16 ವರ್ಷಗಳಿಂದ ಗಂಡನ ಮನೆಯಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

ಗಂಡನ ಮನೆಯಲ್ಲಿ 16 ವರ್ಷಗಳಿಂದ ಬಂಧಿಯಾಗಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಮಧ್ಯಪ್ರದೇಶದ ನರಸಿಂಗ್‌ಪುರದ ರಾನು ಅವರ ತಂದೆ ಕಿಶನ್ ಲಾಲ್ ಸಾಹು ಅವರು ನೀಡಿದ ದೂರಿನ ನಂತರ ಮಹಿಳೆ ರಾನು ಸಾಹು ಅವರನ್ನು ರಕ್ಷಿಸಲಾಗಿದೆ ಎಂದು ಜಹಾಂಗೀರಾಬಾದ್ ಮಹಿಳಾ ಠಾಣಾ ಪೊಲೀಸ್ ಠಾಣೆಯ ಉಸ್ತುವಾರಿ ಶಿಲ್ಪಾ ಕೌರವ್ ಮಾಹಿತಿ ನೀಡಿದ್ದಾರೆ.

16 ವರ್ಷಗಳಿಂದ ಗಂಡನ ಮನೆಯಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ
ಮಹಿಳೆ-ಸಾಂದರ್ಭಿಕ ಚಿತ್ರ
Image Credit source: Amarujala.com

Updated on: Oct 06, 2024 | 8:46 AM

ಗಂಡನ ಮನೆಯಲ್ಲಿ 16 ವರ್ಷಗಳಿಂದ ಬಂಧಿಯಾಗಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಮಧ್ಯಪ್ರದೇಶದ ನರಸಿಂಗ್‌ಪುರದ ರಾನು ಅವರ ತಂದೆ ಕಿಶನ್ ಲಾಲ್ ಸಾಹು ಅವರು ನೀಡಿದ ದೂರಿನ ನಂತರ ಮಹಿಳೆ ರಾನು ಸಾಹು ಅವರನ್ನು ರಕ್ಷಿಸಲಾಗಿದೆ ಎಂದು ಜಹಾಂಗೀರಾಬಾದ್ ಮಹಿಳಾ ಠಾಣಾ ಪೊಲೀಸ್ ಠಾಣೆಯ ಉಸ್ತುವಾರಿ ಶಿಲ್ಪಾ ಕೌರವ್ ಮಾಹಿತಿ ನೀಡಿದ್ದಾರೆ.

ರಾಣು ಅವರು 2006ರಲ್ಲಿ ಮದುವೆಯಾಗಿದ್ದರು, 2008 ರಿಂದ ಆಕೆಯ ತಂದೆಯಾಗಲಿ ಅಥವಾ ಇನ್ಯಾರಿಗೂ ಆಕೆಯ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ, ಆಕೆ 16 ವರ್ಷಗಳಿಂದ ಮನೆಯಿಂದ ಹೊರಗೂ ಕಾಲಿಡಲೂ ಬಿಡದೆ ಮನೆಯಲ್ಲೇ ಬಂಧಿಯಾಗಿದ್ದಳು.

ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ರಾಣುವನ್ನು ತನ್ನ ಮಗ ಹಾಗೂ ಮಗಳಿಂದ ಕೂಡ ದೂರವಿಟ್ಟಿದ್ದಾರೆ ಎಂದು ಅವರ ತಂದೆ ಕಿಶನ್ ಲಾಲ್​ ತಿಳಿಸಿದ್ದಾರೆ.

ಮತ್ತಷ್ಟು ಓದಿ: Shocking News: 22 ವರ್ಷದ ಸೇಡು; ಸಾಲ ಮಾಡಿ ಟ್ರಕ್ ಖರೀದಿಸಿ ತಂದೆಯ ಹಂತಕರನ್ನು ಕೊಂದ ಮಗ

ರಾಣುವಿನ ಅತ್ತೆಯ ಅಕ್ಕಪಕ್ಕದ ಮನೆಯವರು ಕಿಶನ್ ಲಾಲ್ ಅವರಿಗೆ ಕರೆ ಮಾಡಿ ಆಕೆಯ ಮನೆಯಲ್ಲಿ ಪತಿ ಸೇರಿದಂತೆ ಹಲವರು ಕಿರುಕುಳ ನೀಡುತ್ತಿದ್ದಾರೆ, ಆಕೆಯ ಸ್ಥಿತಿ ತುಂಬಾ ಹದಗೆಡುತ್ತಿದೆ ನೀವು ಆಕೆಯನ್ನು ಕರೆದುಕೊಂಡು ಹೋಗಿ ಎಂದು ಕರೆ ಮಾಡಿದ್ದರು. ನಂತರ ಕಿಶನ್ ಅವರು ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ, ಪೊಲೀಸ್ ಸಿಬ್ಬಂದಿ ತಂಡವು ಎನ್‌ಜಿಒ ಸಹಾಯದಿಂದ ರಾಣುವನ್ನು ರಕ್ಷಿಸಿತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ