ದೆಹಲಿ ಜೂನ್ 05: ದೆಹಲಿಯ ಲಜಪತ್ ನಗರದಲ್ಲಿರುವ (Lajpat Nagar) ಕಣ್ಣಿನ ಆಸ್ಪತ್ರೆಯಲ್ಲಿ (eye hospital) ಬುಧವಾರ ಭಾರೀ ಅಗ್ನಿ ಅವಘಡ (Fire)ಸಂಭವಿಸಿದೆ. ಬೆಂಕಿಯನ್ನು ನಂದಿಸಲು 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾರೂ ಗಾಯಗೊಂಡಿರುವ ವರದಿಗಳಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೆಳಗ್ಗೆ 11.30ಕ್ಕೆ ಬೆಂಕಿ ಅವಘಡ ಸಂಭವಿಸಿದ್ದರ ಬಗ್ಗೆ ಕರೆ ಬಂದಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಆಸ್ಪತ್ರೆಯು ನವದೆಹಲಿಯ ಲಜಪತ್ ನಗರ ಪ್ರದೇಶದ ವಿನೋಬಪುರಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿದೆ.
ನವದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ಐ ಮಂತ್ರ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದಕೆಲವೇ ದಿನಗಳಲ್ಲಿ ಐ 7 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವಘಡ ಸಂಭವಿಸಿರುವುದು ಗೊತ್ತಾದ ಕೂಡಲೇ ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
VIDEO | Massive fire breaks out at Eye-7 Hospital in Delhi’s Lajpat Nagar area. Several fire tenders on the spot. More details awaited. pic.twitter.com/4whP0PIjFF
— Press Trust of India (@PTI_News) June 5, 2024
ಕಳೆದ ತಿಂಗಳು, ವಿವೇಕ್ ವಿಹಾರ್‌ನ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಆರು ನವಜಾತ ಶಿಶುಗಳು ಸಾವಿಗೀಡಾದ್ದವು. ವಿವೇಕ್ ವಿಹಾರ್‌ನಲ್ಲಿರುವ ಐದು ಹಾಸಿಗೆಗಳ ನವಜಾತ ಶಿಶು ಕೇಂದ್ರದಲ್ಲಿ ಹಲವಾರು ಸುರಕ್ಷತಾ ಲೋಪಗಳು ಬೆಳಕಿಗೆ ಬಂದಿದ್ದರೂ ಸಹ, 27 ಆಮ್ಲಜನಕ ಸಿಲಿಂಡರ್‌ಗಳನ್ನು ಏಕೆ ಇರಿಸಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದೆ. ದೆಹಲಿ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಅಗ್ನಿಶಾಮಕ ಲೆಕ್ಕಪರಿಶೋಧನೆ ನಡೆಸಲು ನಿರ್ದೇಶಿಸಿದೆ.
ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್
ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಐದು ಆಮ್ಲಜನಕ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಇತರ ಐದು ನವಜಾತ ಶಿಶುಗಳು ಸಹ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ, ಮಂಗಳವಾರ ಮುಂಜಾನೆ ಗುರುಗ್ರಾಮ್‌ನ ಆಂಬಿಯೆನ್ಸ್ ಮಾಲ್‌ನ ಹಿಂಭಾಗದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಸೋಮವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಯಂತ್ರಕ ಪ್ರೋಟೋಕಾಲ್‌ಗಳು ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಾದ ಅನುಸರಣೆಗೆ ಒತ್ತು ನೀಡಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Wed, 5 June 24