ಮದುವೆಯಾಗಿ 24 ಗಂಟೆಗಳ ಒಳಗೆ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ

ಮದುವೆ(Marriage)ಯಾಗಿ 24 ಗಂಟೆಯೊಳಗೆ ಪತ್ನಿಯನ್ನು ಗಂಡ ತನ್ನ ಮನೆಯಿಂದ ಹೊರಗೆ ಹಾಕಿರುವ ಆಘಾತಕಾರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮದುವೆಯಲ್ಲಾ ಮುಗಿದ ಬಳಿಕ ಪತ್ನಿ ಬಳಿ ನಿಮ್ಮ ಪೋಷಕರಿಗೆ ಒಂದು ಬೈಕ್ ಅಥವಾ 2 ಲಕ್ಷ ಹಣ ಕೊಡುವಂತೆ ಕೇಳು ಎಂದು ಪತಿ ಒತ್ತಡ ಹಾಕಿದ್ದ. ಅದಕ್ಕೆ ಆಕೆ ಒಪ್ಪದ ಕಾರಣ ಬೇರೇನೂ ಆಲೋಚಿಸದೆ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ವಧು ತನ್ನ ಅತ್ತೆಯ ಮನೆಗೆ ಬಂದ ಕೂಡಲೇ ವರನ ಕುಟುಂಬ ವರದಕ್ಷಿಣೆ ಬೇಡಿಕೆ ಇಟ್ಟಿದ್ದು ಮದುವೆಯಾಗಿ 24 ಗಂಟೆಗಳಲ್ಲಿ ಈ ಸಂಬಂಧ ಕೊನೆಗೊಂಡಿದೆ.

ಮದುವೆಯಾಗಿ 24 ಗಂಟೆಗಳ ಒಳಗೆ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ
ಮದುವೆ

Updated on: Dec 03, 2025 | 9:59 AM

ಕಾನ್ಪುರ, ಡಿಸೆಂಬರ್ 03:  ಮದುವೆ(Marriage)ಯಾಗಿ 24 ಗಂಟೆಯೊಳಗೆ ಪತ್ನಿಯನ್ನು ಗಂಡ ತನ್ನ ಮನೆಯಿಂದ ಹೊರಗೆ ಹಾಕಿರುವ ಆಘಾತಕಾರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮದುವೆಯಲ್ಲಾ ಮುಗಿದ ಬಳಿಕ ಪತ್ನಿ ಬಳಿ ನಿಮ್ಮ ಪೋಷಕರಿಗೆ ಒಂದು ಬೈಕ್ ಅಥವಾ 2 ಲಕ್ಷ ಹಣ ಕೊಡುವಂತೆ ಕೇಳು ಎಂದು ಪತಿ ಒತ್ತಡ ಹಾಕಿದ್ದ. ಅದಕ್ಕೆ ಆಕೆ ಒಪ್ಪದ ಕಾರಣ ಬೇರೇನೂ ಆಲೋಚಿಸದೆ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ.

ವಧು ತನ್ನ ಅತ್ತೆಯ ಮನೆಗೆ ಬಂದ ಕೂಡಲೇ ವರನ ಕುಟುಂಬ ವರದಕ್ಷಿಣೆ ಬೇಡಿಕೆ ಇಟ್ಟಿದ್ದು ಮದುವೆಯಾಗಿ 24 ಗಂಟೆಗಳಲ್ಲಿ ಈ ಸಂಬಂಧ ಕೊನೆಗೊಂಡಿದೆ. ಉತ್ತರ ಪ್ರದೇಶದ ಕಾನ್ಪುರದ ಜೂಹಿ ನಿವಾಸಿಗಳಾದ ಲುಬ್ನಾ ಮತ್ತು ಮೊಹಮ್ಮದ್ ಇಮ್ರಾನ್ ಇಬ್ಬರೂ ಮುಸ್ಲಿಂ ಪದ್ಧತಿಗಳ ಪ್ರಕಾರ ನವೆಂಬರ್ 29 ರಂದು ವಿವಾಹವಾದರು.

ಲುಬ್ನಾ ಮರುದಿನ ತನ್ನ ಅತ್ತೆಯ ಮನೆಗೆ ಹೊಸ ಜೀವನದ ಕನಸುಗಳೊಂದಿಗೆ ಬಂದಿದ್ದಳು, ಮದುವೆಯ ಸಂಕೇತವಾದ ಮೆಹಂದಿ ಇನ್ನೂ ಅವಳ ಕೈಯಲ್ಲಿ ಹಾಗೆಯೇ ಇತ್ತು. ಲುಬ್ನಾ ಬಂದ ತಕ್ಷಣ, ಆಕೆಯ ಅತ್ತೆ-ಮಾವಂದಿರು ಅವಳನ್ನು ಸುತ್ತುವರೆದರು, ಆಕೆಯನ್ನು ಸ್ವಾಗತಿಸಲು ಅಲ್ಲ ಬದಲಾಗಿ ವರದಕ್ಷಿಣೆ ಬೇಡಿಕೆಯನ್ನು ಆಕೆಯ ಮುಂದಿಟ್ಟರು. ರಾಯಲ್​ ಎನ್ಫೀಲ್ಡ್​ ಬೈಕ್ ಕೊಡಿಸಲು ಇಲ್ಲವಾದಲ್ಲಿ 2 ಲಕ್ಷ ಹಣ ಕೊಡಲಿ ಎಂದು ಆತ ಒತ್ತಾಯಿಸಿದ್ದಾನೆ.

ಮತ್ತಷ್ಟು ಓದಿ: Video: ನಾಲ್ಕು ಗಂಟೆಯ ಮದ್ವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುವ ಅಗತ್ಯ ಏನಿದೆ? ಇದು ವಾಸ್ತವಿಕ ಸತ್ಯ

ಲುಬ್ನಾ ತನ್ನ ಅತ್ತೆ ಮಾವ ತಾನು ಧರಿಸಿದ್ದ ಆಭರಣಗಳನ್ನು ಮತ್ತು ತನ್ನ ಕುಟುಂಬ ನೀಡಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ನನ್ನನ್ನು ಹೊಡೆಯಲು ಪ್ರಾರಂಭಿಸಿದರು ಮತ್ತು ಮನೆಯಿಂದ ಹೊರಗೆ ಓಡಿಸಿದರು, ಹಣ ತರಲು ಹೇಳಿದರು ಎಂದು ಲುಬ್ನಾ ಹೇಳಿಕೊಂಡಿದ್ದಾರೆ.

ತನ್ನ ಮಗಳು ಮನೆಗೆ ಹಿಂದಿರುಗಿದ ಸಂಜೆಯನ್ನು ನೆನಪಿಸಿಕೊಳ್ಳುತ್ತಾ ಮೆಹ್ತಾಬ್, ಸಂಜೆ 7.30 ರ ಸುಮಾರಿಗೆ ಲುಬ್ನಾ ನಮ್ಮ ಮನೆ ಬಾಗಿಲಿಗೆ ಬಂದಳು. ನಾನು ಅನಿರೀಕ್ಷಿತ ಭೇಟಿಯ ಬಗ್ಗೆ ವಿಚಾರಿಸಿದಾಗ, ಆಕೆ ಅಳಲು ಪ್ರಾರಂಭಿಸಿದಳು ಮನೆಯಲ್ಲಾದ ಘಟನೆಗಳನ್ನು ವಿವರಿಸಿದಳು ಎಂದರು.

ತಮ್ಮ ಮಗಳ ಮದುವೆಗೆ ಲಕ್ಷಾಂತರ ಖರ್ಚು ಮಾಡಿರುವುದಾಗಿ ಕುಟುಂಬ ಹೇಳಿಕೊಂಡಿದೆ. ಲುಬ್ನಾ ಕುಟುಂಬದಿಂದ ಇಮ್ರಾನ್ ಕುಟುಂಬಕ್ಕೆ ದೊರೆತ ಉಡುಗೊರೆಗಳ ಪಟ್ಟಿಯ ಪ್ರಕಾರ, ಅವರಿಗೆ ಸೋಫಾ ಸೆಟ್, ಟಿವಿ, ವಾಷಿಂಗ್ ಮೆಷಿನ್, ಡ್ರೆಸ್ಸಿಂಗ್ ಟೇಬಲ್, ವಾಟರ್ ಕೂಲರ್, ಡಿನ್ನರ್ ಸೆಟ್, ಬಟ್ಟೆ ಮತ್ತು ಸ್ಟೀಲ್ ಮತ್ತು ಹಿತ್ತಾಳೆ ಎರಡರಿಂದಲೂ ತಯಾರಿಸಿದ ಅಡುಗೆ ಸಾಮಾನುಗಳು ಸೇರಿದಂತೆ ಇತರ ವಸ್ತುಗಳು ಸಿಕ್ಕಿವೆ.

ಮದುವೆಗೆ ಮುಂಚೆ ಅವರು ಬೈಕ್ ಕೇಳಿರಲಿಲ್ಲ. ಅವರು ಈ ಬೇಡಿಕೆಯನ್ನು ಮೊದಲೇ ಮಾಡಿದ್ದರೆ, ನಾವು ಮದುವೆಗೆ ಮುಂದುವರೆಯುತ್ತಲೇ ಇರಲಿಲ್ಲ ಎಂದು ಲುಬ್ನಾಳ ತಾಯಿ ಮೆಹ್ತಾಬ್ ಹೇಳಿದ್ದಾರೆ. ಮೆಹ್ತಾಬ್ ಕುಟುಂಬವು ತಮ್ಮ ಮಗಳ ಮದುವೆ ಮತ್ತು ಅವಳನ್ನು ಪೋಷಿಸಲು ತಮ್ಮ ಕೈಲಾದಷ್ಟು ಮಾಡಿದ್ದೇವೆ. ಇಮ್ರಾನ್ ಮತ್ತು ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 am, Wed, 3 December 25