ಟಿಕೆಟ್ ವಿಂಡೋ ಮಹಾರಾಷ್ಟ್ರದಲ್ಲಿ, ಸ್ಟೇಷನ್ ಮಾಸ್ಟರ್ ಇರುವುದು ಗುಜರಾತ್‌ನಲ್ಲಿ; ಎರಡು ರಾಜ್ಯಗಳಿಗೆ ಸೇರಿದ ರೈಲು ನಿಲ್ದಾಣ ನೋಡಿದ್ದೀರಾ?

ಈ ನಿಲ್ದಾಣದಲ್ಲಿ ಒಂದು ಬೆಂಚ್ ಕೂಡ ಇದೆ. ಈ ಬೆಂಚ್ ನ ಅರ್ಧದಷ್ಟು ಭಾಗ ಮಹಾರಾಷ್ಟ್ರ ಮತ್ತು ಉಳಿದರ್ಧ ಗುಜರಾತ್‌ನಲ್ಲಿದೆ. ಈ ಬೆಂಚಿನ ಮೇಲೆ ಕುಳಿತವರು ಯಾವ ರಾಜ್ಯದಲ್ಲಿ ಕುಳಿತಿದ್ದಾರೆ ಎಂಬುದನ್ನು ಗಮನಿಸಬೇಕು.

ಟಿಕೆಟ್ ವಿಂಡೋ ಮಹಾರಾಷ್ಟ್ರದಲ್ಲಿ, ಸ್ಟೇಷನ್ ಮಾಸ್ಟರ್ ಇರುವುದು ಗುಜರಾತ್‌ನಲ್ಲಿ; ಎರಡು ರಾಜ್ಯಗಳಿಗೆ ಸೇರಿದ ರೈಲು ನಿಲ್ದಾಣ ನೋಡಿದ್ದೀರಾ?
ನವಾಪುರ್ ರೈಲು ನಿಲ್ದಾಣ
Follow us
ರಶ್ಮಿ ಕಲ್ಲಕಟ್ಟ
|

Updated on: Apr 10, 2023 | 12:59 PM

ಮಹಾರಾಷ್ಟ್ರದ (Maharashtra) ನಂದೂರ್‌ಬಾರ್‌ನಲ್ಲಿ ನವಾಪುರ್ ರೈಲು ನಿಲ್ದಾಣ (Navapur railway station) ಎಂಬ ರೈಲು ನಿಲ್ದಾಣವಿದೆ. ಇದರ ವಿಶೇಷತೆ ಏನೆಂದರೆ ಅದರ ಒಂದು ಭಾಗವು ಗುಜರಾತ್‌ನ (Gujarat) ತಾಪಿ ಜಿಲ್ಲೆಯಲ್ಲಿ ಮತ್ತು ಇನ್ನೊಂದು ಭಾಗವು ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿಯನ್ನು ಒಳಗೊಂಡಿರುವ ಏಕೈಕ ರೈಲು ನಿಲ್ದಾಣ ಇದಾಗಿದೆ. ನವಾಪುರ್ ರೈಲು ನಿಲ್ದಾಣ ಎರಡು ರಾಜ್ಯಗಳಿಗೆ ಸೇರಿರುವುದರ ಹಿಂದೆ ಒಂದು ಕಥೆಯಿದೆ. ನಿಲ್ದಾಣವನ್ನು ನಿರ್ಮಿಸಿದಾಗ ಮಹಾರಾಷ್ಟ್ರ ಮತ್ತು ಗುಜರಾತ್ ವಿಭಜಿಸಲಿಲ್ಲ, ಆದರೆ ಮೇ 1, 1961 ರಂದು ಮುಂಬೈ ಪ್ರಾಂತ್ಯವನ್ನು ವಿಭಜಿಸಿದಾಗ ಅದನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಎಂದು ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು.ಈ ರೀತಿ ವಿಭಜನೆ ಆಗುವಾಗ ನವಾಪುರ ನಿಲ್ದಾಣವು ಎರಡು ರಾಜ್ಯಗಳ ನಡುವೆ ಬಂದಿದ್ದು ಅಂದಿನಿಂದ ಇದು ವಿಭಿನ್ನ ಗುರುತನ್ನು ಹೊಂದಿದೆ.

ಈ ನಿಲ್ದಾಣದಲ್ಲಿ ಒಂದು ಬೆಂಚ್ ಕೂಡ ಇದೆ. ಈ ಬೆಂಚ್ ನ ಅರ್ಧದಷ್ಟು ಭಾಗ ಮಹಾರಾಷ್ಟ್ರ ಮತ್ತು ಉಳಿದರ್ಧ ಗುಜರಾತ್‌ನಲ್ಲಿದೆ. ಈ ಬೆಂಚಿನ ಮೇಲೆ ಕುಳಿತವರು ಯಾವ ರಾಜ್ಯದಲ್ಲಿ ಕುಳಿತಿದ್ದಾರೆ ಎಂಬುದನ್ನು ಗಮನಿಸಬೇಕು. ಈ ನಿಲ್ದಾಣದಲ್ಲಿ ಸೆಲ್ಫಿ ಪಾಯಿಂಟ್ ಮಾಡಲಾಗಿದೆ, ಅಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕಾಗಿ ಜನರು ದೂರದೂರುಗಳಿಂದ ಬರುತ್ತಾರೆ.

ಈ ನಿಲ್ದಾಣದ ಟಿಕೆಟ್ ವಿಂಡೋ ಮಹಾರಾಷ್ಟ್ರದಲ್ಲಿದೆ, ಸ್ಟೇಷನ್ ಮಾಸ್ಟರ್ ಗುಜರಾತ್‌ನಲ್ಲಿ ಕುಳಿತಿದ್ದಾರೆ, ಇದು ಮಾತ್ರವಲ್ಲದೆ ಈ ನಿಲ್ದಾಣದಲ್ಲಿ ನಾಲ್ಕು ವಿಭಿನ್ನ ಭಾಷೆಗಳಲ್ಲಿ ಪ್ರಕಟಣೆ ಇದೆ ಎಂದು ಎಎನ್‌ಐ ವರದಿ ಮಾಡಿದೆ.

ಮಾಹಿತಿಯನ್ನು ಹಿಂದಿ, ಗುಜರಾತಿ ಇಂಗ್ಲಿಷ್ ಮತ್ತು ಮರಾಠಿ ಹೀಗೆ ನಾಲ್ಕು ಭಾಷೆಗಳಲ್ಲಿ ಬರೆಯಲಾಗಿದೆ, ಆದ್ದರಿಂದ ಮಹಾರಾಷ್ಟ್ರ ಮತ್ತು ಗುಜರಾತ್ ಎರಡರಿಂದಲೂ ಬರುವ ಪ್ರಯಾಣಿಕರಿಗೆ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.

ಇದನ್ನೂ ಓದಿ: Space Sector: ಐದು ಪಟ್ಟು ಬೆಳವಣಿಗೆ ಹೊಂದುವ ದೂರಗಾಮಿ ಯೋಜನೆ ಹಾಕಿಕೊಂಡಿದೆ ಭಾರತೀಯ ಬಾಹ್ಯಾಕಾಶ ವಲಯ

ನವಾಪುರ ರೈಲು ನಿಲ್ದಾಣದ ಒಟ್ಟು ಉದ್ದ 800 ಮೀಟರ್, ಇದು 300 ಮೀಟರ್ ಮಹಾರಾಷ್ಟ್ರದಲ್ಲಿ ಮತ್ತು 500 ಮೀಟರ್ ಗುಜರಾತ್‌ನಲ್ಲಿ ಬರುತ್ತದೆ. ಈ ನಿಲ್ದಾಣವು ಮೂರು ಪ್ಲಾಟ್‌ಫಾರ್ಮ್‌ಗಳು ಮತ್ತು ನಾಲ್ಕು ರೈಲು ಹಳಿಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್