ನ್ಯಾಯಾಲಯಕ್ಕೆ ತಡವಾಗಿ ಬಂದಿದ್ದಕ್ಕೆ ಜಿಲ್ಲಾ ನ್ಯಾಯಾಧೀಶರು ಹುಲ್ಲು ಕತ್ತರಿಸುವ ಶಿಕ್ಷೆ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮನ್ವತ್ನಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದರು.
ಬೆಳಗ್ಗೆ 11 ಗಂಟೆಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು, ಆದರೆ ಅರ್ಧ ಗಂಟೆ ತಡವಾಗಿ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗಿದ್ದರು, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಅವರಿಗೆ ಹುಲ್ಲು ಕತ್ತರಿಸುವ ಶಿಕ್ಷೆ ನೀಡಿದ್ದಾರೆ.
ಎಸ್‌ಪಿ ಉಸ್ತುವಾರಿ ಯಶವಂತ್ ಕಾಳೆ ಅವರು ಖಚಿತಪಡಿಸಿದ್ದಾರೆ. ಕಾನ್‌ಸ್ಟೆಬಲ್‌ಗಳ ಹೇಳಿಕೆಗಳೊಂದಿಗೆ ವಿವರವಾದ ವರದಿಯನ್ನು ಸೂಕ್ತ ಕ್ರಮಕ್ಕಾಗಿ ನ್ಯಾಯಾಂಗಕ್ಕೆ ಸಲ್ಲಿಸಲಾಗಿದೆ ಎಂದು ಸೂಚಿಸಿದ್ದಾರೆ. ಘಟನೆಗೆ ಸಾಕ್ಷಿಯಾದ ಇತರ ಮೂವರು ಕಾನ್‌ಸ್ಟೆಬಲ್‌ಗಳ ಸಾಕ್ಷ್ಯಗಳನ್ನು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿದಂತೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: Viral Video: ‘ನನಗೇ ಗಾಡಿ ತೆಗಿ ಅಂತೀಯಾ?’ ಟ್ರಾಫಿಕ್ ಪೊಲೀಸನಿಗೆ ಚಪ್ಪಲಿಯಿಂದ ಬಾರಿಸಿದ ‘ದಬಂಗ್’ ಮಹಿಳೆ
ಈ ಶಿಕ್ಷೆಯಿಂದ ಕೋಪಗೊಂಡ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮನ್ವತ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಮತ್ತು ಹೆಡ್ ಕಾನ್ಸ್ಟೆಬಲ್ ಹುಲ್ಲು ಕಡಿಯುವ ಶಿಕ್ಷೆಗೆ ಗುರಿಯಾಗಿದ್ದಾರೆ. ಇಡೀ ಘಟನೆಯನ್ನು ಅಕ್ಟೋಬರ್ 22ರಂದು ಪೊಲೀಸ್ ಠಾಣೆಯ ಡೈರಿಯಲ್ಲಿ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ