ಸಂಪಾದಿತಲೇ ಪರಾಕ್: ಸುಭಿಕ್ಷೆಯ ನಾಡಿಗಾಗಿ ಬಂಗಾರದ ಭವಿಷ್ಯ ನುಡಿದ ಭಂಡಾರದೊಡೆಯ..!

Mailaralingeshwara Karanika 2024: ವಿಜಯನಗರ ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ ಹೊರ ಬಿದ್ದಿದೆ. ಇಂದು ಹೂವಿನಹಡಗಲಿಯಲ್ಲಿನ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆದಿದ್ದು, ಗೊರವಯ್ಯ ರಾಮಣ್ಣ ಅವರು “ಸಂಪಾದಿತಲೇ ಪರಾಕ್” ಎಂದು ಈ ಬಾರಿ ಕಾರ್ಣಿಕ ನುಡಿಯನ್ನು ನುಡಿದ್ದಾರೆ. ಈ ಕಾರ್ಣಿಕ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಸಂಪಾದಿತಲೇ ಪರಾಕ್: ಸುಭಿಕ್ಷೆಯ ನಾಡಿಗಾಗಿ ಬಂಗಾರದ ಭವಿಷ್ಯ ನುಡಿದ ಭಂಡಾರದೊಡೆಯ..!
ರಾಮಣ್ಣ ಗೊರವಯ್ಯ ಕಾರ್ಣಿಕ ನುಡಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 26, 2024 | 7:58 PM

ವಿಜಯನಗರ, (ಫೆಬ್ರವರಿ 26): ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ (mailaralingeshwara Karanika 2024) ನುಡಿ ಹೊರ ಬಿದ್ದಿದೆ. ಇಂದು (ಫೆಬ್ರವರಿ 26) ಹೂವಿನಹಡಗಲಿಯಲಿ  ತಾಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆದಿದ್ದು, ಗೊರವಯ್ಯ ರಾಮಣ್ಣ ಅವರು “ಸಂಪಾದಿತಲೇ ಪರಾಕ್” ಎಂದು ಈ ಬಾರಿ ಕಾರ್ಣಿಕ ನುಡಿಯನ್ನು ನುಡಿದ್ದಾರೆ.  ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂದು ಹೇಳಲಾಗುತ್ತದೆ. ಈ ಸಲ ಭಾರಿ ಮಳೆ, ಬೆಳೆ ಚೆನ್ನಾಗಿ ಆಗಿ ರೈತರ ಬಾಳು ಹಸನಾಗುತ್ತದೆ ಎಂದು ಕಾರ್ಣಿಕ ನುಡಿ ಅರ್ಥೈಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಣಿಕ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಕುದುರೆ ಏರಿ ಬಂದು ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಗೊರವಯ್ಯಗೆ ದೀಕ್ಷೆ ನೀಡಿದರು. ಗೊರವಯ್ಯ ಸರಸರನೇ 15 ಅಡಿ ಎತ್ತರದ ಬಿಲ್ಲನ್ನು ಏರಿ “ಸಂಪಾದಿತಲೇ ಪರಾಕ್”  ಎಂದು ದೈವವಾಣಿ ನುಡಿದಿದ್ದಾರೆ. ಬಳಿಕ 15 ಅಡಿ ಎತ್ತರದಿಂದಲೇ ಕೆಳಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಬಿಜೆಪಿ ಬಗ್ಗೆ ಅಚ್ಚರಿಯ ಕಾರ್ಣಿಕ ನುಡಿದ ಜಿಗಣೆಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ

ಕಾರ್ಣಿಕದ ಅರ್ಥ

ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ಬಾರಿಯಂತೆ ಬರಗಾಲ ಕಡಿಮೆಯಾಗಲಿದೆ. ಮಳೆ ಬೆಳೆ ಚೆನ್ನಾಗಿ ಆಗಲಿದೆ. ಸುಭಿಕ್ಷೆಯಿಂದ ರೈತರು ಸಂತಸ ಪಡಲಿದ್ದಾರೆ ಎಂಬುದಾಗಿ ಕಾರ್ಣಿಕ ನುಡಿಯ ಅರ್ಥವಾಗಿದೆ.

ವಿಜಯನರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ ಪ್ರತಿ ವರ್ಷ ಗೊರವಯ್ಯನ ಕಾರ್ಣಿಕ ಕೇಳಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಗೊರವಯ್ಯ ಒಂಬತ್ತು ದಿನಗಳ ಕಾಲ ಉಪವಾಸ ಇದ್ದು ಕಾರ್ಣಿಕ ನುಡಿ ಹೇಳುತ್ತಾರೆ. ಅದರಂತೆ ಈ ವರ್ಷವೂ ಸಹ ಕಾರ್ಣಿಕನ ಕೇಳಲು ಲಕ್ಷಾಂತರ ಜನ ನೆರೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ