AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಬ್ಲಾಸ್ಟ್: ಆರೋಪಿಗಳನ್ನು ಹಿಡಿಯಲು ನೆರವಾಗಿದ್ದು ನಮ್ಮ ಪೊಲೀಸ್: ಬಿಜೆಪಿ ವಿರುದ್ದ ಸಿಡಿಗುಟ್ಟಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

West Bengal CM and Police Retorts Against BJP's Terror Jibe: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್​ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಒಬ್ಬ ಮಾಸ್ಟರ್ ಮೈಂಡ್ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ಕೋಲ್ಕತಾದಲ್ಲಿ ಬಂಧಿಸಲಾಗಿದೆ. ಈ ವಿಚಾರದ ಬಗ್ಗೆ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ಪಶ್ಚಿಮ ಬಂಗಾಳ ಉಗ್ರರ ಅಡಗುದಾಣವಾಗಿದೆ ಎಂದು ಆರೋಪ ಮಾಡಿದ್ದರು. ಈ ಹೇಳಿಕೆಗೆ ಪಶ್ಚಿಮ ಬಂಗಾಳ ಮತ್ತು ಆ ರಾಜ್ಯದ ಪೊಲೀಸ್ ಆಕ್ಷೇಪ ವ್ಯಕ್ತಪಡಿಸಿದೆ. ಬಂಗಾಳಕ್ಕೆ ಶಂಕಿತರು ಬಂದ ಎರಡೇ ಗಂಟೆಯಲ್ಲಿ ಅವರ ಬಂಧನವಾಗಿದೆ. ರಾಜ್ಯ ಪೊಲೀಸ್ ಮತ್ತು ಎನ್​ಐಎ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ. ಬಂಗಾಳ ಉಗ್ರರಿಗೆ ಹೇಗೆ ಸೇಫ್ ಹೇವನ್ ಆಗಲು ಸಾಧ್ಯ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಬ್ಲಾಸ್ಟ್: ಆರೋಪಿಗಳನ್ನು ಹಿಡಿಯಲು ನೆರವಾಗಿದ್ದು ನಮ್ಮ ಪೊಲೀಸ್: ಬಿಜೆಪಿ ವಿರುದ್ದ ಸಿಡಿಗುಟ್ಟಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2024 | 6:13 PM

ಕೋಲ್ಕತಾ, ಏಪ್ರಿಲ್ 12: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕಳೆದ ತಿಂಗಳು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ (Rameshwaram Cafe Bomb blast case) ಎನ್​ಐಎ ತಂಡ ಕೋಲ್ಕತಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ವಿಚಾರ ಈಗ ಬಿಜೆಪಿ ಮತ್ತು ಟಿಎಂಸಿ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಉಗ್ರಗಾಮಿಗಳ ಅಡಗುದಾಣವಾಗಿದೆ (terror safe haven) ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malaviya) ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಈ ಹೇಳಿಕೆಗೆ ಪಶ್ಚಿಮ ಬಂಗಾಳ ಪೊಲೀಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಶಂಕಿತ ಉಗ್ರರಾದ ಮುಸ್ಸಾವಿರ್ ಹುಸೇನ್ ಶಾಝಿಬ್ ಹಾಗೂ ಅವರ ಸಹಚರ ಅಬ್ದುಲ್ ಮದೀನ್ ಅಹ್ಮದ್ ತಾಹಾ ಅವರನ್ನು ಕೋಲ್ಕತಾದಲ್ಲಿ ಬಂಧಿಸಲು ಎನ್​ಐಎಗೆ ಕೋಲ್ಕತಾ ಪೊಲೀಸ್ ನೆರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಕೂಚ್ ಬಿಹಾರ್​ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಇಬ್ಬರು ಶಂಕಿತ ಉಗ್ರರ ಬಂಧನದ ಘಟನೆಯನ್ನು ಉಲ್ಲೇಖಿಸಿದ್ದಾರೆ. ‘ಈ ಇಬ್ಬರು ವ್ಯಕ್ತಿಗಳು ಬಂಗಾಳಕ್ಕೆ ಬಂದ ಎರಡೇ ಗಂಟೆಯೊಳಗೆ ಬಂಧಿಸಲಾಗಿದೆ. ಇದು ತಮ್ಮ ರಾಜ್ಯದಲ್ಲಿರುವ ಕಾನೂನು ಜಾರಿ ಸಂಸ್ಥೆಗಳ ಕ್ರಿಯಾಶೀಲತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್, ಮಾಸ್ಟರ್​ ಮೈಂಡ್​​ ಪಶ್ಚಿಮ ಬಂಗಾಳದಲ್ಲಿ ಎನ್​ಐಎ ವಶಕ್ಕೆ

‘ಆರೋಪಿಗಳು ಇಲ್ಲಿಯವರಲ್ಲ, ಕರ್ನಾಟಕದವರು. ಬಂಗಾಳಕ್ಕೆ ಬಂದು ಎರಡು ಗಂಟೆಗಳಿಂದ ಅಡಿಗಿಕೊಂಡಿದ್ದರು. ಈ ಎರಡು ಗಂಟೆಯಲ್ಲಿ ನಮ್ಮ ಪೊಲೀಸರು ಇವರನ್ನು ಹಿಡಿದುಹಾಕಿದ್ದಾರೆ. ಈ ಮನುಷ್ಯರು ಬಂಗಾಳ ಸುರಕ್ಷಿತ ಅಲ್ಲ ಎನ್ನುತ್ತಿದ್ದಾರೆ,’ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ ಬಂಗಾಳ ಪೊಲೀಸ್

ಬಿಜೆಪಿಯ ಅಮಿತ್ ಮಾಳವೀಯ ಹೇಳಿಕೆಗೆ ಪಶ್ಚಿಮ ಬಂಗಾಳ ಪೊಲೀಸ್ ಕೂಡ ತಿರುಗೇಟು ನೀಡಿದೆ. ಅವರ ಹೇಳಿಕೆಯನ್ನು ಸುಳ್ಳಿನ ಪರಮಾವಧಿ ಎಂದು ಬಣ್ಣಿಸಿದೆ.

‘ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪೂರ್ವ ಮೇದಿನಿಪುರ್​ನಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಗಳು ಹಾಗೂ ಪಶ್ಚಿಮ ಬಂಗಾಳ ಪೊಲೀಸರಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Jallianwala Bagh Massacre : ಇದು ದೇಶ ಕಂಡ ಅತ್ಯಂತ ದುರಂತ ಘಟನೆ, ಇದನ್ನು ಭಾರತ ಎಂದಿಗೂ ಮರೆಯದು

‘ಕೇಂದ್ರೀಯ ಏಜೆನ್ಸಿಗಳು ಪಶ್ಚಿಮ ಬಂಗಾಳದ ಪಾತ್ರವನ್ನು ಗುರುತಿಸಿವೆ. ಪಶ್ಚಿಮ ಬಂಗಾಳ ಯಾವತ್ತೂ ಕೂಡ ಉಗ್ರರಿಗೆ ಅಡಗುದಾಣವಾಗಿರಲಿಲ್ಲ. ರಾಜ್ಯದ ಜನರ ಸುರಕ್ಷತೆಗೆ ಪೊಲೀಸರು ಸದಾ ಕಟಿಬದ್ಧರಾಗಿರುತ್ತಾರೆ,’ ಎಂದು ಬಂಗಾಳ ಪೊಲೀಸ್​ನ ಎಕ್ಸ್ ಖಾತೆಯಿಂದ ಪೋಸ್ಟ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ