Kevin Pietersen: ಕರ್ನಾಟಕಕ್ಕೆ ಮೋದಿ ಭೇಟಿ, ಕಾಡು ಪ್ರಾಣಿಗಳನ್ನು ಆರಾಧಿಸುವ ವಿಶ್ವ ನಾಯಕ ಎಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ
ಕಾಡು ಪ್ರಾಣಿಗಳನ್ನು ಆರಾಧಿಸುವ ವಿಶ್ವ ನಾಯಕ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಭೇಟಿ ನೀಡಿ ಅವುಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ ಎಂದು ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ್ದಾರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್.
ದೆಹಲಿ: ಏ.9ರಂದು (ಭಾನುವಾರ) ದೇಶದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಭೇಟಿ ನೀಡಿದ್ದರು, ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ. ಅನೇಕರು ಈ ಭೇಟಿಯನ್ನು ಟೀಕಿಸಿದರೆ, ಇನ್ನು ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮೋದಿ ಅವರ ಬಗ್ಗೆ ಪ್ರಶಂಸೆ ಮಾತುಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಏ.10 ರಂದು ಕರ್ನಾಟಕದ ಪ್ರಾಜೆಕ್ಟ್ ಟೈಗರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮೋದಿ ಅವರನ್ನು “ಐಕಾನಿಕ್” ಮತ್ತು “ವಿಶ್ವ ನಾಯಕ” ಎಂದು ಕರೆದಿದ್ದಾರೆ. ದೇಶದಲ್ಲಿ ಪ್ರಾಣಿಗಳ ಸಂರಕ್ಷಣೆಗಾಗಿ ಅವರ ಪ್ರಯತ್ನ ತುಂಬಾ ದೊಡ್ಡದು ಎಂದು ಹೇಳಿದ್ದಾರೆ. ಕಾಡು ಪ್ರಾಣಿಗಳನ್ನು ಆರಾಧಿಸುವ ವಿಶ್ವ ನಾಯಕ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಭೇಟಿ ನೀಡಿ ಅವುಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ. ಹಿಂದೆ, ಮಧ್ಯಪ್ರದೇಶದಲ್ಲಿ ಚೀತಾಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಹೀರೋ ಎಂದು ಕೆವಿನ್ ಪೀಟರ್ಸನ್ ಹಾಡಿಹೊಗಳಿದ್ದಾರೆ.
ಪ್ರಾಜೆಕ್ಟ್ ಟೈಗರ್ 50 ವರ್ಷ ಪೂರೈಸಿದ ಅಂಗವಾಗಿ 20 ಕಿಮೀ ದೂರ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ಮೋದಿ ಸಫಾರಿ ಮಾಡಿದ್ದಾರೆ. 2022ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 3,167 ಆಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದ ಇತ್ತೀಚಿನ ಹುಲಿ ಗಣತಿ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ICONIC! A world leader who adores wild animals and is so excited when spending time with them in their natural habitat. Remember, for his last birthday, he released cheetahs into the wild in India. HERO, @narendramodi ?? pic.twitter.com/D8EPDJh6Jc
— Kevin Pietersen? (@KP24) April 9, 2023
ಇದನ್ನೂ ಓದಿ: ಮೋದಿ ಸಫಾರಿ: ಗಮನ ಸೆಳೆದ ಮೋದಿ ಡ್ರೆಸ್, ಬಂಡೀಪುರ ಲೋಗೋ ಇರುವ ದಿರಿಸು ಚಿತ್ರಗಳಲ್ಲಿ ನೋಡಿ
ಅಂಕಿಅಂಶಗಳ ಪ್ರಕಾರ, 2006 ರಲ್ಲಿ 1,411, 2010 ರಲ್ಲಿ 1,706, 2014 ರಲ್ಲಿ 2,226, 2018 ರಲ್ಲಿ 2,967 ಮತ್ತು 2022 ರಲ್ಲಿ 3,167 ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವನತಿಯ ಹಂತದಲ್ಲಿರುವ ಅಥವಾ ಗಾಯಗೊಂಡ ಘೇಂಡಾಮೃಗಗಳನ್ನು ರಕ್ಷಿಸಲು SORAI (ಆಫ್ರಿಕಾ ಮತ್ತು ಭಾರತದಲ್ಲಿ ನಮ್ಮ ರೈನೋಸ್ ಉಳಿಸಿ) ಎಂಬ ಚಾರಿಟಿ ಮೂಲಕ ರಕ್ಷಣೆ ಮಾಡಲಾಗುವುದು ಎಂದು ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ನಿಮ್ಮ ಜನ್ಮದಿನದಂದು ಮಧ್ಯಪ್ರದೇಶದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಿದ ಕ್ಷಣ ಇವತ್ತಿಗೂ ನೆನಪು ಹಾಗೂ ಕೊರೊನಾ ಸಮಯದಲ್ಲಿ ನಿಮ್ಮ ದೃಢ ನಿರ್ಧಾರಗಳನ್ನು ಯಾವುತ್ತೂ ಬರೆಯಲು ಸಾಧ್ಯವಿಲ್ಲ. ಈ ಸಂಕಷ್ಟ ಕಾಲದಲ್ಲಿ ಇತರ ದೇಶಗಳಿಗೆ ನೀಡಿದ ಸಹಾಯಕ್ಕೆ ಧನ್ಯವಾದಗಳು. ನಾನು ನಿಮ್ಮನ್ನು ಮತ್ತೆ ಭೇಟಿಯಾಗಲು ಉತ್ಸಾಹಕನಾಗಿದ್ದೇನೆ ಸರ್ ಎಂದು ಟ್ವಿಟರ್ ಹೇಳಿದ್ದಾರೆ.
Published On - 1:36 pm, Mon, 10 April 23