2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಸೆಂಗೋಲ್ ಹಸ್ತಾಂತರಿಸಲಿರುವ ಮಧುರೈನ ಅಧೀನಂ ಪೀಠಾಧಿಪತಿ ಮಾತು

|

Updated on: May 26, 2023 | 11:02 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಜಾಗತಿಕವಾಗಿ ಮೆಚ್ಚುಗೆ ಗಳಿಸುತ್ತಿರುವ ನಾಯಕ. ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. 2024ರಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸೆಂಗೋಲ್ ಹಸ್ತಾಂತರಿಸಿದ ಮಧುರೈನ ಅಧೀನಂನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ ಹೇಳಿದ್ದಾರೆ.

2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಸೆಂಗೋಲ್ ಹಸ್ತಾಂತರಿಸಲಿರುವ ಮಧುರೈನ ಅಧೀನಂ ಪೀಠಾಧಿಪತಿ ಮಾತು
ಮಧುರೈ ಅಧೀನಂ ಪೀಠಾಧಿಪತಿ ಹರಿಹರ ಸ್ವಾಮೀಜಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಜಾಗತಿಕವಾಗಿ ಮೆಚ್ಚುಗೆ ಗಳಿಸುತ್ತಿರುವ ನಾಯಕ. ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. 2024ರಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸೆಂಗೋಲ್ ಹಸ್ತಾಂತರಿಸಿದ ಮಧುರೈನ ಅಧೀನಂನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ ಹೇಳಿದ್ದಾರೆ. ಮೇ 28 ರಂದು ನೂತನ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಅಲ್ಲಿ ಈ ಸೆಂಗೋಲ್​ನ್ನು ಇರಿಸಲಾಗುತ್ತದೆ. ವಿಶ್ವ ನಾಯಕರು ನಮ್ಮ ಪ್ರಧಾನಿಯನ್ನು ಶ್ಲಾಘಿಸುತ್ತಿದ್ದಾರೆ, ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನೂತನ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಸೆಂಗೋಲ್ ಉಡುಗೊರೆ ನೀಡುತ್ತೇನೆ ಎಂದು ಹೇಳಿದರು.

ಮೇ 28 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ತಿರುವಾಡುತುರೈ ಅಧೀನಂ ಮಠದ 31 ಸದಸ್ಯರು ಎರಡು ಬ್ಯಾಚ್‌ಗಳಲ್ಲಿ ಚಾರ್ಟರ್ಡ್ ವಿಮಾನದ ಮೂಲಕ ನವದೆಹಲಿಗೆ ತಲುಪಲಿದ್ದಾರೆ. ಆಗಸ್ಟ್ 1947 ರಂದು, ಐತಿಹಾಸಿಕ ರಾಜದಂಡ ಸೆಂಗೊಲ್ ಅನ್ನು ಬ್ರಿಟಿಷರಿಂದ ಭಾರತಕ್ಕೆ ವರ್ಗಾಯಿಸಿದ ಸಂಕೇತವಾಗಿ ಸ್ವೀಕರಿಸಲಾಯಿತು.

ಮತ್ತಷ್ಟು ಓದಿ: New Parliament: ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಲಿದ್ದಾರೆ ಮಧುರೈ ಅಧೀನಂ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ

ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರ ಸೂಚಿಸುವ ಸ್ವಾತಂತ್ರ್ಯದ ಐತಿಹಾಸಿಕ ಸಂಕೇತವಾದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ತಿನೊಳಗೆ ಇರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಸಂಸತ್​ ಭವನ(Parliament)ದ ಉದ್ಘಾಟನಾ ಕಾರ್ಯಕ್ರಮ ಮೇ 28 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅದರ ಉದ್ಘಾಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?

ಈ ಸೆಂಗೋಲ್​ಗೆ ಅಗಾಧ ಮಹತ್ವವಿದೆ ಆಗಸ್ಟ್ 14, 1947 ರಂದು ರಾತ್ರಿ 10.45 ರ ಸುಮಾರಿಗೆ, ಪಂಡಿತ್ ನೆಹರು ಅವರು ತಮಿಳುನಾಡಿನಿಂದ ಈ ಸೆಂಗೋಲ್ ಅನ್ನು ಪಡೆದರು ಮತ್ತು ಹಲವಾರು ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಇದನ್ನು ಸ್ವಾತಂತ್ರ್ಯವನ್ನು ಸಾಧಿಸಿದ ಸಂಕೇತವಾಗಿ ಸ್ವೀಕರಿಸಿದರು.

ಚಿನ್ನದ ಈ ರಾಜದಂಡವು ಆಭರಣಗಳಿಂದ ಕೂಡಿತ್ತು, ಆ ಅವಧಿಯಲ್ಲಿ ಈ ಸೆಂಗೋಲ್​​ನ ಬೆಲೆ 15 ಸಾವಿರ ರೂ. ಎನ್ನಲಾಗಿತ್ತು. ಬ್ರಿಟಿಷರಿಂದ ಈ ದೇಶದ ಜನರಿಗೆ ಅಧಿಕಾರವನ್ನು ವರ್ಗಾಯಿಸಲಾಯಿತು ಎಂದು ಅವರು ಹೇಳಿದರು. ಇದನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಅದನ್ನು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:01 am, Fri, 26 May 23