ತುಟಿಯಲ್ಲಿ ಲಿಪ್​ಸ್ಟಿಕ್​, ಕೈಯಲ್ಲಿ ನಕಲಿ ಆಧಾರ್, ಗೆಳತಿಗಾಗಿ ಹೆಣ್ಣು ವೇಷ ತೊಟ್ಟು ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದ ಗೆಳೆಯ

|

Updated on: Jan 15, 2024 | 3:19 PM

ತನ್ನ ಗೆಳತಿಯ ಪರೀಕ್ಷೆ(Exam) ಬರೆಯಲು ಹೆಣ್ಣು ವೇಷ ತೊಟ್ಟು ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಫಾಜಿಲ್ಕಾ ಮೂಲದ ಆಂಗ್ರೇಜ್ ಸಿಂಗ್ ಬಂಧಿತ ಆರೋಪಿ. ಇನ್ವಿಜಿಲೇಟರ್ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಯುವಕ ಮಹಿಳೆಯ ವೇಷದಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಇದರ ಜೊತೆಗೆ ಮತದಾರರ ಗುರುತಿನ ಚೀಟಿ, ಆಧಾರ್ ಸೇರಿದಂತೆ ಗುರುತಿನ ಚೀಟಿಗಳನ್ನು ನಕಲಿ ಮಾಡಲಾಗಿದೆ.

ತುಟಿಯಲ್ಲಿ ಲಿಪ್​ಸ್ಟಿಕ್​, ಕೈಯಲ್ಲಿ ನಕಲಿ ಆಧಾರ್, ಗೆಳತಿಗಾಗಿ ಹೆಣ್ಣು ವೇಷ ತೊಟ್ಟು ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದ ಗೆಳೆಯ
Image Credit source: NDTV
Follow us on

ತನ್ನ ಗೆಳತಿಯ ಪರೀಕ್ಷೆ(Exam) ಬರೆಯಲು ಹೆಣ್ಣು ವೇಷ ತೊಟ್ಟು ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಫಾಜಿಲ್ಕಾ ಮೂಲದ ಆಂಗ್ರೇಜ್ ಸಿಂಗ್ ಬಂಧಿತ ಆರೋಪಿ. ಇನ್ವಿಜಿಲೇಟರ್ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಯುವಕ ಮಹಿಳೆಯ ವೇಷದಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಇದರ ಜೊತೆಗೆ ಮತದಾರರ ಗುರುತಿನ ಚೀಟಿ, ಆಧಾರ್ ಸೇರಿದಂತೆ ಗುರುತಿನ ಚೀಟಿಗಳನ್ನು ನಕಲಿ ಮಾಡಲಾಗಿದೆ.

ಪಂಜಾಬ್ ನ ಫರೀದ್ ಕೋಟ್ ನಲ್ಲಿ ಜನವರಿ 7 ರಂದು ಈ ಘಟನೆ ನಡೆದಿದೆ. ಬಾಬಾ ಫರೀದ್ ಹೆಲ್ತ್ ಯೂನಿವರ್ಸಿಟಿಯಲ್ಲಿ ಮಲ್ಟಿ ಪರ್ಪಸ್ ಹೆಲ್ತ್ ವರ್ಕರ್ ಹುದ್ದೆಗೆ ಪರೀಕ್ಷೆ ಬರೆಯಲು ಆಂಗ್ರೇಸ್ ಸಿಂಗ್ ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್ ಗೆ ಬಂದಿದ್ದರು.

ತನ್ನ ಗೆಳತಿ ಪರಮ್‌ಜಿತ್ ಕೌರ್‌ಗಾಗಿ ಈ ಸಾಹಸಕ್ಕೆ ಸಿದ್ಧನಾಗಿದ್ದಾನೆ. ಮಹಿಳೆಯರ ಬಟ್ಟೆಯ ಹೊರತಾಗಿ, ಆಂಗ್ರೇಸ್ ಸಿಂಗ್ ತನ್ನ ತುಟಿಗಳಿಗೆ ಲಿಪ್ಸ್ಟಿಕ್, ಬಳೆಗಳು ಮತ್ತು ಮಡಕೆಯನ್ನು ಸಹ ಧರಿಸಿದ್ದರು.

ಆದರೆ ಬಯೋಮೆಟ್ರಿಕ್ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾನೆ. ಬೆರಳಚ್ಚು ಹೊಂದಿಕೆಯಾಗದಿದ್ದಾಗ ಅಧಿಕಾರಿಗಳಿಗೆ ವಂಚನೆ ಅರಿವಾಯಿತು. ಪೊಲೀಸರು ಆಂಗ್ರೇಸ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಮ್‌ಜಿತ್ ಕೌರ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ