Shocking News: 22 ವರ್ಷದ ಸೇಡು; ಸಾಲ ಮಾಡಿ ಟ್ರಕ್ ಖರೀದಿಸಿ ತಂದೆಯ ಹಂತಕರನ್ನು ಕೊಂದ ಮಗ
ಅಪ್ಪನ ಸಾವಿಗೆ ಕಾರಣರಾದವರನ್ನು ಕೊಲ್ಲಬೇಕೆಂದು 22 ವರ್ಷಗಳು ಕಾದಿದ್ದ ಮಗ ಅದಕ್ಕಾಗಿ ಸಾಲ ಮಾಡಿ ಟ್ರಕ್ ಖರೀದಿಸಿದ್ದ. ಅದೇ ಟ್ರಕ್ನಿಂದ ಅಪ್ಪನ ಹಂತಕರನ್ನು ಕೊಂದಿರುವ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಈ ಕತೆ ಕೇಳಿದರೆ ನಿಮಗೆ ಆಶ್ಚರ್ಯವಾಗದೇ ಇರಲು ಸಾಧ್ಯವೇ ಇಲ್ಲ.
ಅಹಮದಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಅಹಮದಾಬಾದ್‌ನ ಬೋಡಕ್‌ದೇವ್‌ನಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯ ಕೊಲೆಗಾರರನ್ನು ಕೊಲ್ಲಲು 22 ವರ್ಷಗಳ ಕಾಲ ಕಾದಿದ್ದ. ಇದೀಗ ತನ್ನ ತಂದೆಯ ಕೊಲೆಗಾರನ ಮೇಲೆ ಟ್ರಕ್ ಹರಿಸಿ ಕೊಂದಿದ್ದಾನೆ. ಆರೋಪಿಯನ್ನು ಗೋಪಾಲ್ ಸಿಂಗ್ ಭಾಟಿ ಎಂದು ಗುರುತಿಸಲಾಗಿದ್ದು, ಆತನ ತಂದೆಯನ್ನು ಇದೇ ರೀತಿ 22 ವರ್ಷದ ಹಿಂದೆ ಕೊಲೆ ಮಾಡಲಾಗಿತ್ತು. ಆಗ ಆತನಿಗೆ ಕೇವಲ ಎಂಟು ವರ್ಷವಾಗಿತ್ತು.
22 ವರ್ಷದ ಹಿಂದಿನ ಸೇಡನ್ನು ಈಗ ತೀರಿಸಿಕೊಂಡಿರುವ ಗೋಪಾಲ್ ತನ್ನ ತಂದೆಯನ್ನು ಕೊಲೆ ಮಾಡಿದವರನ್ನು ಅದೇ ರೀತಿಯಲ್ಲಿ ಕೊಲೆ ಮಾಡಿದ್ದಾನೆ. ಕೊಲೆಯಾದ 50 ವರ್ಷದ ನಖತ್ ಸಿಂಗ್ ಭಾಟಿ ಮೂಲತಃ ಜೈಸಲ್ಮೇರ್‌ನವರು. ಅವರು ತಾಲ್ತೇಜ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ನಖತ್ ತನ್ನ ಬೈಸಿಕಲ್‌ನಲ್ಲಿ ಹೋಗುತ್ತಿದ್ದಾಗ ಗೋಪಾಲ್ ಚಲಾಯಿಸುತ್ತಿದ್ದ ಟ್ರಕ್ ಅವರ ಮೇಲೆ ಹರಿದಿದೆ. ಇದು ಮೇಲ್ನೋಟಕ್ಕೆ ಅಪಘಾತದಂತೆ ಕಂಡುಬಂದಿತ್ತು.
ಇದನ್ನೂ ಓದಿ: ಬಯಲಾಯ್ತು ಬೆಂಗಳೂರು ಮಹಾಲಕ್ಷ್ಮೀ ಕೊಲೆ ರಹಸ್ಯ: ಪ್ರಿಯಕರ ಮುಕ್ತಿರಂಜನ್ ಆಕೆಯ ದೇಹವನ್ನು 57 ಪೀಸ್ ಮಾಡಿದ್ದೇಕೆ?
ಆದರೆ, ಹೆಚ್ಚಿನ ತನಿಖೆಯಿಂದ ಇದು ಪೂರ್ವಯೋಜಿತ ಸೇಡಿನ ಕೃತ್ಯ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಭಾಟಿ ಹಗಲು ಹೊತ್ತಿನಲ್ಲಿ ತನ್ನ ತಂದೆಯ ಕೊಲೆಗಾರನನ್ನು ಹಿಂದಿನಿಂದ ಟ್ರಕ್ನಲ್ಲಿ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿರುವುದನ್ನು ತೋರಿಸುತ್ತದೆ.
Son Seeks Revenge: 22 Years After Father’s Passing, a Tragic Cycle of Violence
On Monday, a 60-year-old man was riding his bicycle near the Jnan Baug Party Plot in Bodakdev when a Bolero driver collided with him, resulting in a tragic demise. #Ahmedabad pic.twitter.com/ldtZKcurYU
— Our Ahmedabad (@Ourahmedabad1) October 4, 2024
ಪೋಲೀಸರ ಪ್ರಕಾರ, 2002ರಲ್ಲಿ ಜೈಸಲ್ಮೇರ್‌ನಲ್ಲಿ ಗೋಪಾಲ್ ಅವರ ತಂದೆ ಹರಿ ಸಿಂಗ್ ಭಾಟಿ ಅವರನ್ನು ಟ್ರಕ್ ಹತ್ತಿಸಿ ಸಾಯಿಸಲಾಯಿತು. ಈ ಕೃತ್ಯಕ್ಕಾಗಿ ನಖತ್ ಮತ್ತು ಅವರ ನಾಲ್ವರು ಸಹೋದರರನ್ನು ಅಪರಾಧಿ ಎಂದು ಘೋಷಿಸಲಾಯಿತು. ಈ ಕೊಲೆಯ ಅಪರಾಧಕ್ಕಾಗಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅದಾದ ಮೇಲೆ ಅವರು ಬಿಡುಗಡೆಯಾಗಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 4 ನೇ ತರಗತಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ; ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಗೋಪಾಲ್ ಕಾಯುತ್ತಿದ್ದ. ಈ ಘಟನೆ ನಡೆಯುವ ಒಂದು ವಾರದ ಮೊದಲು ಗೋಪಾಲ್ ಅವರು 8 ಲಕ್ಷ ರೂಪಾಯಿಗೆ ಪಿಕಪ್ ಟ್ರಕ್ ಖರೀದಿಸಿದ್ದರು. ಮುಂಗಡ ಪಾವತಿಯಾಗಿ 1.25 ಲಕ್ಷ ರೂ. ಪಾವತಿಸಿ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದಿದ್ದರು. ಗೋಪಾಲ್ ಅವರ ಮೊಬೈಲ್ ದಾಖಲೆಗಳ ಸಾಕ್ಷ್ಯಾಧಾರಗಳ ಪ್ರಕಾರ, ಕಳೆದ ವಾರದಲ್ಲಿ ಅವರು ನಖತ್ ನಿವಾಸಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರು. ಗೋಪಾಲ್ ದಾಳಿಗೆ ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ, ನಖತ್ ಮೇಲೆ ಟ್ರಕ್ ಓಡಿಸಿ ಕೊಂದ ನಂತರ, ಗೋಪಾಲ್ ಪರಾರಿಯಾಗಲು ಪ್ರಯತ್ನಿಸಿದನು. ಆದರೆ ಅಪರಾಧದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪೊಲೀಸರು ಆತನನ್ನು ಬಂಧಿಸಿದರು. ಆರಂಭದಲ್ಲಿ ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣವಾದ ಆರೋಪ ಹೊರಿಸಲಾಗಿತ್ತು. ಆದರೆ ಇದೀಗ ಆತ ಕೊಲೆ ಆರೋಪ ಎದುರಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Sat, 5 October 24