ಮಹಾಂತ ನರೇಂದ್ರ ಗಿರಿ ಸಾವಿನ ಕೇಸ್​ ತನಿಖೆಗೆ ಸಿಬಿಐಗೆ ಶಿಫಾರಸು ಮಾಡಿದ ಯೋಗಿ ಆದಿತ್ಯನಾಥ್​; ಇನ್ನೊಬ್ಬನ ಬಂಧನ

| Updated By: Lakshmi Hegde

Updated on: Sep 23, 2021 | 9:31 AM

Mahant Narendra Giri: ಭಾರತದ ಸಾಧುಗಳ ಅತಿದೊಡ್ಡ ಸಂಘಟನೆಯಾದ ಆಖಾಡ ಪರಿಷತ್​ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ ಶವ, ಅಲಹಾಬಾದ್​​ನ ಬಾಘಂಬರಿ ಮಠದ ಕೋಣೆಯಲ್ಲಿ ಸೋಮವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮಹಾಂತ ನರೇಂದ್ರ ಗಿರಿ ಸಾವಿನ ಕೇಸ್​ ತನಿಖೆಗೆ ಸಿಬಿಐಗೆ ಶಿಫಾರಸು ಮಾಡಿದ ಯೋಗಿ ಆದಿತ್ಯನಾಥ್​; ಇನ್ನೊಬ್ಬನ ಬಂಧನ
ಮಹಾಂತ ನರೇಂದ್ರ ಗಿರಿ ಸ್ವಾಮೀಜಿ
Follow us on

ನೊಯ್ಡಾ: ಅಖಿಲ ಭಾರತೀಯ ಆಖಾಡ ಪರಿಷದ್​ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ (Mahant Narendra Giri Death) ಅಂತಿಮ ಸಂಸ್ಕಾರ ಬಾಘಂಬರಿ ಮಠದ ಆವರಣದಲ್ಲಿ ನಡೆದಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸ (Uttar Pradesh Police)ರು ಇನ್ನೊಬ್ಬನನ್ನು ಬಂಧಿಸಿದ್ದಾರೆ.  ಮಹಾಂತ ನರೇಂದ್ರ ಗಿರಿಯವರ ಇಬ್ಬರು ಶಿಷ್ಯರನ್ನು ಈಗಾಗಲೇ ಪೋಲೀಸರು ಬಂಧಿಸಿದ್ದು, ಇದೀಗ ಸಂದೀಪ್​ ತಿವಾರಿ ಎಂಬಾತನನ್ನೂ ವಶಕ್ಕೆ ಪಡೆದಿದ್ದಾಗಿ ಜಾರ್ಜ್​ ಟೌನ್​ ಠಾಣೆ ಪೊಲೀಸ್​ ಅಧಿಕಾರಿ ಮಹೇಶ್​ ಸಿಂಗ್​ ಹೇಳಿದ್ದಾರೆ.  

ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣ ಒಂದು ಕಗ್ಗಂಟಾಗಿದ್ದು, ಬುಧವಾರ ರಾತ್ರಿ ಯೋಗಿ ಆದಿತ್ಯನಾಥ್​ ಅವರು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಇಲಾಖೆ ಟ್ವೀಟ್ ಮಾಡಿ ದೃಢಪಡಿಸಿದೆ. ಇನ್ನು ಮಹಾಂತ ನರೇಂದ್ರ ಗಿರಿಯವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ್ದ ಯೋಗಿ ಆದಿತ್ಯನಾಥ್​, ಹಲವು ಸಾಕ್ಷಿಗಳು ದೊರೆತಿವೆ. ಆರೋಪಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದರು.

ಭಾರತದ ಸಾಧುಗಳ ಅತಿದೊಡ್ಡ ಸಂಘಟನೆಯಾದ ಆಖಾಡ ಪರಿಷತ್​ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ ಶವ, ಅಲಹಾಬಾದ್​​ನ ಬಾಘಂಬರಿ ಮಠದ ಕೋಣೆಯಲ್ಲಿ ಸೋಮವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಾಮೀಜಿಯವರ ಇಬ್ಬರು ಶಿಷ್ಯಂದಿರಾದ ಆನಂದ ಗಿರಿ ಮತ್ತ ಆಧ್ಯ ಪ್ರಸಾದ್​ ತಿವಾರಿ ಎಂಬುವರನ್ನು ಪೊಲೀಸರು ಬಂಧಿಸಿ ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಅವರಿಬ್ಬರಿಗೂ ಸದ್ಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅದರಲ್ಲೂ ಆನಂದ್ ಗಿರಿಯೇ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದಿಸಿದ್ದು ಎಂಬ ಆರೋಪ ಬಲವಾಗಿದೆ.  ಮಹಾಂತ ಗಿರಿ ಸಾವಿಗೆ ಸಂಬಂಧಪಟ್ಟಂತೆ ಡೆತ್​ನೋಟ್​, ವಿಡಿಯೋಗಳೆಲ್ಲ ಸಿಕ್ಕಿದೆ.  ಅದರಲ್ಲೂ ಡೆತ್​ ನೋಟ್​ನಲ್ಲಿ ಆನಂದ ಗಿರಿ ಹೆಸರೇ ಉಲ್ಲೇಖವಾಗಿದ್ದು, ಆತ ನನಗೆ ಬ್ಲ್ಯಾಕ್​ ಮೇಲ್​ ಮಾಡುತ್ತಿರುವುದಾಗಿ ಆರೋಪಿಸಲಾಗಿದೆ.

ಎಸ್​ಐಟಿ ರಚನೆಯಾಗಿತ್ತು
ನರೇಂದ್ರ ಗಿರಿ ಸಾವಿನ ತನಿಖೆ ನಡೆಸುವ ಸಂಬಂಧ 18 ಸಿಬ್ಬಂದಿಯುಳ್ಳ ಎಸ್​ಐಟಿಯನ್ನು ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ಪ್ರತಿಪಕ್ಷಗಳು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದವು. ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಿಬಿಐಗೆ ಶಿಫಾರಸ್ಸು ಮಾಡಿದ್ದಾರೆ.

ಇದನ್ನೂ ಓದಿ: ಮಹಾಂತ ನರೇಂದ್ರ ಗಿರಿ ಸಾವಿಗೆ ಬ್ಲ್ಯಾಕ್​ಮೇಲ್ ತಿರುವು ಕೊಟ್ಟ ಮರಣಪತ್ರ ಬರೆದವರು ಯಾರು? ಪತ್ರದಲ್ಲಿ ಏನಿದೆ?

ಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ

(Mahant Narendra Giri’s Death UP Chief Minister Yogi Adityanath Recommends CBI Probe)

Published On - 9:23 am, Thu, 23 September 21