Viral Video: ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್​; ಮೈಚಳಿ ಬಿಟ್ಟು ಕುಣಿಯಲು ಧೈರ್ಯ ಬೇಕು ಎಂದ ನೆಟ್ಟಿಗರು

Motivation: ಕಲಾವಿದರು ಹೀಗೆ ಹೊರಗೆ ಬರಬೇಕು, ಜನರಲ್ಲಿ ಅಭಿರುಚಿ ಮೂಡಿಸಬೇಕು. ಇವರ ನೃತ್ಯವು ನಮ್ಮನ್ನು ಪ್ರೇರೇಪಿಸಿದೆ. ನಿಜಕ್ಕೂ ಇದು ಮಾಂತ್ರಿಕ ನೃತ್ಯ... ನೆಟ್ಟಿಗರು ಈ ವಿಡಿಯೋ ನೋಡಿ ಪ್ರಭಾವಿತರಾಗಿದ್ದಾರೆ. ನಿಮ್ಮಷ್ಟು ಧೈರ್ಯ ನಮಗೆ ಸ್ವಲ್ಪಾದರೂ ಬರಲಿ ಎಂದಿದ್ದಾರೆ. ನೀವು ಹೀಗೆಯೇ ನರ್ತಿಸುತ್ತ ನಮ್ಮೆಲ್ಲರನ್ನೂ ಸ್ಫೂರ್ತಿಗೊಳಿಸುತ್ತಿರಿ ಎಂದಿದ್ದಾರೆ ಅನೇಕರು.

Viral Video: ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್​; ಮೈಚಳಿ ಬಿಟ್ಟು ಕುಣಿಯಲು ಧೈರ್ಯ ಬೇಕು ಎಂದ ನೆಟ್ಟಿಗರು
ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಇಶಾ ಶರ್ಮಾ
Follow us
ಶ್ರೀದೇವಿ ಕಳಸದ
|

Updated on:Oct 13, 2023 | 12:03 PM

Dance: ಡ್ಯಾನ್ಸ್​ ಮಾಡಲು ಆತ್ಮವಿಶ್ವಾಸ ಬೇಕು. ಅದರಲ್ಲೂ ಎಲ್ಲರೆದುರು ಮಾಡಲು ಹೆಚ್ಚು ಆತ್ಮವಿಶ್ವಾಸ ಬೇಕು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಮಾಡಲಂತೂ ಸಾಕಷ್ಟು ಆತ್ಮವಿಶ್ವಾಸ ಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಈ ಯುವತಿಯಲ್ಲಿರುವ ಶೇ. 1 ರಷ್ಟು  ಆತ್ಮವಿಶ್ವಾಸವಾದರೂ ನಮಗೆ ಬೇಕು ಎನ್ನುತ್ತಿದ್ದಾರೆ. ಶಾರುಖ್​ ಖಾನ್​ ಮತ್ತು ಅನುಷ್ಕಾ ಶರ್ಮಾ ಅಭಿನಯದ ಝೀರೋ ಸಿನೆಮಾದ ‘ಮೇರೆ ನಾಮ್​ ತೂ’ ಹಾಡಿಗೆ ಈ ಯುವತಿ ಹೀಗೆ ಮನದುಂಬಿ ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಇದು ಮಾಂತ್ರಿಕ ನೃತ್ಯ ಎಂದಿದ್ದಾರೆ ಕೆಲವರು. ಇನ್ನಾದರೂ ನಿಮ್ಮಷ್ಟು ಧೈರ್ಯ ನಾವೂ ಮಾಡಬೇಕು ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ಬಸ್​ ಸೀಟ್​ನಲ್ಲಿದ್ದ ದೂಳು ಕಂಡು ನೆಟ್ಟಿಗರು ದಿಗ್ಭ್ರಾಂತ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಶಾ ಶರ್ಮಾ ಎಂಬ ನೃತ್ಯಕಲಾವಿದೆ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾಳೆ.  ಈತನಕ 4.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 7.4 ಲಕ್ಷ ಜನರು ಲೈಕ್ ಮಾಡಿದ್ದಾರೆ. ರಸ್ತೆಯಲ್ಲಿ ಈಕೆ ತನ್ನಷ್ಟಕ್ಕೆ ತಾನು ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಂತೆ ಅಲ್ಲಿರುವ ನೋಡುಗರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇಶಾ ಶರ್ಮಾ ನೃತ್ಯ

ಜನಸಂದಣಿಯ ನಡುವೆ ಮಾಂತ್ರಿಕತೆ ಸೃಷ್ಟಿಸಬೇಕೆಂದರೆ ಕಲಾವಿದರು ಹೀಗೆ ಹೊರಬರಬೇಕು, ಅಬ್ಬಾ ಈ ವಿಡಿಯೋ ಅನ್ನು ಅದೆಷ್ಟು ಜನ ಇಷ್ಟಪಟ್ಟಿದ್ದಾರೆ! ಎಂದಿದ್ದಾರೆ ಒಬ್ಬರು. ಹೀಗೆ ರಸ್ತೆಯಲ್ಲಿದ್ದಾಗ ಯಾರೋ ಒಬ್ಬರು ಅಚಾನಕ್ಕಾಗಿ ಛಂದದ ನೃತ್ಯವನ್ನು ಮಾಡಿದಾಗ ನೋಡುಗರ ಮೈಯಲ್ಲಿ ಉಂಟಾಗುವ ಸಂಚಲನವಿದೆಯಲ್ಲಾ… ಆಹ್​ ಎಂದಿದ್ದಾರೆ ಮತ್ತೊಬ್ಬರು. ನಿಮ್ಮನ್ನು ನಾವು ಬಹಳ ಪ್ರೀತಿಸುತ್ತಿದ್ದೇವೆ, ಈ ಉತ್ಸಾಹ ನಿಮ್ಮಲ್ಲಿ ಹೀಗೆಯೇ ಇರಲಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?

ನನಗೂ ಈ ಗ ರಸ್ತೆಯಲ್ಲಿ ಹೋಗಿ ಕುಣಿಯಬೇಕು ಎನ್ನಿಸುತ್ತಿದೆ, ಆದರೆ ನಿಮ್ಮಷ್ಟು ಚೆನ್ನಾಗಿ ನೃತ್ಯ ಮಾಡಲು ನನಗೆ ಬರುವುದಿಲ್ಲ ಎಂದಿದ್ದಾರೆ ಕೆಲವರು. ನಿಮಗೆ ಎಷ್ಟೇ ವಯಸ್ಸಾದರೂ ನೀವು ಹೀಗೆಯೇ ಕುಣಿಯುತ್ತ ಇರ್ರಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:02 pm, Fri, 13 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ