ಮದುವೆ ದಿನ ಮಾಜಿ ಪ್ರೇಯಸಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬ್ಯೂರ್ಟಿಪಾರ್ಲರ್​ ಬಳಿ ಯುವತಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆಕೆ ಬೇರೊಬ್ಬನ ಜತೆ ವಿವಾಹಕ್ಕೆ ಮುಂದಾಗಿದ್ದಾಳೆನ್ನುವ ಕೋಪದಲ್ಲಿ ಆತ ದುಡುಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತ ಉತ್ತರ ಪ್ರದೇಶದ ಝಾನ್ಸಿಯವನು, ಇಬ್ಬರೂ ಮೊದಲು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

ಮದುವೆ ದಿನ ಮಾಜಿ ಪ್ರೇಯಸಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಸಾವು

Updated on: Jun 27, 2024 | 8:44 AM

ಮದುವೆ ದಿನ ಬ್ಯೂಟಿ ಪಾರ್ಲರ್​ ಎದುರು ಮಾಜಿ ಪ್ರೇಯಸಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಯುವಕ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಮೊರೆನಾ ಪ್ರದೇಶದಲ್ಲಿರುವ ಬ್ಯೂಟಿ ಪಾರ್ಲರ್​ ಎದುರು ಯುವತಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ನಂತರ ಮನೆಗೆ ಬಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಯುವಕನನ್ನು ಉತ್ತರ ಪ್ರದೇಶದ ಝಾನ್ಸಿಯ ದೀಪಕ್ ಗೌತಮ್ ಎಂದು ಗುರುತಿಸಲಾಗಿದೆ. ಜೂನ್ 23 ರಂದು ಮದುವೆಗೆ ಕೆಲವು ಗಂಟೆಗಳ ಮೊದಲು ಮಧ್ಯಪ್ರದೇಶದ ಧಾತಿಯಾ ಜಿಲ್ಲೆಯ ಬರ್ಗಯಾನ್ ಗ್ರಾಮದ ನಿವಾಸಿ ಕಾಜಲ್ ಬ್ಯೂಟಿ ಪಾರ್ಲರ್​ಗೆ ಹೋಗಿದ್ದರು, ಆಗ ದೀಪಕ್ ಅಲ್ಲಿಗೆ ಹೋಗಿ ತನ್ನ ಜತೆ ಬರುವಂತೆ ಕೇಳಿದ್ದಾನೆ ಆಕೆ ಒಪ್ಪದ ಕಾರಣ ಗುಂಡಿ ಹತ್ಯೆ ಮಾಡಿದ್ದ.

ಆರೋಪಿ ಪತ್ತೆಗೆ ಝಾನ್ಸಿಯ ಸ್ವಾಟ್ ಸೇರಿದಂತೆ ಐದು ಪೊಲೀಸ್ ತಂಡಗಳು ಶೋಧ ಕಾರ್ಯ ಆರಂಭಿಸಿತ್ತು.ಸಾಮಾಜಿಕ ಜಾಲತಾಣಗಳಲ್ಲೂ ಆರೋಪಿಯ ಬಗ್ಗೆ ಸುದ್ದಿ ಹಬ್ಬಿತ್ತು.

ಅವರಿಬ್ಬರು ಪರಸ್ಪ ಪ್ರೀತಿಸುತ್ತಿದ್ದರು, ಒಮ್ಮೆ ಓಡಿ ಹೋಗಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸ್ವಲ್ಪ ದಿನಗಳ ಬಳಿಕ ವಾಪಸ್ ಬಂದ ಆಕೆ ಪೋಷಕರ ಬಳಿ ನೀವು ಹೇಳಿದ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಳು.

ಮತ್ತಷ್ಟು ಓದಿ: ಮದುವೆ ದಿನ ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ

ಆದರೆ ದೀಪಕ್ ಮಾತ್ರ ಆಕೆಯನ್ನು ಮರೆಯಲು ಸಿದ್ಧನಿರಲಿಲ್ಲ, ಆಕೆ ತನಗೆ ಸಿಗಲಿಲ್ಲ ಎಂದರೆ ಯಾರಿಗೂ ಸಿಗಬಾರದು ಎನ್ನುವ ಕೋಪದಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ, ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:43 am, Thu, 27 June 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us