ಜೈಲ್ ಟೂರಿಸಂ ಉದ್ಘಾಟಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

| Updated By: ganapathi bhat

Updated on: Apr 06, 2022 | 8:38 PM

ಮಹಾತ್ಮ ಗಾಂಧಿ, ಜವಾಹರ್​ಲಾಲ್ ನೆಹರು, ಮೋತಿಲಾಲ್ ನೆಹರು, ಸರೋಜಿನಿ ನಾಯ್ಡು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸಹಿತ ಹಲವು ಸ್ವಾತಂತ್ರ್ಯ ಹೋರಾಟಗಾರರು ಈ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದರು.

ಜೈಲ್ ಟೂರಿಸಂ ಉದ್ಘಾಟಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us on

ಮುಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‘ಜೈಲ್ ಟೂರಿಸಂ’ನ್ನು, ವೀಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟನೆ ನಡೆಸಿದ್ದಾರೆ. 72ನೇ ಗಣರಾಜ್ಯೋತ್ಸವ ದಿನ (ಜ.26) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜೊತೆಗೆ ಜೈಲ್ ಟೂರಿಸಂ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ, ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲ್ ಟೂರಿಸಂನ್ನು ಆರಂಭಿಸಲಾಗಿದೆ.

ಹಲವು ಸ್ವಾತಂತ್ರ್ಯ ಚಳುವಳಿಗಾರರು ಸೆರೆವಾಸ ಅನುಭವಿಸಿದ್ದ ಜೈಲು ಇದಾಗಿದೆ. ಮಹಾತ್ಮ ಗಾಂಧಿ, ಜವಾಹರ್​ಲಾಲ್ ನೆಹರು, ಮೋತಿಲಾಲ್ ನೆಹರು, ಸರೋಜಿನಿ ನಾಯ್ಡು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸಹಿತ ಹಲವು ಸ್ವಾತಂತ್ರ್ಯ ಹೋರಾಟಗಾರರು ಈ ಕಾರಾಗೃಹದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಕಾರಾಗೃಹ ಪ್ರವಾಸೋದ್ಯಮದ ಉದ್ಘಾಟನೆಯನ್ನು ಗೆನ್ಬಾ ಸೋಪನ್​ರಾವ್ ಮೋಜ್ ವಿದ್ಯಾಲಯದ 10 ಮಂದಿ ವಿದ್ಯಾರ್ಥಿಗಳು ನೆರವೇರಿಸಿದ್ದಾರೆ. ಜೊತೆಗೆ, ಮೂವರು ಶಿಕ್ಷಕಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೊತೆಗೆ, ಕಾರಾಗೃಹದ ಮೊದಲ ಪ್ರವಾಸಿಗರಾಗಿ ಅವರು ಸ್ಥಳಕ್ಕೆ ಭೇಟಿನೀಡಿದ್ದಾರೆ.

ನಾವು ಇತಿಹಾಸದ ವಿವಿಧ ಘಟನೆಗಳಿಗೆ ಸಾಕ್ಷಿಯಾಗಿದ್ದ ಸೆರೆಮನೆಗೆ ಭೇಟಿ ನೀಡಿದ್ದೇವೆ. ಮಹಾತ್ಮ ಗಾಂಧಿ, ನೆಹರು ಸೆರೆವಾಸ ಮಾಡಿದ್ದ ಜೈಲು ಮತ್ತು ಮರಣದಂಡನೆ ವಿಧಿಸುತ್ತಿದ್ದ ಸ್ಥಳ ಸಂದರ್ಶಿಸಿದ್ಧೇವೆ. ಮಕ್ಕಳಿಗೆ ಪಾಠ ಮಾಡುವ ವಿಚಾರಗಳ ಸ್ಥಳಕ್ಕೆ ಪ್ರತ್ಯಕ್ಷ ಭೇಟಿ ಕೊಟ್ಟದ್ದು ಒಳ್ಳೆಯ ಅನುಭವ ಎಂದು ಕಾರಾಗೃಹಕ್ಕೆ ಭೇಟಿ ಕೊಟ್ಟ ಶಿಕ್ಷಕಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರದಿಂದ ಪುಸ್ತಕ ಬಿಡುಗಡೆ.. ಫಡ್ನವೀಸ್ ಸಹ ಭಾಗಿ: ತಾರಕಕ್ಕೇರುತ್ತ ಅಸಮಾಧಾನ?

Published On - 1:14 pm, Wed, 27 January 21