ಮಹಾರಾಷ್ಟ್ರ: ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭಂಡಾರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮುಂಜಾನೆ 2 ಗಂಟೆಗೆ ಭಂಡಾರ ಜಿಲ್ಲಾ ಆಸ್ಪತ್ರೆಯ ಎಸ್‌ಎನ್‌ಸಿಯು ಘಟಕದಲ್ಲಿ ಈ ಅಪಘಡ ಸಂಭವಿಸಿದ್ದು, 1 ದಿನದಿಂದ 3 ತಿಂಗಳೊಳಗಿನ 10 ಮಕ್ಕಳು ಸಜೀವದಹನವಾಗಿದ್ದಾರೆ. ಐಸಿಯುನಲ್ಲಿದ್ದ 17 ಮಕ್ಕಳ ಪೈಕಿ 7 ಶಿಶುಗಳ ರಕ್ಷಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಪ್ರಮೋದ್ ಖಂಡೇಟ್ ಹೇಳಿದ್ದಾರೆ.
Ten children died in a fire that broke out at Sick Newborn Care Unit (SNCU) of Bhandara District General Hospital at 2 am today. Seven children were rescued from the unit: Pramod Khandate, Civil Surgeon, Bhandara, Maharashtra pic.twitter.com/bTokrNQ28t
— ANI (@ANI) January 9, 2021