ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ ಮೂರನೇ ಮಹಿಳೆ ಮಾಧುರಿ ಕಾನಿಟ್ಕರ್

|

Updated on: Mar 01, 2020 | 8:58 AM

ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ ದೇಶದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮಾಧುರಿ ಕಾನಿಟ್ಕರ್ ಪಾತ್ರರಾಗಿದ್ದಾರೆ. ಮಾಧುರಿ ಅವರ ಪತಿ ರಾಜೀವ್ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದು, ಈ ಶ್ರೇಣಿಗೆ ಏರಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಧುರಿ ಸೇನೆಯಲ್ಲಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪೌರತ್ವದ ಕಿಚ್ಚಿಗೆ ಇಬ್ಬರು ಬಲಿ: ಮೇಘಾಲಯದ ಪೂರ್ವ ಖಾಶಿ ಪರ್ವತ ಪ್ರದೇಶದಲ್ಲಿ ಸಿಎಎ ಪರ-ವಿರೋಧಿ ಗುಂಪುಗಳ ನಡುವೆ ಭುಗಿಲೆದ್ದ ಹಿಂಸಾಚಾರ ಇಬ್ಬರನ್ನು ಬಲಿ ಪಡೆದಿದೆ. ಗಲಭೆಯಲ್ಲಿ ಹಲವರಿಗೆ ಗಾಯಗಳಾಗಿವೆ. […]

ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ ಮೂರನೇ ಮಹಿಳೆ ಮಾಧುರಿ ಕಾನಿಟ್ಕರ್
Follow us on

ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ ದೇಶದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮಾಧುರಿ ಕಾನಿಟ್ಕರ್ ಪಾತ್ರರಾಗಿದ್ದಾರೆ. ಮಾಧುರಿ ಅವರ ಪತಿ ರಾಜೀವ್ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದು, ಈ ಶ್ರೇಣಿಗೆ ಏರಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಧುರಿ ಸೇನೆಯಲ್ಲಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಪೌರತ್ವದ ಕಿಚ್ಚಿಗೆ ಇಬ್ಬರು ಬಲಿ:
ಮೇಘಾಲಯದ ಪೂರ್ವ ಖಾಶಿ ಪರ್ವತ ಪ್ರದೇಶದಲ್ಲಿ ಸಿಎಎ ಪರ-ವಿರೋಧಿ ಗುಂಪುಗಳ ನಡುವೆ ಭುಗಿಲೆದ್ದ ಹಿಂಸಾಚಾರ ಇಬ್ಬರನ್ನು ಬಲಿ ಪಡೆದಿದೆ. ಗಲಭೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಶಿಲ್ಲಾಂಗ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. 6 ಜಿಲ್ಲೆಗಳಲ್ಲಿ ಇಂಟರ್​ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲಕಿಗೆ ಥಳಿಸಿ, ತಲೆ ಬೋಳಿಸಿದ್ರು:
ಹುಡುಗನ ಜೊತೆ ಫೋನ್​​ನಲ್ಲಿ ಮಾತನಾಡುತ್ತಿದ್ದ ಆರೋಪದಡಿ ಅಪಾಪ್ತ ಬಾಲಕಿಗೆ ಥಳಿಸಿ, ತಲೆಬೋಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸೊಂಡ್ವಾ ಪ್ರದೇಶದ ಅಲಿರಾಜ್​ಪುರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಬಾಲಕಿ ನೆರವಿಗೆ ಯಾರೂ ಕೂಡ ಧಾವಿಸಿಲ್ಲ. ಘಟನೆ ಸಂಬಂಧ ಮೂವರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದು ಬಂಧಿಸಿದ್ದಾರೆ.

ಬೋಟ್​ ಮಗುಚಿ ಹಲವರು ನಾಪತ್ತೆ:
ಉತ್ತರಪ್ರದೇಶದ ಗಂಗಾನದಿಯಲ್ಲಿ ಬೋಟ್​​ ಮಗುಚಿ ಹಲವರು ಕಣ್ಮರೆಯಾಗಿರೋ ಘಟನೆ ನಡೆದಿದೆ. ಮಾಹೇಜಿ ಹಳ್ಳಿಯ ಜನರು ಗಾಜೀಪುರದಿಂದ ಬೋಟ್​ನಲ್ಲಿ ವಾಪಸ್ ಆಗುತ್ತಿದ್ರು. ಈ ವೇಳೆ ಚಾಂಡೌಲಿಯಲ್ಲಿ ಬೋಟ್ ಮಗುಚಿದ್ದು ಕಣ್ಮರೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕಾಲು ಜಾರಿ ಬಿದ್ದ ನ್ಯಾಯಮೂರ್ತಿಗಳು:
ಉತ್ತರಾಖಂಡ್​​ನ ಹೈಕೋರ್ಟ್​​ ನ್ಯಾಯಮೂರ್ತಿ ಪೂಜೆ ಸಲ್ಲಿಸುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅದೃಷ್ಟವಶಾತ್ ನ್ಯಾಯಮೂರ್ತಿ ರಮೇಶ್ ರಂಗನಾಥನ್​ ಅಪಾಯದಿಂದ ಪಾರಾಗಿದ್ದಾರೆ. ದೇವಪ್ರಯಾಗ್​​​ನಲ್ಲಿ ಸಂಗಮಕ್ಕೆ ಭೇಟಿ ನೀಡಿದ್ದ ಈ ಘಟನೆ ಸಂಭವಿಸಿದೆ.

ಜೀವಜಲಕ್ಕೆ ಹಾಹಾಕಾರ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಡಿಯೋ ನೀರಿಗೆ ಜನರು ಪರದಾಡುತ್ತಿದ್ದಾರೆ. ದೆಹಲಿಯ ಕಾರ್ವಾಲ್​ ನಗರ ಪ್ರದೇಶದಲ್ಲಿ ಜೀವಜಲಕ್ಕೆ ಹಾಹಾಕಾರ ಶುರುವಾಗಿದೆ. ನೀರಿನ ಕ್ಯಾನ್​ಗಳನ್ನು ಹಿಡಿದು ಟ್ಯಾಂಕರ್​​ನಲ್ಲಿ ಜನರು ನೀರು ತುಂಬಿಕೊಂಡು ಹೋಗ್ತಿದ್ದಾರೆ..

ಅಮೆರಿಕದಲ್ಲಿ ಕೊರೊನಾಗೆ ಮೊದಲ ಬಲಿ:
ಅಮೆರಿಕದಲ್ಲಿ ಕೊರೊನಾ ವೈರಸ್ ಮೊದಲ ಬಲಿ ಪಡೆದಿದೆ. ವಾಷಿಂಗ್ಟನ್​ಲ್ಲಿ 50 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್​ಗೆ ಬಲಿಯಾಗಿದ್ದು, ಅಮೆರಿಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಬಗ್ಗೆ ಮಾತನಾಡಿರೋ ಅಧ್ಯಕ್ಷ ಟ್ರಂಪ್, ಈ ಬಗ್ಗೆ ಯಾರೂ ಹೆದರಿಕೊಳ್ಳೋ ಅವಶ್ಯತಕತೆ ಇಲ್ಲ. ಕೂಲಾಗಿ ಇರುವಂತೆ ಮನವಿ ಮಾಡಿದ್ದಾರೆ.