ಮಗಳಿಗೆ ಕಿರುಕುಳ ನೀಡಿದವನನ್ನು ಕೊಲ್ಲಲು ಕುವೈತ್​ನಿಂದ ಆಂಧ್ರಕ್ಕೆ ಬಂದ ಅಪ್ಪ; ಆಮೇಲೇನಾಯ್ತು?

|

Updated on: Dec 13, 2024 | 6:57 PM

ಮಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಆಕೆಯ ಅಪ್ಪ ಕುವೈತ್‌ನಿಂದ ಆಂಧ್ರಪ್ರದೇಶಕ್ಕೆ ವಿಮಾನದಲ್ಲಿ ಬಂದು ಆ ಕಿರುಕುಳ ನೀಡಿದಾತನನ್ನು ಕೊಂದಿದ್ದಾರೆ. ಇದಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಂದೇಶದ ಮೂಲಕ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆಂಜನೇಯ ಪ್ರಸಾದ್ ಅವರು ಕುವೈತ್​ನಿಂದ ಆಂಧ್ರಕ್ಕೆ ಆಗಮಿಸಿ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಪಿ. ಆಂಜನೇಯುಲು (59) ಅವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಮಗಳಿಗೆ ಕಿರುಕುಳ ನೀಡಿದವನನ್ನು ಕೊಲ್ಲಲು ಕುವೈತ್​ನಿಂದ ಆಂಧ್ರಕ್ಕೆ ಬಂದ ಅಪ್ಪ; ಆಮೇಲೇನಾಯ್ತು?
ಸಾಂದರ್ಭಿಕ ಚಿತ್ರ
Follow us on

ಓಬುಲವಾರಿಪಲ್ಲಿ: ಕುವೈತ್‌ನ 35 ವರ್ಷದ ವ್ಯಕ್ತಿಯೊಬ್ಬರು ತನ್ನ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದ ತನ್ನ ಸಂಬಂಧಿಯನ್ನು ಕೊಲೆ ಮಾಡಿದ್ದಾರೆ. ಆಂಧ್ರದ ರಾಜಂಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿ ಎನ್. ಸುಧಾಕರ್ ಈ ಬಗ್ಗೆ ಮಾತನಾಡಿ, ಆಂಜನೇಯ ಪ್ರಸಾದ್ ಅವರು ಕುವೈತ್​ನಿಂದ ಇತ್ತೀಚೆಗೆ ಆಗಮಿಸಿ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ಸಂಬಂಧಿ ಪಿ. ಆಂಜನೇಯುಲು (59) ಎಂಬುವವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದಿದ್ದಾರೆ.

“ಆಂಜನೇಯ ಪ್ರಸಾದ್ ಅವರು ಡಿಸೆಂಬರ್ ಮೊದಲ ವಾರದಲ್ಲಿ ಭಾರತಕ್ಕೆ ಬಂದರು. ಡಿಸೆಂಬರ್ 6 ಮತ್ತು 7ರ ಮಧ್ಯರಾತ್ರಿಯಲ್ಲಿ ಆಂಜನೇಯುಲು ತಮ್ಮ ಮನೆಯ ಹೊರಗೆ ಮಲಗಿದ್ದಾಗ ಅವರನ್ನು ರಾಡ್​ನಿಂದ ಹೊಡೆದು ಕೊಂದಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಾಯಿಯನ್ನು ಕೊಂದು ಶವದ ಜತೆ 6 ದಿನ ಕಳೆದ ಬಾಲಕ

ಕೊಲೆಯ ನಂತರ, ಆಂಜನೇಯ ಪ್ರಸಾದ್ ಅವರು ಕುವೈತ್‌ಗೆ ಹಿಂತಿರುಗಿ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ತಮ್ಮ ಮಗಳ ದೂರಿನ ಮೇಲೆ ಕ್ರಮ ಕೈಗೊಳ್ಳದ ಕಾರಣದಿಂದ ತಾನೇ ಅಪರಾಧಿಗೆ ತಕ್ಕ ಶಿಕ್ಷೆ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ