AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಸ್​ ಸೀಟ್​ನಲ್ಲಿದ್ದ ದೂಳು ಕಂಡು ನೆಟ್ಟಿಗರು ದಿಗ್ಭ್ರಾಂತ

Bus: ನಿಮ್ಮ ಮನೆಯ ಬೆಡ್​, ಸೋಫಾವನ್ನು ಆಗಾಗ ಶುಚಿಗೊಳಿಸುತ್ತೀರಿ. ಆಗ ಏಳುವ ಅಥವಾ ಸಂಗ್ರಹವಾಗುವ ದೂಳಿನ ಅಂದಾಜು ನಿಮಗೆ ಸಿಕ್ಕಿರುತ್ತದೆ. ಇನ್ನು ದಿನವೂ ರಸ್ತೆಗಳಲ್ಲಿ ಓಡಾಡುವ ಬಸ್ಸುಗಳ ಸೀಟಿನಲ್ಲಿ ಯಾವ ಪ್ರಮಾಣದ ದೂಳು ಅಡಗಿರುತ್ತದೆ ಎನ್ನುವ ಅಂದಾಜು ನಿಮಗಿದೆಯೇ? ಇಲ್ಲವಾದರೆ ಈ ವಿಡಿಯೋ ನೋಡಿ. ನೆಟ್ಟಿಗರಂತೆ ನೀವೂ ಭಯಬೀಳಬೇಡಿ!

Viral Video: ಬಸ್​ ಸೀಟ್​ನಲ್ಲಿದ್ದ ದೂಳು ಕಂಡು ನೆಟ್ಟಿಗರು ದಿಗ್ಭ್ರಾಂತ
ಬಸ್ಸಿನ ಸೀಟಿನಲ್ಲಿರುವ ದೂಳು
ಶ್ರೀದೇವಿ ಕಳಸದ
|

Updated on:Oct 13, 2023 | 10:52 AM

Share

Dust: ದೂಳು ಸುಲಭವಾಗಿ ಕಾಣುವುದಿಲ್ಲ. ಅಡಗಿರುವ ಜಾಗವನ್ನು ಒಮ್ಮೆ ಖೊಡವಿಯೋ, ಕುಟ್ಟಿಯೋ, ಬಡಿದೋ ನೋಡಿದರೆ ಅದರ ಮಹಾಸ್ವರೂಪ ಪ್ರಕಟವಾಗುತ್ತದೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋ ನೋಡಿ. ಬಸ್ಸೊಂದರ ಸೀಟ್​ ಅನ್ನು ಕುಟ್ಟಿದಾಗ ಹೊಮ್ಮಿದ ದೂಳಿನ ಪ್ರಮಾಣ ಯಾರನ್ನೂ ಅಸಹ್ಯಗೊಳಿಸುವಂತಿದೆ. ಇನ್​ಸ್ಟಾಗ್ರಾಂನಲ್ಲಿರುವ ಈ ವಿಡಿಯೋ ನೋಡಿದ ನೆಟ್​ಮಂದಿ ಗಾಬರಿಗೆ ಒಳಗಾಗಿದ್ದಾರೆ. ಈ ಪ್ರಮಾಣದ ದೂಳು ನಮ್ಮ ದೇಹ ಸೇರುತ್ತದೆಯಾ? ಎಂದು ಭಯಭೀತರೂ ಆಗಿದ್ದಾರೆ. ಸಾಮಾನ್ಯವಾಗಿ ಬಸ್ಸಿನ ಸೀಟ್​ಗಳನ್ನು ಬಟ್ಟೆಯಿಂದ ಮಾಡಲಾಗುತ್ತದೆ. ಆಗ ರಸ್ತೆಯ ದೂಳು ಅಡರುವುದು ಸಹಜ. ಆದರೆ ಇಷ್ಟೊಂದು ಪ್ರಮಾಣದಲ್ಲಿ ದೂಳು ಅಡರಿರುತ್ತದೆಯಾ? ಎನ್ನುವುದು ಗೋಚರವಾಗುವುದು ಕೋಲು ತೆಗೆದುಕೊಂಡು ಹೊಡೆದಾಗಲೇ! ಇಲ್ಲವೇ ವ್ಯಾಕ್ಯೂಮ್​ ಕ್ಲೀನರ್​ನಿಂದ

ಇದನ್ನೂ ಓದಿ : Viral Video: ಸಮುದ್ರ ಶುಚಿಗೊಳಿಸುವಿಕೆ; ಈ ಕಸವನ್ನೆಲ್ಲ ಇನ್ನೆಲ್ಲಿ ಹಾಕುತ್ತಾರೆ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ @_likealeaf ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಈ ವಿಡಿಯೋ ಅನ್ನು 21 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ನಿಜಕ್ಕೂ ಭಯಾನಕವಾಗಿದೆ, ಇಂತ ಸೀಟಿಗಾಗಿ ನಾವು ನಿತ್ಯವೂ ಹೋರಾಡುತ್ತೇವೆ ಎಂದಿದ್ದಾರೆ ಕೆಲವರು.

ಬಸ್ಸಿನ ಸೀಟಿನಲ್ಲಿರುವ ದೂಳು

ಕೇವಲ ಐದು ನಿಮಿಷಗಳ ಪ್ರಯಾಣ ಮಾಡಿದರೂ ಸರಿ, ಬಸ್​ನಿಂದ ಇಳಿದ ಮೇಲೆ ಸ್ನಾನ ಮಾಡಲೇಬೇಕು ಎಂದು ನನಗೆ ಅನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ನಾನು ಬಸ್ಸಿನಿಂದ ಇಳಿದ ಮೇಲೆ ಬಟ್ಟೆಗಳನ್ನು ನೀರಿನಲ್ಲಿ ನೆನೆಸಿ ಇಡುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ನನ್ನ ಇಡೀ ಜೀವನವನ್ನು ಸಾರ್ವಜನಿಕ ಸಾರಿಗೆಯಲ್ಲಿಯೇ ಕಳೆದಿದ್ದೇನೆ, ಹಾಗಿದ್ದರೆ ಎಷ್ಟು ದೂಳು ನನ್ನ ದೇಹ ಸೇರಿರಬಹುದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?

ಬಸ್ ಆಥವಾ ರೈಲಿನಲ್ಲಿ  ಪ್ರಯಾಣಿಸಿದ ಮೇಲೆ ಪ್ಯಾಂಟ್​ ಶರ್ಟ್​ ಅನ್ನು ತೊಳೆಯಲೇಬೇಕು ಎಂದಿದ್ದಾರೆ ಒಬ್ಬರು. ಬಸ್​ಗಳನ್ನು ವಾರಕ್ಕೊಮ್ಮೆ ತೊಳೆಯುವುದು ಇದೇ ಕಾರಣಕ್ಕೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ ನಾನು ಇನ್ನು ಯೋಚಿಸಬೇಕಾಯಿತು ಎಂದಿದ್ದಾರೆ ಕೆಲವೊಂದಿಷ್ಟು ಜನ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 10:51 am, Fri, 13 October 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!