ಮಧ್ಯಪ್ರದೇಶ: ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ನಾಯಿ ಸಾವು

ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ಸಾಕು ನಾಯಿಯೊಂದು ಕೊನೆಯುಸಿರೆಳೆದಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಫೆಬ್ರವರಿ 26ರಂದು ಬಾಂಧವಗಢ ಹುಲಿ ಅಭಯಾರಣ್ಯದ ಬಳಿ ಘಟನೆ ನಡೆದಿತ್ತು. ತನ್ನ ಮಾಲೀಕನನ್ನು ರಕ್ಷಿಸಲು ಹುಲಿಯ ವಿರುದ್ಧ ಹೋರಾಡಿ ಹುಲಿಯನ್ನು ಕಾಡಿನೊಳಗೆ ಓಡಿ ಹೋಗುವಂತೆ ಮಾಡಿದ್ದ ನಾಯಿ ಸಾವನ್ನಪ್ಪಿದೆ. ಶಿವಂ ಬಡ್ಗೈಯಾ ತನ್ನ ಸಾಕುಪ್ರಾಣಿ ಜರ್ಮನ್ ಶೆಫರ್ಡ್‌ನೊಂದಿಗೆ ಮನೆಯ ಹೊರಗೆ ಇದ್ದಾಗ, ಹತ್ತಿರದ ಕಾಡಿನಿಂದ ಹುಲಿಯೊಂದು ಹಳ್ಳಿಗೆ ದಾರಿ ತಪ್ಪಿ ಬಂದಿತ್ತು. ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಅವನ ನಾಯಿ ಹುಲಿಯನ್ನು ಎದುರಿಸಿ ಜೋರಾಗಿ ಬೊಗಳಲು ಪ್ರಾರಂಭಿಸಿತು.

ಮಧ್ಯಪ್ರದೇಶ: ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ನಾಯಿ ಸಾವು
ನಾಯಿ
Image Credit source: India Today

Updated on: Mar 03, 2025 | 10:10 AM

ಸತ್ನಾ, ಮಾರ್ಚ್ 03: ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ಸಾಕು ನಾಯಿಯೊಂದು ಕೊನೆಯುಸಿರೆಳೆದಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಫೆಬ್ರವರಿ 26ರಂದು ಬಾಂಧವಗಢ ಹುಲಿ ಅಭಯಾರಣ್ಯದ ಬಳಿ ಘಟನೆ ನಡೆದಿತ್ತು. ತನ್ನ ಮಾಲೀಕನನ್ನು ರಕ್ಷಿಸಲು ಹುಲಿಯ ವಿರುದ್ಧ ಹೋರಾಡಿ ಹುಲಿಯನ್ನು ಕಾಡಿನೊಳಗೆ ಓಡಿ ಹೋಗುವಂತೆ ಮಾಡಿದ್ದ ನಾಯಿ ಸಾವನ್ನಪ್ಪಿದೆ.

ಶಿವಂ ಬಡ್ಗೈಯಾ ತನ್ನ ಸಾಕುಪ್ರಾಣಿ ಜರ್ಮನ್ ಶೆಫರ್ಡ್‌ನೊಂದಿಗೆ ಮನೆಯ ಹೊರಗೆ ಇದ್ದಾಗ, ಹತ್ತಿರದ ಕಾಡಿನಿಂದ ಹುಲಿಯೊಂದು ಹಳ್ಳಿಗೆ ದಾರಿ ತಪ್ಪಿ ಬಂದಿತ್ತು. ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಅವನ ನಾಯಿ ಹುಲಿಯನ್ನು ಎದುರಿಸಿ ಜೋರಾಗಿ ಬೊಗಳಲು ಪ್ರಾರಂಭಿಸಿತು.

ಆರಂಭದಲ್ಲಿ ನಾಯಿಯ ಬೊಗಳುವಿಕೆಯನ್ನು ನಿರ್ಲಕ್ಷಿಸಿದ ಹುಲಿ, ಶೀಘ್ರದಲ್ಲೇ ತನ್ನ ಗಮನವನ್ನು ಮಾಲೀಕರಿಂದ ಬೇರೆಡೆಗೆ ತಿರುಗಿಸಿ ನಾಯಿಯ ಮೇಲೆ ದಾಳಿ ಮಾಡಿತು.

ಮತ್ತಷ್ಟು ಓದಿ: Tiger Attack: ಮಧ್ಯಪ್ರದೇಶದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ

ಶಿವಂ ಭಯಾನಕ ಘಟನೆಯನ್ನು ವಿವರಿಸಿದ್ದು, ಹುಲಿಯು ಜರ್ಮನ್ ಶೆಫರ್ಡ್ ನಾಯಿಯನ್ನು ತನ್ನ ಹಲ್ಲಿನಲ್ಲಿ ಕಚ್ಚಿ ಹಿಡಿದು ಹಳ್ಳಿಯ ಹೊರಗೆ ಸಾಗಿಸಿತು ಎಂದು ಹೇಳಿದನು. ಸಾಕು ಪ್ರಾಣಿ ತೀವ್ರವಾಗಿ ವಿರೋಧಿಸಿ ಪ್ರತಿದಾಳಿ ನಡೆಸಿತು. ಕೊನೆಗೆ, ಹುಲಿ ಅದನ್ನು ಬಿಟ್ಟು ಕಾಡಿಗೆ ಓಡಿ ಹೋಗಿತ್ತು ಎಂದಿದ್ದಾರೆ.

ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಾಯಿತು, ಆದರೆ ದಾಳಿಯ ಕೆಲವೇ ಗಂಟೆಗಳಲ್ಲಿ ಗಾಯಗಳಿಂದಾಗಿ ವಿಪರೀತ ರಕ್ತ ಹೋಗಿದ್ದ ಕಾರಣ ಅದು ಸಾವನ್ನಪ್ಪಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ