
ಪುಣೆ, ಮೇ 26: ಈಗಿನ್ನು ಸರಿಯಾಗಿ ನಿಲ್ಲುವುದನ್ನು ಕಲಿತು, ತೊದಲು ಮಾತು ಕಲಿಯುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಬೇಸಿಗೆ ಶಿಬಿರದಲ್ಲಿ ಶಿಕ್ಷಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 45 ವರ್ಷದ ನೃತ್ಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಮನೆಗೆ ಹೋದ ಬಳಿಕ ತೀರಾ ನೋವಿನಿಂದ ಬಳಲುತ್ತಿತ್ತು, ಆಗ ಈ ಘಟನೆ ಬೆಳಕಿಗೆ ಬಂದಿದೆ. ಅದಕ್ಕೇನಾಗಿದೆ ಎಂದು ಹೇಳಲು ಕೂಡ ತಿಳಿಯುತ್ತಿಲ್ಲ.ಆಕೆಯ ಪೋಷಕರಿಗೆ ಘಟನೆಯ ಬಗ್ಗೆ ತಿಳಿದಾಗ, ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಪೊಲೀಸರು ಆತನನ್ನು ಹಿಡಿಯಲು ಹುಡುಕಾಟ ಆರಂಭಿಸಿದರು.
ಉಲ್ಲಾಸ್‌ನಗರ ಡಿಸಿಪಿ ಸಚಿನ್ ಗೋರ್ ಮತ್ತು ವಿಠ್ಠಲವಾಡಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅನಿಲ್ ಪಡ್ವಾಲ್ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಆತನ ಮನೆಯಿಂದ ಬಂಧಿಸಿದರು. ಮರುದಿನ ಆರೋಪಿಯನ್ನು ಉಲ್ಲಾಸ್‌ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.
ಮತ್ತಷ್ಟು ಓದಿ: ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಮತ್ತೊಂದು ಘಟನೆ
ಬಾಲಕಿಯನ್ನು 2 ತಿಂಗಳು ಬಂಧಿಸಿಟ್ಟು ಅತ್ಯಾಚಾರ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೊಂಬಿವಾಲಿಯಲ್ಲಿ 15 ವರ್ಷದ ಬಾಲಕಿಯನ್ನು ಎರಡು ತಿಂಗಳುಗಳ ಕಾಲ ಬಂಧಿಸಿ, ಪದೇ ಪದೇ ಅತ್ಯಾಚಾರವೆಸಗಿ, ಗರ್ಭಪಾತ ಮಾಡಿಸಲು ಒತ್ತಾಯಿಸಿರುವ ಘಟನೆ ವರದಿಯಾಗಿದೆ. ಆಕೆಯ ಕುಟುಂಬಕ್ಕೆ ಪರಿಚಿತ ವ್ಯಕ್ತಿಯೊಬ್ಬರು ವೇಶ್ಯಾವಾಟಿಕೆಗೆ ತೊಡಗುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಬ್ಬ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ, ಆದರೆ ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ತಿಲಕ್ ನಗರ ಪೊಲೀಸರು ದೊಂಬಿವಾಲಿಯ ಗ್ರಾಮೀಣ ಭಾಗದಲ್ಲಿರುವ ಮನೆಯ ಮೇಲೆ ದಾಳಿ ಮಾಡಿ ಆಕೆಯನ್ನು ರಕ್ಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.ಹತ್ತನೇ ತರಗತಿ ಪರೀಕ್ಷೆಯ ನಂತರ ಆಕೆ ತನ್ನ ತಾಯಿಯೊಂದಿಗೆ ಜಗಳವಾಡಿ ಮನೆಯಿಂದ ಹೊರಗೆ ಹೋದಾಗ, ಪ್ರಮುಖ ಆರೋಪಿ ಆಕೆಯನ್ನು ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ.
ನಂತರ ಅವನು ಅವಳನ್ನು ಎರಡು ತಿಂಗಳ ಕಾಲ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದನು. ಅವಳು ಗರ್ಭಿಣಿಯಾದಾಗ, ಗರ್ಭಪಾತಕ್ಕಾಗಿ ಇನ್ನೊಬ್ಬ ವ್ಯಕ್ತಿಯ ಬಳಿಗೆ ಕರೆದೊಯ್ದಿದ್ದ. ಮತ್ತೊಂದು ಕಡೆ ಆಕೆಯನ್ನು ಇರಿಸಿ ವೇಶ್ಯಾವಾಟಿಕೆಗೆ ದೂಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ