Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?
ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರ ಸೂಚಿಸುವ ಸ್ವಾತಂತ್ರ್ಯದ ಐತಿಹಾಸಿಕ ಸಂಕೇತವಾದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ತಿನೊಳಗೆ ಇರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರ ಸೂಚಿಸುವ ಸ್ವಾತಂತ್ರ್ಯದ ಐತಿಹಾಸಿಕ ಸಂಕೇತವಾದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ತಿನೊಳಗೆ ಇರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನ(Parliament)ದ ಉದ್ಘಾಟನಾ ಕಾರ್ಯಕ್ರಮ ಮೇ 28 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅದರ ಉದ್ಘಾಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಸೆಂಗೋಲ್ಗೆ ಅಗಾಧ ಮಹತ್ವವಿದೆ ಆಗಸ್ಟ್ 14, 1947 ರಂದು ರಾತ್ರಿ 10.45 ರ ಸುಮಾರಿಗೆ, ಪಂಡಿತ್ ನೆಹರು ಅವರು ತಮಿಳುನಾಡಿನಿಂದ ಈ ಸೆಂಗೋಲ್ ಅನ್ನು ಪಡೆದರು ಮತ್ತು ಹಲವಾರು ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಇದನ್ನು ಸ್ವಾತಂತ್ರ್ಯವನ್ನು ಸಾಧಿಸಿದ ಸಂಕೇತವಾಗಿ ಸ್ವೀಕರಿಸಿದರು ಎಂದರು.
ಚಿನ್ನದ ಈ ರಾಜದಂಡವು ಆಭರಣಗಳಿಂದ ಕೂಡಿತ್ತು, ಆ ಅವಧಿಯಲ್ಲಿ ಈ ಸೆಂಗೋಲ್ನ ಬೆಲೆ 15 ಸಾವಿರ ರೂ. ಎನ್ನಲಾಗಿತ್ತು. ಬ್ರಿಟಿಷರಿಂದ ಈ ದೇಶದ ಜನರಿಗೆ ಅಧಿಕಾರವನ್ನು ವರ್ಗಾಯಿಸಲಾಯಿತು ಎಂದು ಅವರು ಹೇಳಿದರು. ಇದನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಅದನ್ನು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
PM Modi will dedicate the newly constructed building of Parliament to the nation on 28th May. A historical event is being revived on this occasion. The historic sceptre, ‘Sengol’, will be placed in new Parliament building. It was used on August 14, 1947, by PM Nehru when the… pic.twitter.com/NJnsdjNfrN
— ANI (@ANI) May 24, 2023
ಭಾರತೀಯ ಅದರಲ್ಲೂ ತಮಿಳು ಸಂಸ್ಕೃತಿಯಲ್ಲಿ ಸೆಂಗೋಲ್ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೋಲ್ಗೆ ಪ್ರಾಮುಖ್ಯತೆ ಇತ್ತು. ಈ ಸೆಂಗೋಲ್ನ್ನು ಹೊಸ ಸಂಸತ್ತಿನಲ್ಲಿ ಇಡಲಾಗುವುದು.
ಮತ್ತಷ್ಟು ಓದಿ: New Parliament Building Inauguration: ನೂತನ ಸಂಸತ್ ಭವನ ಉದ್ಘಾಟನೆ ಯಾವಾಗ? ದಿನಾಂಕ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ
ಹೊಸ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಸೆಂಗೋಲ್ ತೆಗೆದುಕೊಂಡು ಹೋಗುತ್ತಾರೆ ಮತ್ತು ಅದನ್ನು ಹೊಸ ಸಂಸತ್ ಭವನದಲ್ಲಿ ಇರಿಸುತ್ತಾರೆ. ಸೆಂಗೋಲ್ ಸ್ಥಾಪನೆಗೆ ಸಂಸತ್ ಭವನಕ್ಕಿಂತ ಸೂಕ್ತ ಮತ್ತು ಪವಿತ್ರ ಸ್ಥಳ ಮತ್ತೊಂದಿಲ್ಲ ಎಂದಿದ್ದಾರೆ.
Published On - 1:12 pm, Wed, 24 May 23