Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗೆ ಹಾವು ಕಚ್ಚಿದೆ ಅಂತಾ ಸೂಟು-ಬೂಟು ಧರಿಸಿ ಆಸ್ಪತ್ರೆಗೆ ಬಂದ ಯುವಕನ ನೋಡಿ ದಂಗಾದ ವೈದ್ಯರು, ಆತನ ಕೈಯಲ್ಲಿ ಏನಿತ್ತು ಗೊತ್ತಾ?

ಆಸ್ಪತ್ರೆಯ ಎಸ್‌ಐಸಿ ಪ್ರಭಾರಿ ಡಾ. ತರುಣ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದರು. ಚಿಕಿತ್ಸೆಯ ನಂತರ ಸೂರಜ್ ಅವರ ಸ್ಥಿತಿ ಸುಧಾರಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಹಾಸಿಗೆಯ ಮೇಲೆ ಹಾವನ್ನು ಪ್ರದರ್ಶಿಸಿ ಆತಂಕದ ವಾತಾವರಣ ನಿರ್ಮಿಸಿಬಿಟ್ಟಿದ್ದರು. ಇದೀಗ ಎಲ್ಲವೂ ಶಾಂತ ಸ್ಥಿತಿಗೆ ಮರಳಿದೆ ಎಂದಿದ್ದಾರೆ.

ತನಗೆ ಹಾವು ಕಚ್ಚಿದೆ ಅಂತಾ ಸೂಟು-ಬೂಟು ಧರಿಸಿ ಆಸ್ಪತ್ರೆಗೆ ಬಂದ ಯುವಕನ ನೋಡಿ ದಂಗಾದ ವೈದ್ಯರು, ಆತನ ಕೈಯಲ್ಲಿ ಏನಿತ್ತು ಗೊತ್ತಾ?
ಕಚ್ಚಿದ ಹಾವನ್ನೇ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಓಡೋಡಿ ಬಂದ ಯುವಕ
Follow us
ಸಾಧು ಶ್ರೀನಾಥ್​
|

Updated on: Nov 22, 2023 | 10:11 AM

ಮಿರ್ಜಾಪುರ (ಉತ್ತರ ಪ್ರದೇಶ) , ನವೆಂಬರ್ 22: ಉತ್ತರ ಪ್ರದೇಶದಲ್ಲಿ ಪಟುಲ್​​​ಖಿ (Patulkhi village) ಎಂಬ ಗ್ರಾಮದ ವ್ಯಕ್ತಿಗೆ ನಾಗರ ಹಾವು ಕಚ್ಚಿರುವ ( snake bite) ಆಘಾತಕಾರಿ ಘಟನೆ ಸೋಮವಾರ ನಡೆದಿದೆ. ಸೂರಜ್ ಎಂದು ಗುರುತಿಸಲಾದ ಯುವಕ ನಂತರ ಇಲ್ಲಿನ ಮಿರ್ಜಾಪುರ (Mirzapur, Uttar Pradesh) ವಿಭಾಗೀಯ ಆಸ್ಪತ್ರೆಗೆ ಬಂದು ವೈದ್ಯಕೀಯ ನೆರವು ಕೋರಿದ್ದಾನೆ ಎಂದು ಆಸ್ಪತ್ರೆ ಆಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಸೋಮವಾರ ಸಂಜೆ ಸೂರಜ್ ಗೆ ಅವರ ಮನೆಯಲ್ಲಿ ಹಾವು ಕಚ್ಚಿದ ಘಟನೆ ನಡೆದಿದೆ. ಅವರು ಅದೇ ದಿನ ಸಂಜೆ ತಡವಾಗಿ ಆಸ್ಪತ್ರೆಗೆ ಬಂದರು. ತುರ್ತು ಚಿಕಿತ್ಸಾ ವಿಭಾಗಕ್ಕೆ ನುಗ್ಗಿಬಂದ ಅವರು ಸೂಟು-ಬೂಟಿನೊಂದಿಗೆ ಉತ್ತಮ ಬಟ್ಟೆ ಧರಿಸಿದ್ದರು. ಅವರನ್ನು ನೋಡಿ ಅಲ್ಲಿನ ವೈದ್ಯಲೋಕ ಆಘಾತಕ್ಕೊಳಗಾಗಿದೆ.

ಏಕೆಂದರೆ ಸೂರಜ್ ತನಗೆ ಹಾವು ಕಚ್ಚಿದೆ ಎಂದು ಚೀರಾಡುತ್ತಾ ಬಹಿರಂಗಪಡಿಸಿದ್ದಾನೆ. ಜೊತೆಗೆ, ತನಗೆ ಕಚ್ಚಿರುವ ಹಾವನ್ನು ಜೀವಂತವಾಗಿ ತಂದು ಪ್ರದರ್ಶಿಸಿದ್ದಾನೆ. ಆಸ್ಪತ್ರೆ ಮತ್ತು ಸಿಬ್ಬಂದಿಯಲ್ಲಿ ಇದು ಭೀತಿಯನ್ನು ಸೃಷ್ಟಿಸಿತು ಎಂದು ಅಲ್ಲಿನ ವೈದ್ಯಾಧಿಕಾರಿ ಹೇಳಿದ್ದಾರೆ. ಹಾವನ್ನು ಕಂಡ ವೈದ್ಯರು ತಕ್ಷಣವೇ ವಿಷ ವಿರೋಧಿ ಚುಚ್ಚುಮದ್ದನ್ನು ಆ ಯುವಕನಿಗೆ ಚುಚ್ಚಿದ್ದಾರೆ. ಸೂರಜ್ ಅದರಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Human-snake conflict: ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಪಿಐಟಿ ಟ್ಯಾಗ್‌ ಮೊರೆ ಹೋದ ಕರ್ನಾಟಕ ಅರಣ್ಯ ಇಲಾಖೆ

ಆಸ್ಪತ್ರೆಯ ಎಸ್‌ಐಸಿ ಪ್ರಭಾರಿ ಡಾ. ತರುಣ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದರು. ಚಿಕಿತ್ಸೆಯ ನಂತರ ಸೂರಜ್ ಅವರ ಸ್ಥಿತಿ ಸುಧಾರಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಹಾಸಿಗೆಯ ಮೇಲೆ ಹಾವನ್ನು ಪ್ರದರ್ಶಿಸಿ ಆತಂಕದ ವಾತಾವರಣ ನಿರ್ಮಿಸಿಬಿಟ್ಟಿದ್ದರು. ಇದೀಗ ಎಲ್ಲವೂ ಶಾಂತ ಸ್ಥಿತಿಗೆ ಮರಳಿದೆ. ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಡಿತದ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ.

ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!