Madhya Pradesh: ಯುವತಿಯಿಂದ ಮೊಬೈಲ್ ಕಸಿದುಕೊಂಡ ದುಷ್ಕರ್ಮಿಗಳು: ರಸ್ತೆಯ ಮೇಲೆ ಧರಧರನೆ ಎಳೆದೊಯ್ದು ಹೇಯಕೃತ್ಯ

|

Updated on: Jul 03, 2023 | 3:37 PM

ಯುವತಿಯೊಬ್ಬಳು ಮೊಬೈಲ್​​ನಲ್ಲಿ ದಾರಿಯುದ್ದಕ್ಕೂ ಮಾತನಾಡಿಕೊಂಡು ಹೋಗುತ್ತಿರುವಾಗ ಇಬ್ಬರು ದುಷ್ಕರ್ಮಿಗಳು ಹಿಂದೆಯಿಂದ ಬೈಕ್​​ನಲ್ಲಿ ಬಂದು ಯುವತಿಯ ಮೊಬೈಲ್​​ ಫೋನ್​​​ನ್ನು ಕಸಿದುಕೊಂಡು, ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಘಟನೆ ಮಧ್ಯಪ್ರವೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್: ದಾರಿಯಲ್ಲಿ ಮೊಬೈಲ್​​ನಲ್ಲಿ ಮಾತನಾಡಿಕೊಂಡು ಹೋಗುವವರು ಈ ವೀಡಿಯೊವನ್ನು ಒಮ್ಮೆ ನೋಡಲೇಬೇಕು, ದೇಶದಲ್ಲಿ ಇಂತಹ ಅದೆಷ್ಟೊ ಘಟನೆಗಳು ನಡೆಯುತ್ತಿದೆ, ಮಹಿಳೆಯರು ದಾರಿಯಲ್ಲಿ ಹೋಗುವಾಗ ತಮ್ಮ ವಸ್ತುಗಳ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂಬುದಕ್ಕೆ ಈ ವೀಡಿಯೊ ಉದಾಹರಣೆ. ಯುವತಿಯೊಬ್ಬಳು ಮೊಬೈಲ್​​ನಲ್ಲಿ ದಾರಿಯುದ್ದಕ್ಕೂ ಮಾತನಾಡಿಕೊಂಡು ಹೋಗುತ್ತಿರುವಾಗ ಇಬ್ಬರು ದುಷ್ಕರ್ಮಿಗಳು ಹಿಂದೆಯಿಂದ ಬೈಕ್​​ನಲ್ಲಿ ಬಂದು ಯುವತಿಯ ಮೊಬೈಲ್​​ ಫೋನ್​​​ನ್ನು ಕಸಿದುಕೊಂಡು, ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಘಟನೆ ಮಧ್ಯಪ್ರವೇಶದ ಇಂದೋರ್‌ನಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಸಿಟಿವಿ ಫೂಟೇಜ್ ವೈರಲ್ ಆಗಿದೆ. ಇಬ್ಬರು ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಮೊಬೈಲ್ ಫೋನ್ ಕಸಿದುಕೊಳ್ಳುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಈ ದೃಶ್ಯಾವಳಿ ಜೂನ್ 30ರಂದು ಸೆರೆಯಾಗಿದೆ ಎಂದು ಹೇಳಲಾಗಿದೆ.

ಈ ವೀಡಿಯೋದಲ್ಲಿ ಯುವತಿ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಮೇಲ್ನೋಟಕ್ಕೆ ಆಕೆಯನ್ನು ಹಿಂಬಾಲಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಬಂದು ಆಕೆಯ ಫೋನ್ ಕಸಿದುಕೊಂಡಿದ್ದಾರೆ. ಈ ಸಮಯದಲ್ಲಿ ತನ್ನ ಮೊಬೈಲ್ ಫೋನ್​​ನ್ನು ಉಳಿಸಿಕೊಳ್ಳಲು ಆಕೆ ಪ್ರಯತ್ನಪಟ್ಟಿದ್ದಾಳೆ, ಆದರೆ ಕಳ್ಳರು ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದು. ಎಳೆದು ರಭಸಕ್ಕೆ ಯುವತಿ ರಸ್ತೆಯ ಮೇಲೆ ಬೀಳುತ್ತಿರುವ ಭಯಾನಕ ದೃಶ್ಯವನ್ನು ಈ ವೀಡಿಯೊದಲ್ಲಿ ನೋಡಬಹುದು.

ಇದನ್ನೂ ಓದಿ:Madhya Pradesh Crime: ಕಲ್ಲಿನಿಂದ ತಲೆ ಒಡೆದು, ಚಾಕುವಿನಿಂದ ಕತ್ತು ಸೀಳಿ ಮೂವರು ಅಪ್ರಾಪ್ತ ಬಾಲಕರಿಂದ ಬರ್ಬರ ಹತ್ಯೆ

ಬೈಕ್​​​​ನಲ್ಲಿ ಬಂದ ಇಬ್ಬರ ಪೈಕಿ ಹಿಂದೆ ಕೂತಿದ್ದ ವ್ಯಕ್ತಿ ಫೋನ್ ಕಸಿದುಕೊಂಡಿದ್ದು. ಯಾರಿಗೂ ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು ಎಂದು ಹೇಳಲಾಗಿದೆ. ಈ ಘಟನೆ ಇಂದೋರ್‌ನ ಹೈಕೋರ್ಟ್ ಕ್ರಾಸಿಂಗ್ ಪ್ರದೇಶದಿಂದ ನಡೆದಿದೆ ಎಂದು ವರದಿಯಾಗಿದೆ. ಹಗಲೊತ್ತು ಈ ಘಟನೆ ನಡೆದಿದ್ದು, ಜನಸಂದಣಿಯ ಪ್ರದೇಶವಾಗಿದ್ದರು ಈ ಕೃತ್ಯವನ್ನು ತಡೆಯಲಿಲ್ಲ ಮತ್ತು ಆಕೆ ಸಹಾಯ ಯಾರು ಬರಲಿಲ್ಲ.

ತುಕೋಗಂಜ್ ಪೊಲೀಸ್ ಠಾಣಾಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಹಿಡಿಯಲು ಯತ್ನಿಸುತ್ತಿದ್ದಾರೆ, ಇದುವರೆಗೂ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಇತರೆ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Mon, 3 July 23