ಇದಕಿಂತ ದುರಂತ ಮತ್ತೊಂದಿಲ್ಲ, ವೀಕ್ಷಿಸಿ: ರೈಲಿನಲ್ಲಿ ಎರಡು ಬೋಗಿಗಳ ಜಾಯಿಂಟ್ ಮೇಲೆ ಮಗುವಿನೊಂದಿಗೆ ಕುಳಿತು ಮಹಿಳೆ ಅಪಾಯಕಾರಿ ಪ್ರಯಾಣ
ಈ ವಿಡಿಯೋದಲ್ಲಿ ರೈಲು ಅತಿವೇಗದಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಮಹಿಳೆ ಸ್ವಲ್ಪ ಎಚ್ಚರ ತಪ್ಪಿದರೂ, ಮಗುವಿನೊಂದಿಗೆ ಅವಳು ಜಾರಿಬೀಳುವ ಸಾಧ್ಯತೆಯಿದೆ. ಅದಕಿಂತ ದುರಂತ ಮತ್ತೊಂದಿಲ್ಲ ಅಲ್ಲವೇ!?
ರೈಲು ಅಪಘಾತಗಳ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ರೈಲು ಅಪಘಾತಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ನೀವೂ ನೋಡಿರುತ್ತೀರಿ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಹಲವು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿರುತ್ತದೆ. ಅಲ್ಲದೆ, ಸುರಕ್ಷಿತ ಪ್ರಯಾಣಕ್ಕಾಗಿ ರೈಲು ನಿಲ್ದಾಣಗಳಲ್ಲಿ ನಿಯಮಿತ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಸೂಚಿಸುತ್ತದೆ. ಆದರೆ, ಕೆಲ ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರಯಾಣ ಮಾಡುತ್ತಿದ್ದಾರೆ. ಅಂತಹ ಒಂದು ಮಾರಣಾಂತಿಕ ರೈಲು ಸವಾರಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ವೈರಲ್ ಆಗಿದೆ.
ವಿಡಿಯೋ ನೋಡಿದವರೆಲ್ಲ ಶಾಕ್ ಆಗಿದ್ದಾರೆ. ಏಕೆಂದರೆ.. ಜೋರಾಗಿ ಸಂಚರಿಸುತ್ತಿರುವ ರೈಲಿನ ಎರಡು ಕೋಟ್ ಜಾಯಿಂಟ್‌ಗಳ ಮೇಲೆ (ಕಪಲಿಂಗ್ ಮೇಲೆ) ಜಸ್ಟ್ ಕುಳಿತುಕೊಳ್ಳುವುದನ್ನು ಊಹಿಸಲು ಸಾಧ್ಯವಾ? ಅಷ್ಟೇ ಅಲ್ಲ, ರೈಲು ವೇಗವಾಗಿ ಸಂಚರಿಸುತ್ತಿರುವಾಗ ಅದರ ಕಪಲಿಂಗ್ ಮೇಲೆ ಕುಳಿತು ಅದೂ ಎಳೆ ಕಂದಮ್ಮನ್ನು ಮಡಿಲಲ್ಲಿ ಹಾಕಿಕೊಂಡು ಸಂಚರಿಸುವುದನ್ನು ಕಂಡಿದ್ದೀರಾ? ಅಂತಹ ವಿಡಿಯೋವೊಂದು ಸದ್ಯ ವೈರಲ್ ಆಗಿದ್ದು, ಮಹಿಳೆಯೊಬ್ಬರು ಅಪಾಯಕಾರಿ ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿ ಆಘಾತಕಾರಿ ವಿಷಯವೆಂದರೆ ಮಹಿಳೆಯು ತನ್ನ ತೋಳುಗಳಲ್ಲಿ ಮಗುವನ್ನು ಹೊತ್ತುಕೊಂಡು ಸಾಗುತ್ತಿರುವುದು ಕಂಡುಬಂದಿದೆ.
This woman did not have money to buy train ticket.
Shameful☹️☹️#BusAccident #CandyCrush #PasooriNu #Tiger3 #MalaikaArora #Wagner #AskSRK #Glastonbury #mumbairain #WorldDrugDay pic.twitter.com/SMUQZGZffl
— Zahid Hasan (@ZahidHa68) June 26, 2023
ರೈಲ್ವೇ ಇಲಾಖೆ ಹಲವು ಆದೇಶಗಳನ್ನು ಹೊರಡಿಸಿದ್ದರೂ ಕೆಲ ಪ್ರಯಾಣಿಕರು ಇಂತಹ ನಿರ್ಲಕ್ಷ್ಯ ತೋರುವ ವಿಡಿಯೋ ಇದೀಗ ವೈರಲ್ ಆಗಿದೆ. ಇಂತಹ ನಿರ್ಲಕ್ಷ್ಯವು ಆಗಾಗ್ಗೆ ದುರಂತಗಳಲ್ಲಿ ಪರ್ಯವಸಾನವಾಗುತ್ತದೆ. ರೈಲಿನ ಎರಡು ಬೋಗಿಗಳ ಜಾಯಿಂಟ್‌ನಲ್ಲಿ ಮಹಿಳೆಯೊಬ್ಬರು ಮಗುವನ್ನು ತೊಡೆಯ ಮೇಲೆ ಹೊತ್ತು ಪ್ರಯಾಣಿಸುತ್ತಿದ್ದ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಓಡಿಹೋದ ಪತ್ನಿ -ಅದೇ ಬೇಸರದಲ್ಲಿ ತಾಯಿಯ ಸಮಾಧಿ ಪಕ್ಕ ಗಂಡನ ಆತ್ಮಹತ್ಯೆ, ಹೆಂಡತಿ ವಿರುದ್ಧ ಪ್ರಕರಣ
ಈ ಮಹಿಳೆ ಎರಡು ರೈಲು ಬೋಗಿಗಳ ಜಾಯಿಂಟ್ ಮೇಲೆ ತನ್ನ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಕುಳಿತಿದ್ದಾಳೆ. ಒಬ್ಬ ಮಹಿಳೆ ಒಂದು ಕೈಯಲ್ಲಿ ಮಗುವನ್ನು ಮತ್ತು ಇನ್ನೊಂದು ಕೈಯಲ್ಲಿ ರೈಲ್ವೆ ಕಂಬಿಯನ್ನು ಹಿಡಿದಿದ್ದಾಳೆ. ಈ ವಿಡಿಯೋದಲ್ಲಿ ರೈಲು ಅತಿವೇಗದಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಮಹಿಳೆ ಸ್ವಲ್ಪ ಎಚ್ಚರ ತಪ್ಪಿದರೂ, ಮಗುವಿನೊಂದಿಗೆ ಅವಳು ಜಾರಿಬೀಳುವ ಸಾಧ್ಯತೆಯಿದೆ. ಅದಕಿಂತ ದುರಂತ ಮತ್ತೊಂದಿಲ್ಲ ಅಲ್ಲವೇ!?
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ