AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amritpal Singh: ಪೊಲೀಸರಿಗೆ ಶರಣಾಗುವ ಮುನ್ನ ಗುರುದ್ವಾರದಲ್ಲಿ ಭಾಷಣ ಮಾಡಿದ್ದ ಅಮೃತ್​ಪಾಲ್ ಸಿಂಗ್

ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರಿಗೆ ಶರಣಾಗುವ ಮುನ್ನ ಮೊಗಾದ ರೋಡ್ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

Amritpal Singh: ಪೊಲೀಸರಿಗೆ ಶರಣಾಗುವ ಮುನ್ನ ಗುರುದ್ವಾರದಲ್ಲಿ ಭಾಷಣ ಮಾಡಿದ್ದ ಅಮೃತ್​ಪಾಲ್ ಸಿಂಗ್
ಅಮೃತ್​ಪಾಲ್​ ಸಿಂಗ್Image Credit source: Times Now
ನಯನಾ ರಾಜೀವ್
|

Updated on: Apr 23, 2023 | 9:23 AM

Share

ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​(Amritpal Singh) ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರಿಗೆ ಶರಣಾಗುವ ಮುನ್ನ ಮೊಗಾದ ರೋಡ್ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ರೋಡ್ ಗ್ರಾಮವು ಖಲಿಸ್ತಾನಿ ನಾಯಕ ಭಿಂದ್ರನ್‌ವಾಲೆ ಅವರ ಗ್ರಾಮವಾಗಿದೆ. ಅಮೃತಪಾಲ್ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವುದಕ್ಕೆ ಯಾವುದೇ ಕಡೆಯಿಂದ ಎಲ್ಲಿಯೂ ಪ್ರತಿಭಟನೆ ನಡೆದಿಲ್ಲ. ಆದರೆ ಅಮೃತ್​ಪಾಲ್​ ಯಾವ ವಿಚಾರವಾಗಿ ಭಾಷಣ ಮಾಡಿದ್ದ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ.

ಶರಣಾಗುವ ಮುನ್ನ ಅಮೃತಪಾಲ್ ಸಿಂಗ್ ಮೊಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಲ್ಲಿ ಪಠಿಸುತ್ತಿದ್ದರು ಮತ್ತು ಆ ಸಮಯದಲ್ಲಿ ಅಲ್ಲಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರನ್ನು ಗುರುದ್ವಾರದ ಹೊರಗೆ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: Amritpal Singh: 36 ದಿನಗಳ ಕಾರ್ಯಾಚರಣೆ ಬಳಿಕ ಖಲಿಸ್ತಾನ್​ ಮುಖಂಡ ಅಮೃತ್​​ಪಾಲ್​ ಸಿಂಗ್​​ ಬಂಧನ

ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಖಲಿಸ್ತಾನಿ ಸಹಾನುಭೂತಿಯು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೀತಿಯಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ.

ಅಂದಿನಿಂದಲೂ ಈತನಿಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇತ್ತು. ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದೂ ಹೇಳಲಾಗಿತ್ತು. ಕೊನೆಗೂ ಈತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ ಅಮೃತ್ಪಾಲ್ ಸಿಂಗ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು. ಕಿರಣ್‌ ದೀಪ್ ಕೌರ್ ಅವರು (ಏಪ್ರಿಲ್ 20) ಲಂಡನ್‌ ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನೆ ಮಾಡಿದ್ದರು, ನಂತರ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ