Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ

Girl Child: ''ಅಮ್ಮನಿಲ್ಲದ ಬಾಲ್ಯ ನನ್ನದು. ಅಮ್ಮ ಒಬ್ಬ ವೇಶ್ಯೆ ಎಂದು ಗೊತ್ತಾದಾಗ ನನಗೆ ಎಂಟು ವರ್ಷ. ಮಲತಂದೆ ಮಲತಂಗಿಯೊಂದಿಗೆ ವಾಸಿಸತೊಡಗಿದೆ. ಮತ್ತೊಮ್ಮೆ ಅಮ್ಮ ನನ್ನನ್ನು ಬಿಟ್ಟು ಹೋದಳು. ಮಲತಂದೆಯಿಂದ ಅತ್ಯಾಚಾರಕ್ಕೆ ಒಳಗಾಗುತ್ತ ಹೋದೆ. ಇನ್ನೇನು ಈ ಜಗತ್ತಿನ ನಂಟು ಬೇಡವೇ ಬೇಡವೆಂದುಕೊಂಡು ಸಾಯಲು ಪ್ರಯತ್ನಿಸಿದೆ. ಆದರೆ 'ಕ್ರಾಂತಿ' ಕೈಹಿಡಿಯಿತು'' ಝುಂಬಾ ಇನ್​ಸ್ಟ್ರಕ್ಟರ್​

Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ
'ಕ್ರಾಂತಿ ನನ್ನನ್ನು ಬದುಕಿಸಿತು' ಝುಂಬಾ ಇನ್​ಸ್ಟ್ರಕ್ಟರ್
Follow us
|

Updated on:Oct 12, 2023 | 12:24 PM

Mother: ‘ನಾನು ಹುಟ್ಟಿದ ತಕ್ಷಣ ನನ್ನ ಅಮ್ಮ ನನ್ನನ್ನು ಬಿಟ್ಟು ಹೊರಟುಹೋದಳು. ನನ್ನ ಚಿಕ್ಕಮ್ಮಂದಿರೇನೋ ನನ್ನನ್ನು ನೋಡಿಕೊಂಡರು. ಆದರೆ ಅವರು ಶಾಲೆಗೆ ಕಳಿಸಲಿಲ್ಲ. 8 ವರ್ಷದವಳಿದ್ದಾಗ ಒಂದು ದಿನ ನನ್ನ ಅಮ್ಮ ಮುಂಬೈನಿಂದ ಬಂದಳು. ಮೊದಲ ಸಲ ಆಕೆಯನ್ನು ನೋಡಿದೆ, ಆದರೆ ಆಕೆ ನನ್ನ ಅಮ್ಮ ಎಂದು ನನಗೆ ಒಪ್ಪಿಕೊಳ್ಳಲಾಗಲಿಲ್ಲ. ನಂತರ ಆಕೆ ನನ್ನನ್ನು ಮುಂಬೈಗೆ ಕರೆದೊಯ್ದಳು. ಅಲ್ಲಿ ಮಲತಂಗಿ ಮತ್ತು ಮಲತಂದೆಯೊಂದಿಗೆ ವಾಸಿಸತೊಡಗಿದೆ. ನಾನು ಅವರೆಲ್ಲರೊಂದಿಗೆ ಸುರಕ್ಷಿತವಾಗಿದ್ದೇನೆ ಎನ್ನಿಸಿತು. ಆದರೆ ನನ್ನ ತಾಯಿ ಒಬ್ಬ ವೇಶ್ಯೆ (Prostitute) ಎನ್ನುವುದು ಮೊದಲಬಾರಿಗೆ ತಿಳಿಯಿತು. ಅಷ್ಟೊತ್ತಿಗಾಗಲೇ ನನ್ನ ಮಲತಂದೆಯಿಂದ ಆಕೆ ಹೊಡೆತ ತಿಂದು ಬೇಸತ್ತಿದ್ದಳು.’

ಇದನ್ನೂ ಓದಿ : Viral Puzzle: ಕ್ರಾಸ್​ವರ್ಡ್​; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನಗೆ 12 ತುಂಬಿದಾಗ ನನ್ನ ಅಮ್ಮ ನನ್ನನ್ನು ಮತ್ತೊಮ್ಮೆ ಬಿಟ್ಟು ಹೊರಟುಹೋದಳು. ಆಗ ನನ್ನ ಮಲತಂದೆ ನನ್ನನ್ನು ದಿನಾ ಹೊಡೆಯುತ್ತಿದ್ದ ಅಷ್ಟೇ ಅಲ್ಲ ದಿನಾ ರಾತ್ರಿ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ. ನಾನು ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದೆ. ಇನ್ನೇನು ನನ್ನ ಬದುಕು ಮುಗಿದೇ ಹೋಯಿತು ಎನ್ನುವಾಗ ‘ಕ್ರಾಂತಿ’ ನನ್ನ ಕೈಹಿಡಿಯಿತು.’

‘ಕ್ರಾಂತಿ ನನಗೆ ಹೊಸ ಜೀವನ ಕೊಟ್ಟಿತು’

‘ಮುಂಬೈ ಕಾಮಾಟಿಪುರದೊಂದಿಗೆ ಒಡನಾಟವಿಟ್ಟುಕೊಂಡಿದ್ದ ‘ಕ್ರಾಂತಿ’ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಸಂಸ್ಥೆ. ಕ್ರಾಂತಿಯ ತೆಕ್ಕೆಗೆ ಬಿದ್ದ ಮೇಲೆ ನಾನು ಸುರಕ್ಷಿತವಾಗಿದ್ದೇನೆ ಎನ್ನಿಸತೊಡಗಿತು. ಅವರು ಅಲ್ಲಿ ನನ್ನ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡರು. ಜೊತೆಗೆ ಥೆರಪಿಗೆ ಒಳಪಡಿಸಿದರು. ನಾನು ಝುಂಬಾ ಡ್ಯಾನ್ಸ್​ ತರಬೇತಿ ಪಡೆದೆ. ಏಳು ವರ್ಷಗಳಿಂದ ಲೈಸೆನ್ಸ್​ ಹೊಂದಿದ ಝುಂಬಾ ತರಬೇತುದಾರಳಾಗಿ ಕೆಲಸ ಮಾಡುತ್ತಿದ್ದೇನೆ.  ನನ್ನ ತಪ್ಪು ಏನೂ ಇಲ್ಲ ಎನ್ನುವುದು ಅರಿವಾಗುತ್ತಿದೆ. ನನ್ನ ಬದುಕನ್ನು ಪ್ರೀತಿಸುತ್ತಿದ್ದೇನೆ. ‘ಕ್ರಾಂತಿ’ ನನಗೆ ಹೊಸ ಬದುಕನ್ನು ನೀಡಿದೆ.’ ಝುಂಬಾ ಇನ್​ಸ್ಟ್ರಕ್ಟರ್​

ಇದನ್ನೂ ಓದಿ : Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ  officialpeopleofindia ನಲ್ಲಿ 17 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ತನಕ ಸುಮಾರು 45,000 ಜನರು ಈ ಪೋಸ್ಟ್​ ಲೈಕ್ ಮಾಡಿದ್ದಾರೆ. ನೂರಾರು ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲ ನಿನ್ನ ತಾಯಿಯದೇ ತಪ್ಪು ಎಂದು ಒಬ್ಬರು ಹೇಳಿದ್ದಾರೆ. ಖಂಡಿತ ತಪ್ಪು, ತಾಯಿ ಈ ಪರಿಸ್ಥಿತಿಗೆ ಬರಲು ಗಂಡಸು ಮತ್ತು ಸಮಾಜವೇ ಹೊಣೆ ಎಂದು ಅನೇಕರು ತಿಳಿಹೇಳಿದ್ದಾರೆ. ಎಲ್ಲ ಕಷ್ಟಗಳನ್ನೂ ದಾಟಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿರುವ ನಿಮಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:24 pm, Thu, 12 October 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ