ಬೈಕ್ ಸವಾರನ ಜೀವಕ್ಕೆ ಕುತ್ತು ತಂದ ಎರಡು ಹಸುಗಳ ಕಾದಾಟ
ರಸ್ತೆಯಲ್ಲಿ ಎರಡು ಹಸುಗಳ ನಡುವೆ ನಡೆದ ಕಾದಾಟವು ವ್ಯಕ್ತಿಯ ಜೀವವನ್ನೇ ತೆಗೆದಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸುತ್ತಿದ್ದವು, ಎದುರು ಬದಿಯಿಂದ ಬಸ್ ಬರುತ್ತಿತ್ತು, ಹಾಗೆಯೇ ಇತ್ತ ಬೈಕ್ ಒಂದು ಹೋಗುತ್ತಿತ್ತು ಅದೇ ಸಮಯದಲ್ಲಿ ಎರಡು ಹಸುಗಳು ಕಾದಾಟಕ್ಕಿಳಿದಿದ್ದವು, ಏಕಾಏಕಿ ಒಂದು ಹಸು ಮತ್ತೊಂದು ಹಸುವನ್ನು ತಿವಿದಿದ್ದು ಆ ಹಸು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಆಯತಪ್ಪಿ ಬಿದ್ದು ಬಸ್ನ ಚಕ್ರದಡಿ ಸಿಲುಕಿರುವ ಘಟನೆ ಇದಾಗಿದೆ.
ಎರಡು ಹಸುಗಳ ಕಾದಾಟವು ವ್ಯಕ್ತಿಯೊಬ್ಬನ ಜೀವಕ್ಕೆ ಆಪತ್ತು ತಂದ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸುತ್ತಿದ್ದವು, ಎದುರು ಬದಿಯಿಂದ ಬಸ್ ಬರುತ್ತಿತ್ತು, ಹಾಗೆಯೇ ಇತ್ತ ಬೈಕ್ ಒಂದು ಹೋಗುತ್ತಿತ್ತು ಅದೇ ಸಮಯದಲ್ಲಿ ಎರಡು ಹಸುಗಳು ಕಾದಾಟಕ್ಕಿಳಿದಿದ್ದವು, ಏಕಾಏಕಿ ಒಂದು ಹಸು ಮತ್ತೊಂದು ಹಸುವನ್ನು ತಿವಿದಿದ್ದು ಆ ಹಸು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಆಯತಪ್ಪಿ ಬಿದ್ದು ಬಸ್ನ ಚಕ್ರದಡಿ ಸಿಲುಕಿರುವ ಘಟನೆ ಇದಾಗಿದೆ.
ತಮಿಳುನಾಡಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಉದ್ಯೋಗಿಯಾಗಿರುವ ವೇಲಾಯುಧರಾಜ್ ಅವರು ತಮ್ಮ ಮೋಟಾರ್ ಸೈಕಲ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು, ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದು ಹಸು ಅವರ ಎದುರೇ ಹೋಗುತ್ತಿರುತ್ತದೆ, ಬಲ ಭಾಗದಿಂದ ಮತ್ತೊಂದು ಹಸು ಬಂದು ಆ ಹಸುವಿಗೆ ಡಿಕ್ಕಿ ಹೊಡೆದಿದೆ, ಆ ಹಸು ಬೈಕ್ ಸವಾರನ ಮೇಲೆ ಬಿದ್ದಿತ್ತು.
ಬೈಕ್ ಸವಾರನ ಮೇಲೆ ಬಸ್ ಹರಿಯುತ್ತಿದ್ದಂತೆ ಕೂಡಲೇ ಚಾಲಕ ಹಾಗೂ ಎಲ್ಲರೂ ಅವರ ಬಳಿ ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಪೊಲೀಸ್‌ನ ಸಂಚಾರ ತನಿಖಾ ವಿಭಾಗದ ಅಧಿಕಾರಿಗಳ ತಂಡವು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿತು.
As a two-wheeler rider, who was hit by the fighting stray cattle, fell under a TNSTC bus and died on the spot on Saturday, the Tirunelveli corporation officials initiated a special drive to impound the stray cattle across the corporation limit on Sunday. pic.twitter.com/E5cyhXGbPV
— Thinakaran Rajamani (@thinak_) June 23, 2024
ಅವರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಪಳಯಂಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಘಟನೆಯಲ್ಲಿ ಎರಡೂ ಹಸುವಿಗೆ ಯಾವುದೇ ಅಪಾಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ