
ರಾಯಗಡ, ಅಕ್ಟೋಬರ್ 1: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ‘ದೀವೆಯಾಗರ್’ ಕಡಲತೀರದಲ್ಲಿ ಇಂದು ಪಿಕ್ನಿಕ್ ತೆರಳಿದ್ದ 8 ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತಪಟ್ಟ ಎಂಟೂ ವಿದ್ಯಾರ್ಥಿಗಳ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಇನ್ನೋ ಓರ್ವ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ.
ಪುಣೆಯ ಆಳಂದಿಯಿಂದ ಪಿಕ್ನಿಕ್ಗೆ ಆಗಮಿಸಿದ್ದ ಖಾಸಗಿ ಕೋಚಿಂಗ್ ಕ್ಲಾಸ್‌ನ 48 ಜನರ ತಂಡದಲ್ಲಿ 25 ಹುಡುಗರು, 17 ಹುಡುಗಿಯರು ಮತ್ತು 6 ಶಿಕ್ಷರಿದ್ದರು. ಮುಂಬೈನಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ದೀವೆಯಾಗರ್ ಕಡಲತೀರಕ್ಕೆ ಇವರೆಲ್ಲರೂ ತೆರಳಿದ್ದರು. ಈ ತಂಡದಲ್ಲಿದ್ದ ಕೆಲವು ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಲು ನೀರಿಗೆ ಇಳಿದಿದ್ದರು. ಆದರೆ, ಅವರಲ್ಲಿದ್ದ 8 ವಿದ್ಯಾರ್ಥಿಗಳು ನೀರಿನಿಂದ ಹೊರಬರದೆ ಮುಳುಗಿ ಮೃತಪಟ್ಟರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಅಧಿಕಾರಿಗಳು ಸುದೀರ್ಘ ಹುಡುಕಾಟ ನಡೆಸಿ ಎಂಟೂ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ: ಪುನರ್ಜನ್ಮದ ನಂಬಿಕೆಯಿಂದ ತಂದೆಯ ಮೃತದೇಹವನ್ನು 4 ವರ್ಷ ಫ್ರೀಜರ್‌ನಲ್ಲಿಟ್ಟ ಮಗಳು; ತಿಂಗಳಿಗೆ 1.6 ಲಕ್ಷ ವೆಚ್ಚ!
ಕಡಲತೀರದಲ್ಲಿದ್ದವರಲ್ಲಿ ಆತಂಕ ಮೂಡಿಸಿದ ಈ ದುರಂತಕ್ಕೆ ವಿದ್ಯಾರ್ಥಿಗಳು ಸಮುದ್ರದ ನೀರಿನ ಆಳ ಹಾಗೂ ಭೀಕರ ಅಲೆಗಳ ಸೆಳೆತವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದಿರುವುದೇ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಬೋರ್ಲಿಪಂಚಾತನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳ ನಂತರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುವುದು.
Tragedy at Maharashtra’s Diveagar beach:Eight students from Alandi,Pune,drowned while on a picnic.Students had entered the sea but reportedly could not gauge the depth.Local residents & Mahakali Water Sports staff launched a rescue operation,but eight were found dead. #Diveagar pic.twitter.com/lmaPIBCsWy
— Visshal Singh (@VishooSingh) October 1, 2026
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ಹೆಚ್ಚಿನ ವಿವರಗಳು ಹೊರಬರಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ