ವಿಚ್ಛೇದನ ಪಡೆದಿದ್ದ ಮಹಿಳೆ ಮಾಜಿ ಪತಿಯಿಂದ ಹೆಚ್ಚಿನ ಪರಿಹಾರ ಹಣ ಪಡೆಯಲು ಆತನನ್ನೇ ಅಪಹರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಪತಿ ಉಲ್ಲಾಸ್ನಗರ ಪ್ರದೇಶದ ಪಂಜಾಬಿ ಕಾಲೊನಿಯ ನಿವಾಸಿಯಾಗಿದ್ದಾರೆ. ಜೂನ್ 20ರಂದು ಅಂಗಡಿಯಿಂದ ಸಾಮಾನುಗಳನ್ನು ಕೊಳ್ಳಲು ಹೊರಬಂದಾಗ ಗುಂಪೊಂದು ಅವರನ್ನು ಅಪಹರಿಸಿತ್ತು.
ವಿಚ್ಛೇದಿತ ಪತ್ನಿಯ ಒತ್ತಾಯದ ಮೇರೆಗೆ ವ್ಯಕ್ತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಚ್ಛೇದಿತ ಪತ್ನಿಗೆ ನೀಡುವ ಪರಿಹಾರ ಮೊತ್ತವನ್ನು 15 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವಂತೆ ಗ್ಯಾಂಗ್ ಬೆದರಿಕೆ ಹಾಕಿತ್ತು.
ಆ ವ್ಯಕ್ತಿ ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಗ್ಯಾಂಗ್ ಅವರನ್ನು ಅಪಹರಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದಿತ್ತು ಎಂದು ಉಲ್ಲಾಸ್‌ನಗರದ ಸೆಂಟ್ರಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಕ್ತಿಯನ್ನು ಸೆಪ್ಟೆಂಬರ್ 28 ರವರೆಗೆ ಪಾಳುಬಿದ್ದ ಮನೆಯೊಂದರಲ್ಲಿ ಬಂಧಿಯಾಗಿರಿಸಲಾಯಿತು ಮತ್ತು ಅವನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಇನ್ನಿಬ್ಬರನ್ನು ಉಸ್ತುವಾರಿ ವಹಿಸಲಾಯಿತು. ತನ್ನ ಪತ್ನಿಗೆ ಪರಿಹಾರ ಮೊತ್ತವನ್ನು ಹೆಚ್ಚಿಗೆ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.
ಮತ್ತಷ್ಟು ಓದಿ: ಮಗುವಾಗಿದ್ದಾಗ ಅಪಹರಣ, ತನ್ನ ಪ್ರಕರಣದ ಆರೋಪಿಗಳಿಗೆ 17 ವರ್ಷಗಳ ಬಳಿಕ ಶಿಕ್ಷೆ ಕೊಡಿಸಿದ ವಕೀಲ
ಹೇಗೋ ಅವರು ಅಪಹರಣಕಾರರ ಬಿಗಿಮುಷ್ಟಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವ್ಯಕ್ತಿಯ ದೂರಿನ ಆಧಾರದ ಮೇಲೆ ಥಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ನಿ, ಆಕೆಯ ಸಹೋದರ ಮತ್ತು ಇತರ ನಾಲ್ವರು ಸಂಬಂಧಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ