AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akash Anand: ಮಾಯಾವತಿಯ ಉತ್ತರಾಧಿಕಾರಿಯಾಗಿ ಮತ್ತೆ ಆಯ್ಕೆಯಾದ ಆಕಾಶ್ ಆನಂದ್

ಸೋದರಳಿಯ ಆಕಾಶ್​ ಆನಂದ್(Akash Anand) ಅವರನ್ನು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ(Mayawati) ಮತ್ತೆ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಸಮಯದಲ್ಲೇ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ತಮ್ಮ ಸೋದರಳಿಯ ಆಕಾಶ್ ಆನಂದ್(28) ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ತಮ್ಮ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಿದ್ದರು.

Akash Anand: ಮಾಯಾವತಿಯ ಉತ್ತರಾಧಿಕಾರಿಯಾಗಿ ಮತ್ತೆ ಆಯ್ಕೆಯಾದ ಆಕಾಶ್ ಆನಂದ್
ಮಾಯಾವತಿ, ಆಕಾಶ್​ ಆನಂದ್
ನಯನಾ ರಾಜೀವ್
|

Updated on: Jun 23, 2024 | 3:06 PM

Share

ಸೋದರಳಿಯ ಆಕಾಶ್​ ಆನಂದ್(Akash Anand) ಅವರನ್ನು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ(Mayawati) ಮತ್ತೆ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಸಮಯದಲ್ಲೇ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ತಮ್ಮ ಸೋದರಳಿಯ ಆಕಾಶ್ ಆನಂದ್(28) ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ತಮ್ಮ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಿದ್ದರು.

ಇದೀಗ ಉತ್ತರಾಖಂಡ ಹಾಗೂ ಪಂಜಾಬ್​ನಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗಳಲ್ಲಿ ಅವರನ್ನು ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿಸಲು ಸಿದ್ಧತೆ ನಡೆಸಿದೆ. ಎರಡೂ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಾಯಾವತಿ ನಂತರ ಆಕಾಶ್​ ಹೆಸರು ಎರಡನೇ ಸ್ಥಾನದಲ್ಲಿದೆ.

ಬಿಜೆಪಿಯನ್ನು ತಾಲಿಬಾನ್‌ಗೆ ಹೋಲಿಸಿದ ಕೆಲವು ದಿನಗಳ ನಂತರ 28 ವರ್ಷದ ಆಕಾಶ್ ಆನಂದ್ ಅವರನ್ನು ಎರಡು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಆಕಾಶ್​ ಇನ್ನೂ ಅಪ್ರಬುದ್ಧ ಎಂದು ಬಿಎಸ್​ಪಿ ನಾಯಕಿ ಹೇಳಿದ್ದರು.

ಮತ್ತಷ್ಟು ಓದಿ: ಬಿಎಸ್​ಪಿ ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್​ ಆನಂದ್​ರನ್ನು ಕೆಳಗಿಳಿಸಿದ ಮಾಯಾವತಿ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಆಕಾಶ್​ ಆನಂದ್ ಅವರನ್ನು ಕೆಳಗಿಳಿಸುವ ಮೂಲಕ ಸಾಮಾನ್ಯ ಜನರು ಹಾಗೂ ರಾಜಕೀಯ ತಜ್ಞರನ್ನು ಅಚ್ಚರಿಗೊಳಿಸಿದ್ದರು. ಈಗ ಎರಡು ರಾಜ್ಯಗಳ ವಿಧಾನಸಭಾ ಉಪುನಾವಣೆಯಲ್ಲಿ ಅವರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದ್ದು, ಬಿಎಸ್​ಪಿಯಲ್ಲಿ ಅವರ ಕ್ರಿಯಾಶೀಲತೆ ಮತ್ತೊಮ್ಮೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಎಸ್​ಪಿ ಶೂನ್ಯಕ್ಕೆ ಕುಸಿದಿದೆ, ಸೋಲಿಗೆ ಆಕಾಶ್​ ಹೊಣೆಯಾಗುವುದು ಮಾಯಾವತಿಗೂ ಇಷ್ಟವಿರಲಿಲ್ಲ ಎನ್ನುತ್ತಾರೆ ತಜ್ಞರು. ಆಕಾಶ್​ ಈಗಾಗಲೇ ಉತ್ತರ ಪ್ರದೇಶದ ಹೊರಗಿನ ಇತರೆ ರಾಜ್ಯಗಳಲ್ಲೂ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಈ ಬಾರಿಯ ತಂತ್ರವೆಂದರೆ ಮೊದಲು ಅವರನ್ನು ಇತರೆ ರಾಜ್ಯಗಳಲ್ಲಿ ಸಕ್ರಿಯಗೊಳಿಸಬೇಕು ನಂತರ ಕ್ರಮೇಣ ಅವರು ಯುಪಿಯಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ. 2027ರ ವಿಧಾನಸಭಾ ಚುನಾವಣೆಯ ವೇಳೆಗೆ ಸಂಪೂರ್ಣ ಸಿದ್ಧತೆಯೊಂದಿಗೆ ಅವರನ್ನು ಕಣಕ್ಕಿಳಿಸಬಹುದು.

ಆಕಾಶ್​ ಆನಂದ್​ ಅವರ ರಾಜಕೀಯ ಪ್ರವೇಶ ಏಳು ವರ್ಷಗಳ ಹಿಂದೆ ನಡೆದಿತ್ತು. ಆರಂಭದಲ್ಲಿ ಮಾಯಾವತಿಯವರು ಕೆಲವು ಸಭೆಗಳಲ್ಲಿ ಪರಿಚಯಿಸಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮಾಡಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ