ತಾಯಿಯನ್ನು ಕೊಂದು ಶವದ ಜತೆ 6 ದಿನ ಕಳೆದ ಬಾಲಕ
ಬಾಲಕನೊಬ್ಬ ತಾಯಿಯನ್ನು ಕೊಂದು ಶವದ ಜತೆ 6 ದಿನ ಕಳೆದಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. ಪಿಯು ಓದುತ್ತಿರುವ ಬಾಲಕ ತನ್ನ ಮನೆಯಲ್ಲಿ ತಾಯಿಯನ್ನು ಕೊಲೆ ಮಾಡಿದ್ದು, ಶವದ ಜತೆ ಆರು ದಿನ ಕಳೆದಿದ್ದ ಎನ್ನಲಾಗಿದೆ. ಇದಕ್ಕೂ ಮುನ್ನ ತನ್ನ ತಾಯಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮಗ ತನ್ನ ತಂದೆ ಮತ್ತು ಪೊಲೀಸರನ್ನು ದಾರಿ ತಪ್ಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ತಾಯಿ ಆರತಿ ವರ್ಮಾ ಶಾಲೆಗೆ ಹೋಗಲು ಅವನನ್ನು ಎಬ್ಬಿಸಿದಾಗ, ಅವನು ಕೋಪಗೊಂಡು ಅವಳನ್ನು ತಳ್ಳಿದ್ದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು.

ಆದರೆ, ಮಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಬದಲಿಗೆ, ಶಾಕೆಗೆ ಹೋಗಿದ್ದ, ಬಳಿಕ ಅತಿಯಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ. ಬಾಲಕ ಶಾಲೆಯಿಂದ ಹಿಂದಿರುಗಿದಾಗ, ತನ್ನ ತಾಯಿಯ ಮೃತ ದೇಹವನ್ನು ಕಂಡು ಬೇಸರಗೊಂಡಿದ್ದ ಮತ್ತು ಆರು ದಿನಗಳ ಕಾಲ ಅದರ ಪಕ್ಕದಲ್ಲಿ ಮಲಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈನ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ವಿಜ್ಞಾನಿಯಾಗಿರುವ ಅವರ ತಂದೆ ರಾಮ್ ಮಿಲನ್ ಅವರು ಆರು ದಿನಗಳಿಂದ ಪತ್ನಿಯನ್ನು ಸಂಪರ್ಕಿಸಲು ಸಾಧ್ಯವಾಗದೆ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ತೆರೆದಿದ್ದು, ಒಳಗಿನಿಂದ ದುರ್ವಾಸನೆ ಬರುತ್ತಿತ್ತು. ಅವರು ಒಳಗೆ ಹೋದಾಗ, ಅವರು ತಮ್ಮ ಹೆಂಡತಿಯ ಮೃತದೇಹ ನೆಲದ ಮೇಲೆ ಬಿದ್ದಿರುವುದನ್ನು ಕಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ
ನಂತರ ಮಗ ತನ್ನ ತಂದೆ ಮತ್ತು ಪೊಲೀಸರನ್ನು ದಾರಿ ತಪ್ಪಿಸಿ, ಆಕೆ ತಾನಾಗಿಯೇ ಬಿದ್ದು ಸತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಗಾಬರಿಯಿಂದ ಮನೆಗೆ ಹೊರಗಿನಿಂದ ಬೀಗ ಹಾಕಿಕೊಂಡು ನಾಲ್ಕು ದಿನ ದಿಕ್ಕು ತೋಚದೆ ಅಲೆದಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವಪರೀಕ್ಷೆಯಲ್ಲಿ ಆಕೆ 6 ದಿನಗಳ ಹಿಂದೆಯೇ ಸಾವನ್ನಪ್ಪಿದ್ದಳು ಎಂಬುದು ತಿಳಿದುಬಂದಿದೆ. ಆತನನ್ನು ಮರು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಎಳೆದೊಯ್ಯಲಾಗಿದೆ ಎಂಬುದಕ್ಕೆ ಪುರಾವೆಗಳು ಪೊಲೀಸರಿಗೆ ದೊರೆತಿದ್ದು, ಯಾವುದೇ ಹೊರಗಿನವರು ಮನೆಗೆ ಪ್ರವೇಶಿಸಿಲ್ಲ ಎಂದು ಸಿಸಿಟಿವಿ ದೃಶ್ಯಾವಳಿಗಳು ಖಚಿತಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ವಶಕ್ಕೆ ಪಡೆಯಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ