Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನನಗೇ ಗಾಡಿ ತೆಗಿ ಅಂತೀಯಾ?’ ಟ್ರಾಫಿಕ್ ಪೊಲೀಸನಿಗೆ ಚಪ್ಪಲಿಯಿಂದ ಬಾರಿಸಿದ ‘ದಬಂಗ್’ ಮಹಿಳೆ

Traffic Police : ಪೊಲೀಸರ ಪ್ರಕಾರ ಕಂಡಕಂಡಲ್ಲಿ ಈ ಮಹಿಳೆ ಇ-ರಿಕ್ಷಾ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದಳು. ಈಕೆಯ ವಾಹನವನ್ನು ತೆಗೆಸಲು ನೋಡಿದಾಗ ಕೋಪಗೊಂಡ ಆಕೆ ಈ ರೀತಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು, ಆಕೆಯನ್ನು ಕೂಡಲೇ ಬಂಧಿಸಬೇಕು ಎಂದಿದ್ದಾರೆ.

Viral Video: 'ನನಗೇ ಗಾಡಿ ತೆಗಿ ಅಂತೀಯಾ?' ಟ್ರಾಫಿಕ್ ಪೊಲೀಸನಿಗೆ ಚಪ್ಪಲಿಯಿಂದ ಬಾರಿಸಿದ 'ದಬಂಗ್' ಮಹಿಳೆ
ಗಾಝಿಯಾಬಾದ್​ನಲ್ಲಿ ಪೊಲೀಸರಿಗೆ ಹೊಡೆಯುತ್ತಿರುವ ಇ-ಆಟೋ ಚಾಲಕಿ
Follow us
ಶ್ರೀದೇವಿ ಕಳಸದ
|

Updated on: Oct 13, 2023 | 1:47 PM

Uttar Pradesh: ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುವುದನ್ನು ಪೊಲೀಸರಂತೂ ತಮ್ಮ ಹಕ್ಕೆಂದೇ ಭಾವಿಸಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ. ಅಂಥ ಪೊಲೀಸರ (Police) ಮೇಲೇ ಕೈಯ್ಯೆತ್ತುವುದೆಂದರೆ? ಅದೂ ನಡುರಸ್ತೆಯಲ್ಲಿ ಚಪ್ಪಲಿ ಝಳಪಿಸುತ್ತಾ ಅದರಿಂದ ಪೊಲೀಸನೊಬ್ಬನ ಮುಖಮೂತಿಗೆಲ್ಲ ಬಾರಿಸಿ ಓಡಿಸುವುದೆಂದರೆ? ತಕ್ಕ ಶಾಸ್ತಿಯಾಯಿತು ಎನ್ನುತ್ತೀರೋ? ಇದೆಂಥಾ ನಾಚಿಕೆಗೇಡು ಎಂದು ತಲೆ ತಗ್ಗಿಸುತ್ತೀರೋ? ಒಟ್ಟಿನಲ್ಲಿ ಇಂಥ ಅಸಾಮಾನ್ಯ ಘಟನೆ ನಡೆದದ್ದಂತೂ ನಿಜ.

ಇದನ್ನೂ ಓದಿ : Viral Video: ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್​; ಮೈಚಳಿ ಬಿಟ್ಟು ಕುಣಿಯಲು ಧೈರ್ಯ ಬೇಕು ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ X ತುಂಬೆಲ್ಲಾ ಹರಿದಾಡುತ್ತಿದ್ದು ಮಂದಿ ಅದಕ್ಕೆ ತರಹೇವಾರಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಪೊಲೀಸರು ಜನಸೇವೆ ಮಾಡದೇ ರಾಜಕಾರಣಿಗಳ ಕೈಯಾಳುಗಳಾಗಿ ಗೌರವ ಕಳೆದುಕೊಂಡದ್ದೇ ಇದಕ್ಕೆಲ್ಲಾ ಕಾರಣ ಎಂದೊಬ್ಬರು ಹೇಳಿದ್ದಾರೆ. ‘ಭಾರತದ ಉದ್ದಗಲಕ್ಕೂ ಬರೀ ಭ್ರಷ್ಟ ಅದಕ್ಷ ಪೊಲೀಸರೇ ತುಂಬಿಕೊಂಡಿದ್ದಾರೆ, ಕೆಲ ಒಳ್ಳೆಯವರನ್ನು ಬಿಟ್ಟರೆ… ಅವರಿಗೆ ಇದಿಷ್ಟೇ ‘ಮರ್ಯಾದೆ’ ಸಾಲದು’ ಎಂದು ಕಟಕಿಯಾಡಿದವರು ಹಲವರು. ‘ಒಬ್ಬ ಮಹಿಳೆಯ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿಲ್ಲದ ಈ ಸಮವಸ್ತ್ರಧಾರಿ ಗೂಂಡಾಗಳಿಗೆ ಹೀಗೇ ಆಗಬೇಕು’ ಎಂದಷ್ಟು ಮಂದಿ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಮಹಿಳೆ

ಪೊಲೀಸರ ಪ್ರಕಾರ ಕಂಡಕಂಡಲ್ಲಿ ಇ-ರಿಕ್ಷಾ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದ ಈ ಮಹಿಳೆಯ ವಾಹನವನ್ನು ತೆಗೆಸಲು ಹೋದಾಗ ವ್ಯಗ್ರಳಾದ ಅವಳು ಈ ರೀತಿ ಹಲ್ಲೆ ನಡೆಸಿದ್ದಾಳೆ. ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟೀಕರಣ ಕೊಡುತ್ತ, ‘ನಗರಗಳಲ್ಲಿ ಇ-ರಿಕ್ಷಾಗಳ ಹಾವಳಿ ಹೆಚ್ಚಾಗಿದೆ. ತಮ್ಮ ಕರ್ತವ್ಯ ಮಾಡುತ್ತಿದ್ದ ಪೊಲೀಸ್​ ಸಿಬ್ಬಂದಿಯ ಮೇಲಿನ ಹಲ್ಲೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದಿದ್ದಾರೆ. ‘ಆ ಮಹಿಳೆಯನ್ನು ಕೂಡಲೇ ಬಂಧಿಸಬೇಕು’ ಎಂದು ಒಂದಷ್ಟು ಜನ ಹೇಳಿದ್ದರೂ ಒಟ್ಟಿನಲ್ಲಿ ಪೊಲೀಸರ ಬಗ್ಗೆ ಸಹಾನುಭೂತಿ ತೋರಿದವರು ಬೆರಳೆಣಿಕೆಯಷ್ಟು.

ನಿಮ್ಮೂರಿನ ಪೋಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ