ಮಧ್ಯಪ್ರದೇಶ: ಸಚಿವ ಕೈಲಾಶ್​ ವಿಜಯವರ್ಗೀಯ ಆಪ್ತನ ಗುಂಡಿಕ್ಕಿ ಹತ್ಯೆ

|

Updated on: Jun 23, 2024 | 2:08 PM

ಮಧ್ಯಪ್ರದೇಶದ ಸಚಿವ ಕೈಲಾಶ್​ ವಿಜಯವರ್ಗೀಯ ಆಪ್ತ ಮೋನು ಕಲ್ಯಾಣೆ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತ ಮೋನು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಕೂಡ ಆಗಿದ್ದ. ಮೋನುವನ್ನು ಹತ್ಯೆಗೈದ ಪಾತಕಿಗಳು ಆತನ ಮನೆಯ ಸಮೀಪವೇ ವಾಸವಿದ್ದರು ಎಂದು ಹೇಳಲಾಗುತ್ತಿದೆ.

ಮಧ್ಯಪ್ರದೇಶ: ಸಚಿವ ಕೈಲಾಶ್​ ವಿಜಯವರ್ಗೀಯ ಆಪ್ತನ ಗುಂಡಿಕ್ಕಿ ಹತ್ಯೆ
ಮೋನು ಕಲ್ಯಾಣೆ
Image Credit source: India Today
Follow us on

ಮಧ್ಯಪ್ರದೇಶದ ಸಚಿವ ಕೈಲಾಶ್​ ವಿಜಯವರ್ಗೀಯ ಆಪ್ತ ಮೋನು ಕಲ್ಯಾಣೆ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತ ಮೋನು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಕೂಡ ಆಗಿದ್ದರು. ಮೋನುವನ್ನು ಹತ್ಯೆಗೈದ ಪಾತಕಿಗಳು ಅವರ ಮನೆಯ ಸಮೀಪವೇ ವಾಸವಿದ್ದರು ಎಂದು ಹೇಳಲಾಗುತ್ತಿದೆ.

ಹತ್ಯೆಯ ನಂತರ ಮೋನು ಅವರ ಮನೆಯ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೊಲೆಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ಎಸಿಪಿ ವಿನೋದ್ ದೀಕ್ಷಿತ್ ಅವರ ಪ್ರಕಾರ, ಜೈಲ್ ರೋಡ್‌ನ ಉಷಾ ಫಾಟಕ್ ನಿವಾಸಿ ಮೋನು ಕಲ್ಯಾಣ್ ಅವರು ಭಾನುವಾರ ರ್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದರು, ಇದಕ್ಕಾಗಿ ತಡರಾತ್ರಿ ಅಲ್ಲೆಲ್ಲಾ ಬ್ಯಾನರ್, ಪೋಸ್ಟರ್ ಗಳನ್ನು ಹಾಕುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಮೋನು ಬಳಿ ಬಂದು ಮೊಬೈಲ್ ನಂಬರ್ ಕೇಳಿದ್ದಾರೆ. ಮೋನು ಮೊಬೈಲ್ ತೆಗೆದ ಕೂಡಲೇ ದುಷ್ಕರ್ಮಿಗಳು ಪಿಸ್ತೂಲ್ ತೆಗೆದು ಮೋನು ಎದೆಗೆ ಗುಂಡು ಹಾರಿಸಿ ಓಡಿ ಹೋಗಿದ್ದಾರೆ. ಗುಂಡು ಹಾರಿಸಿ ಓಡಿ ಹೋಗುತ್ತಿದ್ದ ದುಷ್ಕರ್ಮಿಗಳ ಮೇಲೆ ಬ್ಯಾನರ್ ಹಾಕುತ್ತಿದ್ದ ಮೋನು ಸಹಚರ ಕೈಯಲ್ಲಿದ್ದ ವಸ್ತುವನ್ನು ಎಸೆದಾಗ ಆತನ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಸುಮಾರು 3ರಿಂದ 4 ಗುಂಡು ಹಾರಿಸಲಾಗಿದೆ.

ಸ್ಥಳದಲ್ಲಿದ್ದವರು ಕೂಡಲೇ ಓಡಿಬಂದು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಮೋನು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕಲ್ಯಾಣೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಕಾಲೋನಿ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸುಮಾರು ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳಾದ ಅರ್ಜುನ್ ಮತ್ತು ಪಿಯೂಷ್ ಮನೆ ಖಾಲಿ ಮಾಡಿದ್ದರು.

ಮತ್ತಷ್ಟು ಓದಿ:

ಕೋಪಗೊಂಡ ಮೃತ ಮೋನು ಕಲ್ಯಾಣೆಯ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.
ಜೆಪಿ ನಾಯಕರಾದ ಕೈಲಾಶ್ ವಿಜಯವರ್ಗಿಯಾ ಮತ್ತು ಆಕಾಶ್ ವಿಜಯವರ್ಗಿಯ ಅವರ ನಿಕಟವರ್ತಿ ಎಂದು ಹೇಳಲಾಗುತ್ತಿದೆ.

ಈ ಕುರಿತು ಕೈಲಾಶ್​ ವಿಜಯವರ್ಗೀಯ ಅವರು ಮಾತನಾಡಿ, ಇದು ಅತ್ಯಂತ ದುಃಖಕರ ಘಟನೆ, ಮೋನು ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ