುದ್ಧ ಮತ್ತೆ ಧರ್ಮದರ್ಶಿ ವೆಂಕಪ್ಪಯ್ಯ ತಿರುಗಿಬಿದಿದ್ದಾರೆ.

ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು

ಧರ್ಮಧರ್ಶಿ ಹಾಗೂ ಗೊರವಯ್ಯ ನಡುವೆ ಜಟಾಪಟಿ ಮುಂದುವರೆದಿದ್ದು, ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಕಾರ್ಣಿಕ ನುಡಿ ನುಡಿದ್ದಾರೆ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿ ವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಉಂಟಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಸಂಪಾದಿತಲೇ ಪರಾಕ್: ಸುಭಿಕ್ಷೆಯ ನಾಡಿಗಾಗಿ ಬಂಗಾರದ ಭವಿಷ್ಯ ನುಡಿದ ಭಂಡಾರದೊಡೆಯ..!

ಈ ವರ್ಷದ ಕಾರ್ಣಿಕ ನುಡಿಯ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಯಾರ ಅಣತಿಯಂತೆ ಕಾರ್ಣಿಕ ನುಡಿಯುತ್ತಿದಾರೆ ಗೊತ್ತಿಲ್ಲ. ಧಾರ್ಮಿಕ ಧತ್ತಿ ಅಧಿಕಾರಿ ಜಿಲ್ಲಾಧಿಕಾರಿಗಳಿದ್ದಾರೆ ಅವರೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮೈಲಾರಲಿಂಗೇಶ್ವರ ದೇವರು ಹುಟ್ಟಿದಾಗಿನಿಂದ ನಡೆದಿದ್ದ ಧಾರ್ಮಿಕ ಕಾರ್ಯಗಳು ನಡೆದಿಲ್ಲ. ವೈಯಕ್ತಿಕ ಸಮಸ್ಯೆ, ಜಗಳ, ದ್ವೇಷ ಏನಿದ್ದರೂ ಭಕ್ತರು ಬಂದಾಗ ಈ ರೀತಿ ಮಾಡಬಾರದು. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆಂದು ಧರ್ಮಧರ್ಶಿ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: Shri Yerrithatha Swamy: ದೇವರ ಮೂರ್ತಿ ಕೂರಿಸುವ ವಿಚಾರದಲ್ಲಿ ಗಲಾಟೆ, ಕೊಳಗಲ್ ಗ್ರಾಮದಲ್ಲಿ ಸೆಕ್ಷನ್ 144 ಜಾರಿ

ಪ್ರತಿ ವರ್ಷ ಮೈಲಾರಲಿಂಗೇಶ್ವರ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸುಮಾರು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪ್ರತಿವರ್ಷ ಭರತ್ ಹುಣ್ಣುಮೆಯಾದ ಮೂರು ದಿನಕ್ಕೆ ವರ್ಷದ ದೈವವಾಣಿಯನ್ನ ನುಡಿಯಲಾಲಾಗುತ್ತದೆ. ಮೈಲಾರದ ಡೆಂಕನಮರಡಿ ಎಂಬಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರು ಒಂದೇ ಶಬ್ದ ಮಾಡದೇ ಮೌನ ತಾಳಿದರು.

ಗೊರವಯ್ಯ ರಾಮಪ್ಪ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬಿದ್ದರು. ಕೂಡಲೇ ನೆರೆದ ಭಕ್ತರು ಗೊರವಯ್ಯ ರಾಮಪ್ಪಜ್ಜನನ್ನು ಹಿಡಿದುಕೊಂಡರು. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ 15 ಅಡಿ ಗೊರವಯ್ಯ ಸದ್ದಲೇ ಅನ್ನುತಾ ‘ಸಂಪಾದಿತಲೇ ಪರಾಕ್’ ಎನ್ನುವ ದೈವವಾಣಿ ನುಡಿದಿದ್ದಾರೆ. ಸಂಪಾದಿತಲೇ ಎನ್ನುವ ದೈವವಾಣಿಯನ್ನ ಈ ಭಾರಿ ರೈತರಿಗೆ ಹಾಗೂ ದೇಶಕ್ಕೆ ಮಳೆ-ಬೆಳೆ ಸಮೃದ್ದವಾಗಲಿದೆ. ರಾಜ್ಯಕ್ಕೆ ಉತ್ತಮ ಮಳೆಬೆಳೆಯಾಗಲಿದೆ ಎಂಬ ಭವಿಷ್ಯವಾಣಿ ಇದಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್