Maharashtra Bus Accident: ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿ, ನಾಲ್ವರು ಸಾವು, 22ಕ್ಕೂ ಅಧಿಕ ಮಂದಿಗೆ ಗಾಯ

|

Updated on: Apr 23, 2023 | 10:58 AM

ಮಹಾರಾಷ್ಟ್ರದ ಪುಣೆ-ಬೆಂಗಳೂರು ಹೆದ್ದಾರಿ ಬಳಿ ಬಸ್​(Bus) ಹಾಗೂ ಟ್ರಕ್(Truck) ನಡುವೆ ಅಪಘಾತ(Accident) ಸಂಭವಿಸಿದ್ದು, 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 22ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

Maharashtra Bus Accident: ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿ, ನಾಲ್ವರು ಸಾವು, 22ಕ್ಕೂ ಅಧಿಕ ಮಂದಿಗೆ ಗಾಯ
ಮಹಾರಾಷ್ಟ್ರ ಬಸ್ ಅಪಘಾತ
Image Credit source: ABP Live
Follow us on

ಮಹಾರಾಷ್ಟ್ರದ ಪುಣೆ-ಬೆಂಗಳೂರು ಹೆದ್ದಾರಿ ಬಳಿ ಬಸ್​(Bus) ಹಾಗೂ ಟ್ರಕ್(Truck) ನಡುವೆ ಅಪಘಾತ(Accident) ಸಂಭವಿಸಿದ್ದು, 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 22ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಟ್ರಕ್ ಹಾಗೂ ಖಾಸಗಿ ಬಸ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ ಗೋರೆಗಾಂವ್​ನ ಸಂಸ್ಥೆಯೊಂದಕ್ಕೆ ಸೇರಿದ್ದಾಗಿದೆ. ಯಾವುದೋ ಕಾರ್ಯಕ್ರಮದ ನಿಮಿತ್ತ ಪುಣೆಗೆ ತೆರಳಿತ್ತು, ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರದ ರಾಯಗಢದಲ್ಲಿ ಏಪ್ರಿಲ್ 15 ರಂದು ಬಸ್​ ಒಂದು ಕಂದಕಕ್ಕೆ ಬಿದ್ದು, 12 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದರು.

ಮತ್ತಷ್ಟು ಓದಿ: ಚನ್ನಪಟ್ಟಣ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರ ಸಾವು

ಬಸ್​ನಲ್ಲಿ 40-45 ಮಂದಿ ಪ್ರಯಾಣಿಸುತ್ತಿದ್ದರು, ಬಸ್​ ಕಂದಕಕ್ಕೆ ಬಿದ್ದ ತಕ್ಷಣೆ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು, ಬಸ್​ ಅನ್ನು ಮೇಲಕ್ಕೆತ್ತಲು ಕ್ರೇನ್ ಸಹಾಯ ಪಡೆಯಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ