ಮಹಾರಾಷ್ಟ್ರದ ರೈತ ಚಳವಳಿ ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಶರದ್ ಪವಾರ್, ವಿಧಾನಸಭಾ ಚುನಾವಣೆಯಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಮೋಸ ಮಾಡಿದ್ದಾರೆ ಎನ್ನುವ ವ್ಯಾಖ್ಯಾನದ ಮೂಲಕ ಎನ್ಡಿಎಗೆ ಹೊಡೆತ ಕೊಡಲು ಶರದ್ ಪವಾರ್ ನೇತೃತ್ವದ ಎನ್ಸಿಪಿ, ಯಶಸ್ವಿಯಾಗಿತ್ತು. ಅದೇ ಫಲಿತಾಂಶವನ್ನು ಶರದ್ ಪವಾರ್, ಸುಪ್ರಿಯಾ ಸುಳೆ ಈಗ ವಿಧಾನಸಭಾ ಚುನಾವಣೆಯಲ್ಲೂ ನಿರೀಕ್ಷಿಸಿದ್ದರು.
ಆದರೆ ಆ ನಿರೀಕ್ಷೆ ವಿಫಲವಾಗಿದೆ. ಅದಕ್ಕೆ ಕಾರಣಗಳು ಸಾಕಷ್ಟಿವೆ. ಮೊದಲನೆಯದೇನೆಂದರೆ ಅಜಿತ್ ಪವಾರ್ ಬಣ ಅಷ್ಟು ಪ್ರಾಬಲ್ಯ ಹೊಂದಿಲ್ಲ ಎಂದು ಮೊದಲಿನಿಂದಲೂ ವಾದವಿತ್ತು. ಆ ವಾದವನ್ನು ಹೋಗಲಾಡಿಸಲು ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಅಜಿತ್ ಪವಾರ್ ಪಕ್ಷದ ಚಿಹ್ನೆಯ ಮೂಲಕ ನಿಲ್ಲಿಸಿತ್ತು. ಇದರಿಂದ ಬಿಜೆಪಿ ಪರವಾದ ಮತಗಳು ವಿಭಜನೆಯಾಗಲಿಲ್ಲ, ಹಾಗೆಯೇ ಅಜಿತ್ ಪವಾರ್ ಬಣದ ಮತಗಳು ಕೂಡ ಶರದ್ ವಿರುದ್ಧವಾಗಿಯೇ ಹೋದವು.
ಶರದ್ ಪವಾರ್ ಬಣಕ್ಕೆ ಆಗಿದ್ದ ಮತ್ತೊಂದು ಸಮಸ್ಯೆ ಏನೆಂದರೆ ಅಜಿತ್ ಪವಾರ್ ಜತೆಗೆ ಹೋಗಿದ್ದವರು ಉಳಿದ ಬಹುತೇಕ ನಾಯಕರು ಅಜಿತ್ ಪಕ್ಷದ ದೊಡ್ಡ ದೊಡ್ಡ ನಾಯಕರು, ಶರದ್ ಪಕ್ಷದ ಉಳಿದ ನಾಯಕರು ಅಜಿತ್ ಪವಾರ್ ಜತೆಗಿದ್ದರು, ಇದರಿಂದಲೂ ಅವರೆಲ್ಲಾ ನಾಯಕರು ಪ್ರಾದೇಶಿಕವಾಗಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದರು.
ಮತ್ತಷ್ಟು ಓದಿ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ, ದೇವೇಂದ್ರ ಫಡ್ನವಿಸ್ ಹೇಳಿದ್ದೇನು?
ಇದರಿಂದ ಶರದ್ ಪವಾರ್ಗೆ ಶರದ್ ಪವಾರ್ ಹೆಸರು ಬಿಟ್ಟು, ಶರದ್ ಪವಾರ್ ಬಣಕ್ಕೆ ಸ್ಥಳೀಯ ನಾಯಕರ ಕೊರತೆ ಬಹಳ ದೊಡ್ಡ ಮಟ್ಟದಲ್ಲಿತ್ತು. ಅದೇ ಫಲಿತಾಂಶದಲ್ಲಿ ಈಗ ಗೋಚರಿಸುತ್ತಿದೆ. ಇನ್ನೊಂದು ಕಡೆ ಶರದ್ ಪವಾರ್ ಬಣಕ್ಕೆ ಸಾಕಷ್ಟು ಕಡೆ ಉತ್ತಮ ಅಭ್ಯರ್ಥಿಗಳ ಕೊರತೆ ಇತ್ತು, ಅದು ಕೂಡ ಚುನಾವಣೆಯಲ್ಲಿ ಹೊಡೆತ ಕೊಟ್ಟಿದೆ, ಹೀಗೆ ಚುನಾವಣೆಯಲ್ಲೂ ಸೋತಿರುವುದರಿಂದ ಶರದ್ ಪವಾರ್ ಬಣಕ್ಕೆ ಅಸ್ತಿತ್ವದ ಕೊರತೆ ಎದುರಾಗಿದೆ.
ಶರದ್ ಪವಾರ್ ಅವರನ್ನೇ ನಂಬಿಕೊಂಡು ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು. ಈಗ ಅದು ಕೂಡ ಬದಲಾಗಿದೆ. ಏಕೆಂದರೆ ಶರದ್ ಪವಾರ್ ತಮ್ಮ ಮೊದಲಿನ ರಾಜಕೀಯ ಹೊಳಪನ್ನು ಕಳೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ನರೇಷನ್ ಅನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಕೇವಲ ಮರಾಠ ಹಾಗೂ ಸಂವಿಧಾನ, ಜಾತಿ, ಕೆಲವು ವಿಚಾರಗಳಿಗೆ ಪಕ್ಷದ ಪ್ರಚಾರವನ್ನು ಮೀಸಲಿಟ್ಟಿದ್ದರು, ಹೀಗಾಗಿ ಮಹಾರಾಷ್ಟ್ರದ ಅಸಲಿ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲ, ಇದು ಹರ್ಯಾಣದಲ್ಲಿ ಆದಂತೆಯೇ ಆಗಿತ್ತು ಮರಾಠ ಹೊರತಾದ ಉಳಿದ ಜಾತಿ ಸಮುದಾಯದವರು, ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ಅಘಾಡಿ ವಿರುದ್ಧವಾಗಿ ಬಿಜೆಪಿಯ ಪರ ನಿತ್ತಂತೆ ಮೇಲ್ನೋಟಕ್ಕೆ ಕಾಣಬಹುದು, ಹರ್ಯಾಣದಲ್ಲಿ ಬಿಜೆಪಿ ಇದೇ ರೀತಿ ಕಾರ್ಯತಂತ್ರ ರೂಪಿಸುವ ಮೂಲಕ ಕಾಂಗ್ರೆಸ್ನ್ನು ಕಟ್ಟಿಹಾಕಿತ್ತು. ಈ ಕಾರಣದಿಂದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೊಂದಿದ್ದ ಮೇಲುಗೈನ್ನು ಶರದ್ ಪವಾರ್ ಹಾಗೂ ರಾಹುಲ್ ಗಾಂಧಿ ಮುಂದುವರೆಸಲು ಸಾಧ್ಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ