Papalpreet Singh: ಖಾಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​ನ ಆಪ್ತ ಪಪಲ್​ಪ್ರೀತ್​ ಸಿಂಗ್ ಬಂಧನ

ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್​ನ ಆಪ್ತ ಪಪಲ್​ಪ್ರೀತ್ ಸಿಂಗ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Papalpreet Singh: ಖಾಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​ನ ಆಪ್ತ ಪಪಲ್​ಪ್ರೀತ್​ ಸಿಂಗ್ ಬಂಧನ
ಪಪಲ್​ಪ್ರೀತ್​ ಸಿಂಗ್Image Credit source: Oneindia
Follow us
ನಯನಾ ರಾಜೀವ್
|

Updated on:Apr 10, 2023 | 3:00 PM

ಖಾಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್​ನ ಆಪ್ತ ಪಪಲ್​ಪ್ರೀತ್ ಸಿಂಗ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೋಶಿಯಾರ್‌ಪುರದ ಹಳ್ಳಿಯೊಂದರಲ್ಲಿ ಪಾಪಲ್‌ಪ್ರೀತ್‌ನನ್ನು ಡೇರಾದಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಕಳೆದ ವಾರ ಪತ್ತೆಹಚ್ಚಿದ್ದರು.

ಪಪಲ್​ಪ್ರೀತ್​ ಸಿಂಗ್​ನ ಬಂಧನದ ಬಳಿಕವಾದರೂ ಅಮೃತ್​ಪಾಲ್​ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆಯೇ ಎಂದು ಕಾದು ನೋಡಬೇಕಿದೆ, ಪೊಲೀಸರು ಹಲವು ದಿನಗಳಿಂದ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​(Amritpal Singh) ನನ್ನು ಹಿಡಿಯಲು ಕಳೆದ ಮೂರು ವಾರಗಳಿಂದ ಪ್ರಯತ್ನಿಸುತ್ತಿದ್ದು, ನಿರಂತರವಾಗಿ ಪೊಲೀಸರಿಂದ ನುಣುಚಿಕೊಳ್ಳುತ್ತಿದ್ದಾನೆ. ಅಮೃತ್​ಪಾಲ್ ಈ ತಿಂಗಳ ಕೊನೆಯಲ್ಲಿ ಸಿಖ್ಖರ ಸಭೆ ಕರೆದಿದ್ದು, ಪಂಜಾಬ್​ಗೆ ಆಗಮಿಸುವ ಸಾಧ್ಯತೆ ಇದೆ. ಅಂದು ಪೊಲೀಸರಿಗೆ ಶರಣಾಗಬಹುದು ಎನ್ನಲಾಗಿದೆ. ಏಪ್ರಿಲ್ 14ರ ಮೊದಲು ಸಿಖ್ ಸಂಘಟನೆಯನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ಓದಿ: Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್ ಶರಣಾಗುವ ಸಾಧ್ಯತೆ, ಏ.14ರವರೆಗೆ ಪಂಜಾಬ್​ ಪೊಲೀಸರ ರಜೆಗಳು ರದ್ದು

ಅದಲ್ಲದೆ ಅಮೃತ್‌ಪಾಲ್‌ರನ್ನು ಪರಾರಿಯಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸರು ಘೋಷಣೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿರುವ ಆಪಾದನೆ ಕೂಡ ಈತನ ಮೇಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದು ಸಿಂಗ್ ಧಮ್ಕಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಅಮೃತ್‌ಪಾಲ್ ಸಹಾಯಕರಾದ ದಲ್ಜೀತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ಪ್ರಧಾನ್‌ಮಂತ್ರಿ ಬಜೇಕಾ ಈ ನಾಲ್ವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ.

ತಲೆಮರೆಸಿಕೊಂಡಿರುವ ಅವಧಿಯಲ್ಲಿ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿ ಅದರಲ್ಲಿ ಒಂದು ವಿಡಿಯೋದಲ್ಲಿ ಶರಣಾಗುವ ಕುರಿತು ಮಾತನಾಡಿದ್ದ. ಮತ್ತೊಂದು ವಿಡಿಯೋದಲ್ಲಿ ಜನರ ಮಧ್ಯೆ ಬರುತ್ತೇನೆ ಆದರೆ ಶರಣಾಗುವುದಿಲ್ಲ ಎಂದು ತಿಳಿಸಿದ್ದ. ಅಮೃತ್​ಪಾಲ್​ನ 114 ಸಹಚರರು ಪೊಲೀಸರ ವಶದಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:00 pm, Mon, 10 April 23