AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?

Mobile : ಈ ಎರಡೂ ವಿಡಿಯೋಗಳನ್ನು ನೋಡಿದ ಮೇಲೆ ನೆಟ್ಟಿಗರು ಕಂಗಾಲಾಗಿದ್ದಾರೆ. ಮಹಿಳೆಯರು, ಪುರುಷರು ಶಾಂತಿಯಿಂದ ಬದುಕಲು ಮತ್ತು ಉಸಿರಾಡಲು ಪರಸ್ಪರ ಅವಕಾಶ ನೀಡಬೇಕು ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಅಂಥದ್ದೇನಿದೆ ಈ ವಿಡಿಯೋದಲ್ಲಿ? ಎಂದು ನಿಮ್ಮಲ್ಲಿ ಕುತೂಹಲ ಹೆಚ್ಚುತ್ತಿದೆಯಾ? ಹಾಗಿದ್ದರೆ ತಪ್ಪದೇ ಈ ಎರಡೂ ವಿಡಿಯೋಗಳನ್ನು ನೋಡಿ.

Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?
ಅವನು ಮೊಬೈಲಿನಲ್ಲಿ ಏನು ನೋಡುತ್ತಿದ್ದಾನೆ?
ಶ್ರೀದೇವಿ ಕಳಸದ
|

Updated on:Oct 12, 2023 | 3:31 PM

Share

Men and Women: ಈ ಯುವಕ ಮತ್ತು ಯುವತಿ ಒಂದೇ ಹಾಸಿಗೆಯಲ್ಲಿ ಮಲಗಿದ್ದಾರೆ. ಇಬ್ಬರೂ ತಮ್ಮ ತಮ್ಮ ಮೊಬೈಲಿನಲ್ಲಿ ಮುಳುಗಿದ್ದಾರೆ. ಹೀಗೆಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪು. ಈ ಯುವತಿಗೆ ಆ ಯುವಕ ಮೊಬೈಲ್​ನಲ್ಲಿ ಏನನ್ನು ನೋಡುತ್ತಿದ್ದಾನೆ ಎನ್ನುವ ಕುತೂಹಲ. ಆಗ ಆಕೆ ಹೂಡಿದ ತಂತ್ರ ಏನಿರಬಹುದು? ಅವನನ್ನು ಪ್ರಶ್ನಿಸದೇ ಮತ್ತು ಅವನ ಸ್ಕ್ರೀನಿನಲ್ಲಿ (Screen) ತಲೆಯನ್ನೂ ಹಾಕದೆ, ಮೌನದಲ್ಲಿಯೇ ಅವ ಏನನ್ನು ನೋಡುತ್ತಿದ್ದಾನೆ ಎನ್ನುವುದನ್ನು ಈಕೆ ಪತ್ತೆ ಹಚ್ಚಿದ್ದಾಳೆ. ಅರೆ, ಅದು ಹೇಗೆ? ಈಕೆಯೇನು ಅಂತರ್ಜ್ಞಾನಿಯೇ? ಖಂಡಿತ ಇಲ್ಲ. ಇದು ತಂತ್ರ ಮತ್ತು ಜ್ಞಾನದ ಫಲ!

ಇದನ್ನೂ ಓದಿ : Viral: ಕೇಲ್ ಸಲಾಡ್​ ತಿಂದು ಮುಗಿಸುವ ಹೊತ್ತಿಗೆ ಈ ಜಿರಳೆ ಕಂಡಿತ್ತು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅ.10ರಂದು X ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 10 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 1,000 ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರು ಜೀವನದಲ್ಲಿ ವಿವಿಧ ವಿಷಯಗಳಲ್ಲಿ ಬುದ್ಧಿವಂತಿಕೆ ಮತ್ತು ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಅನೇಕರು ಹೇಳಿದ್ದಾರೆ.

ಅವನ ಕಣ್ಣಲ್ಲಿ ಗೂಢಚಾರಿಕೆ ಮಾಡುತ್ತಿರುವ ಆಕೆ

ಮಹಿಳೆಯರು ನಂಬಲಾಗದಂಥ ಬೌದ್ಧಿಕ ಸಾಮರ್ಥ್ಯ, ಸೃಜನಶೀಲತೆ ಮತ್ತು ಅಂತಃಪ್ರಜ್ಞೆಯನ್ನು ಹೊಂದಿದ್ದಾರೆ ಎಂದಿದ್ದಾರೆ ಒಬ್ಬರು. ಎಲ್ಲ ಹೆಣ್ಣುಮಕ್ಕಳು ಒಂದಿಲ್ಲಾ ಒಂದು ಮಾರ್ಗ ಕಂಡುಕೊಂಡಿರುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ಬಹುಶಃ ಈಕೆ ಬೇಹುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರಬೇಕು ಎಂದಿದ್ದಾರೆ ಮತ್ತೊಬ್ಬರು.  ಆದರೆ ಇಂಥ ತಂತ್ರಗಳನ್ನು ಪ್ರಯೋಗಿಸಿ ತನ್ನನ್ನು ತಾನೇ ನೋಯಿಸಿಕೊಳ್ಳುತ್ತಾರೆ ಎಂದಿದ್ದಾರೆ ಮಗದೊಬ್ಬರು. ಆದರೆ ಮಹಿಳೆಯರಷ್ಟೇ ಏಕೆ. ತಂತ್ರಜ್ಞಾನ ಮತ್ತು ಬುದ್ಧಿವಂತಿಕೆಗೆ ಲಿಂಗಬೇಧವಿದೆಯೇ? ಎಂದು ಇದೇ ಥ್ರೆಡ್​ಗೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ಇನ್ನೊಬ್ಬರು.

ಅವಳ ಕಣ್ಣಲ್ಲಿ ಗೂಢಚಾರಿಕೆ ಮಾಡುತ್ತಿರುವ ಅವನು

ಸ್ವಾತಂತ್ರ್ಯವೆನ್ನುವುದು ತಂತ್ರಜ್ಞಾನದ ಸಹವಾಸದಿಂದಾಗಿ ಹೀಗೆಲ್ಲ ಹುಸಿಬೀಳುತ್ತಿದೆ. ಅವಳೇ ಆಗಲಿ ಅವನೇ ಆಗಲಿ ಪರಸ್ಪರರನ್ನು ಇಣುಕಿ ಹಾಕಬಾರದು. ಇದರಿಂದ ಹಾಳಾಗುವುದು ಅವರವರ ನೆಮ್ಮದಿಯೇ ಎನ್ನುತ್ತಿದೆ ಕೆಲಮಂದಿ.

ಈ ವಿಡಿಯೋಗಳನ್ನು ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:12 pm, Thu, 12 October 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ