ಉತ್ತರ ಪ್ರದೇಶ: ವಿಷ ಸೇವಿಸಿ ಬಿಎಲ್‌ಒ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಸಹೋದ್ಯೋಗಿಗಳ ಪ್ರತಿಭಟನೆ
ಮತದಾರರ ಪಟ್ಟಿ ಪರಿಷ್ಕರಣೆ(SIR) ಪ್ರಕ್ರಿಯೆಗಾಗಿ ನೇಮಕಗೊಂಡಿದ್ದ ಬಿಎಲ್‌ಒ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮುರಳಿಪುರ ನಿವಾಸಿ 25 ವರ್ಷದ ಮೋಹಿತ್ ಚೌಧರಿ ಎಂಬ ಅಧಿಕಾರಿ ಪ್ರಸ್ತುತ ಘರ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಒ ಆಗಿ ನೇಮಕಗೊಂಡಿದ್ದ ಮೋಹಿತ್, ತನ್ನ ಮೇಲ್ವಿಚಾರಕರಿಂದ ಕಿರುಕುಳಕ್ಕೊಳಗಾಗಿದ್ದರಿಂದ ತೀವ್ರ ಒತ್ತಡದಲ್ಲಿದ್ದರು.

ಮೀರತ್, ಡಿಸೆಂಬರ್ 03: ಮತದಾರರ ಪಟ್ಟಿ ಪರಿಷ್ಕರಣೆ(SIR) ಪ್ರಕ್ರಿಯೆಗಾಗಿ ನೇಮಕಗೊಂಡಿದ್ದ ಬಿಎಲ್‌ಒ ವಿಷ ಸೇವಿಸಿ ಆತ್ಮಹತ್ಯೆ(Suicide)ಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮುರಳಿಪುರ ನಿವಾಸಿ 25 ವರ್ಷದ ಮೋಹಿತ್ ಚೌಧರಿ ಎಂಬ ಅಧಿಕಾರಿ ಪ್ರಸ್ತುತ ಘರ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಒ ಆಗಿ ನೇಮಕಗೊಂಡಿದ್ದ ಮೋಹಿತ್, ತನ್ನ ಮೇಲ್ವಿಚಾರಕರಿಂದ ಕಿರುಕುಳಕ್ಕೊಳಗಾಗಿದ್ದರಿಂದ ತೀವ್ರ ಒತ್ತಡದಲ್ಲಿದ್ದರು.
ಮಂಗಳವಾರ ಮೋಹಿತ್ ಕೆಲಸ ಮಾಡುತ್ತಿದ್ದ ಪಲ್ಲವಪುರಂನ ಬೂತ್ ಸಂಖ್ಯೆ 18 ರಲ್ಲಿ ಗಣತಿ ನಮೂನೆಗಳನ್ನು ಸಲ್ಲಿಸುವಲ್ಲಿ ವಿಳಂಬವಾಗಿದ್ದಕ್ಕಾಗಿ ಮೇಲ್ವಿಚಾರಕರು ಪದೇ ಪದೇ ಕರೆ ಮಾಡಿ, ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಮತ್ತು ಒತ್ತಡ ಹೇರಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ.
ನೀರಾವರಿ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಮೋಹಿತ್, ತನ್ನ ತಂದೆಯ ಮರಣದ ನಂತರ ಅವರ ಕೆಲಸವನ್ನು ಪಡೆದುಕೊಂಡಿದ್ದರು. ವಿಷ ಸೇವಿಸುವ ಕೇವಲ 30 ನಿಮಿಷಗಳ ಮೊದಲು, ಮೋಹಿತ್ ತನ್ನ ಸೋದರಸಂಬಂಧಿ ಅಮಿತ್ ಚೌಧರಿಗೆ ಕರೆ ಮಾಡಿ ನೋವು ಹೇಳಿಕೊಂಡಿದ್ದಾಗಿ ಅವರ ಸಂಬಂಧಿಕರು ತಿಳಿಸಿದ್ದಾರೆ. ಮೋಹಿತ್ ವಿಷ ಸೇವಿಸಿದ ನಂತರ, ಅವರ ಸಹೋದ್ಯೋಗಿಗಳು ಅವರನ್ನು ಪಲ್ಲವಪುರಂನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.
ಮತ್ತಷ್ಟು ಓದಿ: ನನ್ನ ನಾಲ್ಕು ಹೆಣ್ಣುಮಕ್ಕಳನ್ನು ನೋಡಿಕೊಳ್ಳಿ, ಬಿಎಲ್‌ಒ ಸಾಯುವ ಮುನ್ನ ಮಾಡಿರುವ ವಿಡಿಯೋ ವೈರಲ್
ನಂತರ ಅವರ ಸ್ಥಿತಿ ಹದಗೆಟ್ಟ ಕಾರಣ ಮೀರತ್‌ನ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಸುದ್ದಿ ಬಹುಬೇಗ ಎಲ್ಲಾ ಕಡೆಯೂ ಹರಡಿತ್ತು. ನೀರಾವರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಮತ್ತು ನೌಕರರು ಹಾಗೂ ಹಲವಾರು ಇತರ ಬಿಎಲ್‌ಒಗಳು ಆಸ್ಪತ್ರೆಯ ಹೊರಗೆ ಜಮಾಯಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿ, ಕೋಪಗೊಂಡ ಬಿಎಲ್‌ಒಗಳು ಮತ್ತು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು. ಚುನಾವಣಾ ಅಧಿಕಾರಿಗಳು ಕ್ಷೇತ್ರ ಕಾರ್ಯಕರ್ತರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಮತ್ತು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಸಮಯದಲ್ಲಿ ಹೆಚ್ಚಿನ ಕೆಲಸದ ಹೊರೆಯನ್ನು ಹೊತ್ತ ಬಿಎಲ್‌ಒಗಳು, ಎಣಿಕೆ ನಮೂನೆಗಳನ್ನು ಸಲ್ಲಿಸುವಲ್ಲಿನ ಸಣ್ಣ ವಿಳಂಬಗಳಿಗೆ ಅಮಾನತುಗೊಳಿಸುವ ಬೆದರಿಕೆಯನ್ನು ನಿಯಮಿತವಾಗಿ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆಯ ಬೆನ್ನೆಲುಬಾಗಿದ್ದರೂ, ಬಿಎಲ್‌ಒಗಳು ಬೆಂಬಲದ ಬದಲು ಅನಗತ್ಯ ಒತ್ತಡವನ್ನು ಎದುರಿಸುತ್ತಾರೆ ಎಂದು ಪ್ರತಿಭಟನಾಕಾರರು ವಾದಿಸಿದರು.
ಚುನಾವಣಾ ಆಯೋಗವು ಇತ್ತೀಚೆಗೆ ಫಾರ್ಮ್ ಸಲ್ಲಿಕೆಗೆ ಎಂಟು ದಿನಗಳವರೆಗೆ ವಿಸ್ತರಿಸಿದ್ದು, ಸಿಬ್ಬಂದಿಗೆ ದೊಡ್ಡ ಪರಿಹಾರವನ್ನು ನೀಡಿದೆ. ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಮೋಹಿತ್ ಆರೋಪಿಸಿದ್ದಾರೆ, ಆದರೆ ಆಡಳಿತವು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಅಥವಾ ವೈಯಕ್ತಿಕ ಸಮಸ್ಯೆಗಳಿಂದ ಒತ್ತಡ ಉಂಟಾಗಿದೆಯೇ ಎಂದು ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಮೊರಾದಾಬಾದ್ನಲ್ಲಿ ಬಿಎಲ್‌ಒ ಆತ್ಮಹತ್ಯೆ ಮಾಡಿಕೊಂಡಿದ್ದರು, ಸಾಯುವ ಮುನ್ನ ವಿಡಿಯೋ ಮಾಡಿ ತನ್ನ ನಾಲ್ವರು ಹೆಣ್ಣುಮಕ್ಕಳನ್ನು ಚೆನ್ನಾಘಿ ನೋಡಿಕೊಳ್ಳುವಂತೆ ಮನವಿ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




