Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್ ಶರಣಾಗುವ ಸಾಧ್ಯತೆ, ಏ.14ರವರೆಗೆ ಪಂಜಾಬ್​ ಪೊಲೀಸರ ರಜೆಗಳು ರದ್ದು

ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​ನನ್ನು ಹಿಡಿಯಲು ಕಳೆದ ಮೂರು ವಾರಗಳಿಂದ ಪ್ರಯತ್ನಿಸುತ್ತಿದ್ದು, ನಿರಂತರವಾಗಿ ಪೊಲೀಸರಿಂದ ನುಣುಚಿಕೊಳ್ಳುತ್ತಿದ್ದಾನೆ.

Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್ ಶರಣಾಗುವ ಸಾಧ್ಯತೆ, ಏ.14ರವರೆಗೆ ಪಂಜಾಬ್​ ಪೊಲೀಸರ ರಜೆಗಳು ರದ್ದು
ಅಮೃತ್​ಪಾಲ್ ಸಿಂಗ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 07, 2023 | 10:18 AM

ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​(Amritpal  Singh) ನನ್ನು ಹಿಡಿಯಲು ಕಳೆದ ಮೂರು ವಾರಗಳಿಂದ ಪ್ರಯತ್ನಿಸುತ್ತಿದ್ದು, ನಿರಂತರವಾಗಿ ಪೊಲೀಸರಿಂದ ನುಣುಚಿಕೊಳ್ಳುತ್ತಿದ್ದಾನೆ. ಅಮೃತ್​ಪಾಲ್ ಈ ತಿಂಗಳ ಕೊನೆಯಲ್ಲಿ ಸಿಖ್ಖರ ಸಭೆ ಕರೆದಿದ್ದು, ಪಂಜಾಬ್​ಗೆ ಆಗಮಿಸುವ ಸಾಧ್ಯತೆ ಇದೆ. ಅಂದು ಪೊಲೀಸರಿಗೆ ಶರಣಾಗಬಹುದು ಎನ್ನಲಾಗಿದೆ.  ಏಪ್ರಿಲ್ 14ರ ಮೊದಲು ಸಿಖ್ ಸಂಘಟನೆಯನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.  ತಲೆಮರೆಸಿಕೊಂಡಿರುವ ಅವಧಿಯಲ್ಲಿ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿ ಅದರಲ್ಲಿ ಒಂದು ವಿಡಿಯೋದಲ್ಲಿ ಶರಣಾಗುವ ಕುರಿತು ಮಾತನಾಡಿದ್ದ. ಮತ್ತೊಂದು ವಿಡಿಯೋದಲ್ಲಿ ಜನರ ಮಧ್ಯೆ ಬರುತ್ತೇನೆ ಆದರೆ ಶರಣಾಗುವುದಿಲ್ಲ ಎಂದು ತಿಳಿಸಿದ್ದ. ಅಮೃತ್​ಪಾಲ್​ನ 114 ಸಹಚರರು ಪೊಲೀಸರ ವಶದಲ್ಲಿದ್ದಾರೆ.

ಅದಲ್ಲದೆ ಅಮೃತ್‌ಪಾಲ್‌ರನ್ನು ಪರಾರಿಯಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸರು ಘೋಷಣೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿರುವ ಆಪಾದನೆ ಕೂಡ ಈತನ ಮೇಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದು ಸಿಂಗ್ ಧಮ್ಕಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಅಮೃತ್‌ಪಾಲ್ ಸಹಾಯಕರಾದ ದಲ್ಜೀತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ಪ್ರಧಾನ್‌ಮಂತ್ರಿ ಬಜೇಕಾ ಈ ನಾಲ್ವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ.

ಮತ್ತಷ್ಟು ಓದಿ: Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ಸಿಂಗ್ ಯೂಟ್ಯೂಬ್​ ಲೈವ್​ ಬಂದು ಹೇಳಿದ್ದೇನು?

ದಿವಂಗತ ನಟ, ವಕೀಲ ಹಾಗೂ ಕಾರ್ಯಕರ್ತ ದೀಪ್ ಸಿಧು ಅವರು ಸೆಪ್ಟೆಂಬರ್ 30, 2021 ರಂದು ಸ್ಥಾಪಿಸಿದರು. ಈ ಸಂಘಟನೆ ಪಂಜಾಬ್‌ನ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಅವರಿಗಾಗಿ ಹೋರಾಡುವ ಸಂಸ್ಥೆಯಾಗಿದೆ ಎಂದು ದೀಪ್ ಸಧು ಹೇಳಿದ್ದರು.

ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದಲ್ಲಿ 1993 ರಲ್ಲಿ ಜನಿಸಿದ ಅಮೃತಪಾಲ್ ಸಿಂಗ್ ದುಬೈ ಯಲ್ಲಿ ನೆಲೆಸಿದವರಾಗಿದ್ದು, ವ್ಯಾಪಾರ ಕುಟುಂಬದಿಂದ ಬಂದವರು. ಆತ ತನ್ನನ್ನು ತಾನು ಖಲಿಸ್ತಾನಿ ಎಂದು ಬಣ್ಣಿಸಿದ್ದು 1984 ರಲ್ಲಿ ಭಾರತೀಯ ಸೇನೆಯ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಮೃತನಾದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯಿಂದ ಪ್ರಭಾವಿತರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:15 am, Fri, 7 April 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ