ಮುಂಬೈ: ಶಾಲೆಗಳಲ್ಲಿ ಕೃಷಿ ಕಲಿಸುವುದಾಗಿ ಘೋಷಿಸಿದ ಎರಡು ವರ್ಷಗಳ ನಂತರ ಮಹಾರಾಷ್ಟ್ರ ರಾಜ್ಯ ಸರ್ಕಾರವು ಪಠ್ಯಕ್ರಮದಲ್ಲಿ ( school curriculum) ವಿಷಯವನ್ನು ಸೇರಿಸುವ ಆರಂಭಿಕ ಯೋಜನೆಯನ್ನು ಹೊರತಂದಿದೆ. ರಾಜ್ಯದ ಕೃಷಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರನ್ನೊಳಗೊಂಡ ಸಮಿತಿ ಸಿದ್ಧಪಡಿಸಿದ ಯೋಜನೆಯ ಪ್ರಕಾರ ಎಲ್ಲಾ ತರಗತಿಗಳಲ್ಲಿ ಕೃಷಿ ವಿಷಯಗಳನ್ನು ಬೋಧಿಸಲಾಗುವುದು. ಪಠ್ಯಕ್ರಮವನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುವುದು. 1 ರಿಂದ 5 ನೇ ತರಗತಿಗಳು, 6 ರಿಂದ 8 ನೇ ತರಗತಿಗಳು ಮತ್ತು 9 ರಿಂದ 10 ನೇ ತರಗತಿಗಳು ಹೀಗೆ ಮೂರು ಹಂತದಲ್ಲಿ ಜಾರಿಗೆ ಬರುತ್ತದೆ. ಇದು ಕೃಷಿಯ ಪ್ರಾಮುಖ್ಯತೆ, ಉದ್ಯೋಗಾವಕಾಶ ಮತ್ತು ಕೃಷಿಯ ಬಗ್ಗೆ ಆಳವಾದ ಮಾಹಿತಿ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ.
Also Read:
ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ (National Education Policy 2020) ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಹಲವಾರು ವೃತ್ತಿಪರ ವಿಷಯಗಳಲ್ಲಿ ಕೃಷಿಯೂ ಒಂದಾಗಿದೆ. ಈ ವಿಷಯಕ್ಕಾಗಿ ವಿವರವಾದ ಪಠ್ಯಕ್ರಮವನ್ನು ರೂಪಿಸಲು ರಾಜ್ಯವು ಈಗ ತಜ್ಞರ ಸಮಿತಿಗಳನ್ನು ನೇಮಿಸುತ್ತದೆ.
Published On - 1:55 pm, Wed, 26 April 23