ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಛತ್ತೀಸ್‌ಗಢ ಸಿಎಂ ಅವರಿಗೂ ಕೇಳಲು ಬಯಸುತ್ತೇನೆ. ಮುಖ್ಯಮಂತ್ರಿಗೆ ಹಣ ತಲುಪಿದೆ ಎಂದು ಆರೋಪಿಗಳು ಹೇಳಿದ್ದರ ಬಗ್ಗೆ ತನಿಖೆ ನಡೆಸಬೇಕೆ? ಅಥವಾ ಬೇಡವೇ ಎಂದು ಭೂಪೇಶ್ ಬಘೇಲ್ ಅವರನ್ನು ಉದ್ದೇಶಿಸಿ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ನವದೆಹಲಿ, ನವೆಂಬರ್ 6: ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ರಾಜಕೀಯದ ಕಾವು ಹೆಚ್ಚಾಗಿದ್ದು, ಛತ್ತೀಸ್ಗಢದಲ್ಲಂತೂ (Chhattisgarh) ಮಹದೇವ್ ಬೆಟ್ಟಿಂಗ್ ಆ್ಯಪ್ (Mahadev betting app case) ಪ್ರಕರಣದ ದೊಡ್ಡ ಸದ್ದು ಮಾಡುತ್ತಿದೆ. ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ಅಲ್ಲಿನ ಸಿಎಂ ಭೂಪೇಶ್ ಬಘೇಲ್ (Bhupesh Baghel) 508 ಕೋಟಿ ರೂ. ಹಣ ಪಡೆದ ಆರೋಪಕ್ಕೆ ಸಂಬಂಧಿಸಿ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮಧ್ಯೆ ವಾಕ್ಸಮರ ನಡೆದಿದೆ. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕೂಡ ಸಿಎಂ ಭೂಪೇಶ್ ಬಘೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನಿನ್ನೆ (ಭಾನುವಾರ) ವಿವರವಾದ ಹೇಳಿಕೆ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಯು ಛತ್ತೀಸ್‌ಗಢ ಸಿಎಂಗೆ 5 ಕೋಟಿ ರೂ. ತಲುಪಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮುಂದುವರಿದು, ಆ ಬೆಟ್ಟಿಂಗ್ ಆ್ಯಪ್ ಪ್ರಚಾರಕರು ಭೂಪೇಶ್ ಬಘೇಲ್ ಅವರಿಗೆ ಹಣ ನೀಡಿದ್ದಾರೆ. ಮೊದಲನೆಯದಾಗಿ ಈ ಪ್ರಕರಣದ ಆರೋಪಿಗಳು 5 ಕೋಟಿ ರೂ. ಕೊಟ್ಟಿದ್ದಾರೆ ಎಂಬ ಆರೋಪವಿದೆ. ನಂತರ ಅದು 500 ಕೋಟಿಗೆ ಬದಲಾಯಿತು ಎಂದು ಜೋಶಿ ಹೇಳಿದ್ದಾರೆ.
ಈ ಪ್ರಕರಣದ ತನಿಖೆಯಾಗಬೇಕೇ? ಅಥವಾ ಇಲ್ಲವೇ? ಜಾರಿ ನಿರ್ದೇಶನಾಲಯ ಹೇಳಿಕೆ ಏನು? ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಯಾವ ರೀತಿಯ ಬೇಡಿಕೆಯನ್ನು ಇಡುತ್ತಿದೆ? ಯಾವುದೇ ಭ್ರಷ್ಟಾಚಾರ ಅಥವಾ ಹಗರಣದ ತನಿಖೆ ನಡೆಸದಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಲಿದ್ದಾರೆಯೇ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು. ಚುನಾವಣಾ ಆಯೋಗದ ಮುಂದೆ ಕಾಂಗ್ರೆಸ್ನವರು ಹೇಳಲು ಹೊರಟಿರುವುದು ಏನನ್ನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನಗಷ್ಟೇ ಅಲ್ಲ, ಇದು ಜನಸಾಮಾನ್ಯರಿಗೂ ಅರ್ಥವಾಗುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ.
#WATCH | Jaipur, Rajasthan: On Mahadev betting app case, Union Minister Pralhad Joshi says, “Our colleague Smirit Irani gave a detailed statement on it yesterday. The accused that is caught has said that he has delivered Rs. 5 crores to the (Chhattisgarh) CM. He alleged that the… pic.twitter.com/Vbp7laQbIa
— ANI (@ANI) November 6, 2023
ಛತ್ತೀಸ್‌ಗಢ ಸಿಎಂ ಅವರಿಗೂ ಅದನ್ನೇ ಕೇಳಲು ಬಯಸುತ್ತೇನೆ. ಮುಖ್ಯಮಂತ್ರಿಗೆ ಹಣ ತಲುಪಿದೆ ಎಂದು ಆರೋಪಿಗಳು ಹೇಳಿದ್ದರ ಬಗ್ಗೆ ತನಿಖೆ ನಡೆಸಬೇಕೆ? ಅಥವಾ ಬೇಡವೇ ಕೇಂದ್ರ ಸಚಿವರು ಭೂಪೇಶ್ ಬಘೇಲ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಪಡೆದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್: ಇ.ಡಿ ಗಂಭೀರ ಆರೋಪ
ಮಹದೇವ್ ಆ್ಯಪ್‌ನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಶುಭಂ ಸೋನಿ (ಅಲಿಯಾಸ್ ಪಿಂಟು) ತನಗೆ 5.39 ಕೋಟಿ ರೂಪಾಯಿ ನಗದು ನೀಡಿದ್ದರು ಮತ್ತು ಇದನ್ನು ಛತ್ತೀಸ್ಗಢದ ಮುಖ್ಯಮಂತ್ರಿಯವರ ಸಹವರ್ತಿಗಳಿಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದರು ಎಂದು ವಿಚಾರಣೆಯ ಸಮಯದಲ್ಲಿ ‘ಕ್ಯಾಷ್ ಕೊರಿಯರ್’ನ ಅಸೀಮ್ ದಾಸ್ ಹೇಳಿಕೆ ನೀಡಿದ್ದ. ಆತನನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿತ್ತು.
ಬಘೇಲ್ ಅವರು 508 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿತ್ತು. ಜತೆಗೆ, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ ಎಂದೂ ಹೇಳಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ