ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್

|

Updated on: Nov 24, 2019 | 1:23 PM

ದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸರ್ಕಾರ ರಚನೆ ವಿಚಾರ ಸಂಬಂಧಿಸಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನೆ ಪಕ್ಷಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ವು. ಈ ಕುರಿತು ಇಂದು ರಿಟ್‌ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತಕ್ಷಣಕ್ಕೆ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ನಾಳೆ ಬೆಳಗ್ಗೆ 10.30ಕ್ಕೆ ಮತ್ತೆ ವಿಚಾರಣೆ ಶುರುವಾಗಲಿದ್ದು, ನಾಳೆ ರಾಜ್ಯಪಾಲರ ಆದೇಶ ಪತ್ರ, ಬೆಂಬಲ ಪತ್ರ ಸಲ್ಲಿಸಿಸುವಂತೆ ತಿಳಿಸಿದೆ. ವಕೀಲರಿಗೆ, ಸಿಎಂ […]

ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್
Follow us on

ದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸರ್ಕಾರ ರಚನೆ ವಿಚಾರ ಸಂಬಂಧಿಸಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನೆ ಪಕ್ಷಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ವು. ಈ ಕುರಿತು ಇಂದು ರಿಟ್‌ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತಕ್ಷಣಕ್ಕೆ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನಾಳೆ ಬೆಳಗ್ಗೆ 10.30ಕ್ಕೆ ಮತ್ತೆ ವಿಚಾರಣೆ ಶುರುವಾಗಲಿದ್ದು, ನಾಳೆ ರಾಜ್ಯಪಾಲರ ಆದೇಶ ಪತ್ರ, ಬೆಂಬಲ ಪತ್ರ ಸಲ್ಲಿಸಿಸುವಂತೆ ತಿಳಿಸಿದೆ. ವಕೀಲರಿಗೆ, ಸಿಎಂ ದೇವೇಂದ್ರ ಫಡ್ನವಿಸ್, ಅಜಿತ್‌ ಪವಾರ್‌ಗೂ ಸುಪ್ರೀಂಕೋರ್ಟ್‌ನಿಂದ ನೋಟಿಸ್ ನೀಡಲಾಗಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿದಂತೆ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಇಂದು ನಡೆದ ವಿಚಾರಣೆಯಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Published On - 12:55 pm, Sun, 24 November 19