ಮಗನ ಹೇರ್ ಕಟಿಂಗ್ ಸರಿ ಮಾಡದಿದ್ದಕ್ಕೆ ಕ್ಷೌರಿಕರ ಮೇಲೆ ಅಪ್ಪನಿಂದ ಹಲ್ಲೆ: ಇಬ್ಬರ ಬಂಧನ
ಹುಬ್ಬಳ್ಳಿಯ ನವನಗರದಲ್ಲಿ ಮಗನ ಕಟಿಂಗ್ ಸರಿಯಾಗಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಕ್ಷೌರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೈದ ವಿಜಯ್ ಕುಮಾರ್ ಅಪ್ಪಾಜಿ ಹಾಗೂ ಅವನ ಸಹಾಯಕ ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 13: ಮಗನ ಕಟಿಂಗ್ (barber shop) ಸರಿ ಮಾಡದಿದ್ದಕ್ಕೆ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಸದ್ಯ ಹಲ್ಲೆ ಮಾಡಿದ್ದ ವಿಜಯ್ ಕುಮಾರ್ ಅಪ್ಪಾಜಿ ಹಾಗೂ ಸಹಾಯ ಮಾಡಿದ ಗಣೇಶ್ರನ್ನು ಪೊಲೀಸರು ಬಂಧಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಗನ ಕಟಿಂಗ್ ಸರಿ ಮಾಡಿಲ್ಲ ಎಂದು ರೊಚ್ಚಿಗೆದ್ದ ವಿಜಯ್ ಕುಮಾರ್ ಅಪ್ಪಾಜಿ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮೂವರ ಮೇಲೆ ಪರದೆ ಹಾರುವ ಸ್ಟೀಲ್ ಸ್ಟ್ಯಾಂಡ್ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿಜಯಕುಮಾರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಜೊತೆಗೆ ‘ಅಪ್ಪಾಜಿ’ ಜನಸೇನಾ ಎಂದು ಸಂಘಟನೆ ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಹುಬ್ಬಳ್ಳಿಯ ನವನಗರ ಬಳಿಯಿರುವ ಲೋರೆಯಲ್ ಕಟಿಂಗ್ ಶಾಪ್ನಲ್ಲಿ ಪ್ರತಿ ಬಾರಿ ವಿಜಯಕುಮಾರ್ ಮಗ ಕಟಿಂಗ್ ಮಾಡಿಸುತ್ತಿದ್ದ. ಕಳೆದ ತಿಂಗಳು 11ರಂದು ಕಟಿಂಗ್ ಮಾಡಿಸಿದ್ದ. ಆದರೆ ಪ್ರತಿ ಬಾರಿ ಕಟಿಂಗ್ ಮಾಡುವ ಹುಡುಗ ಇರಲಿಲ್ಲ. ಬೇರೆ ಹುಡುಗನೊಬ್ಬ ಕಟಿಂಗ್ ಮಾಡಿದ್ದಾನೆ. ವಿಜಯಕುಮಾರ್ ಮಗ ಮನೆಗೆ ಹೋಗಿ ಕಟಿಂಗ್ ಸರಿ ಆಗಿಲ್ಲ ಎಂದಿದ್ದಾನೆ. ಹೀಗಾಗಿ ರೊಚ್ಚಿಗೆದ್ದು ವಿಜಯಕುಮಾರ್ ಕಟಿಂಗ್ ಶಾಪ್ಗೆ ನುಗ್ಗಿ ಪರದೆ ಹಾಕುವ ಸ್ಟ್ಯಾಂಡ್ನಿಂದ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.
ಹಲ್ಲೆ ವಿಡಿಯೋ ವೈರಲ್ ಆಗುತ್ತಲೇ ವಿಜಯಕುಮಾರ್ ಅಪ್ಪಾಜಿ ಹಾಗೂ ಗಣೇಶ್ ರಾಣೆಬೆನ್ನೂರ್ನ್ನು ಬಂಧಿಸಲಾಗಿದೆ. ಘಟನೆ ನಡೆದ ಬಳಿಕ ಆತಂಕದಿಂದ ಲೋರಿಯಲ್ ಕಟಿಂಗ್ ಶಾಪ್ ಮಾಲೀಕರು ಅಂಗಡಿ ಬಂದ್ ಮಾಡಿದ್ದಾರೆ.
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ
ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ ಹೊಂದಿರುವಂತಹ ಘಟನೆ ಕಲಬುರಗಿಯ ಬಸವನಗರದಲ್ಲಿ ನಡೆದಿದೆ. ಕಮಲ್ ರಾಜ್(14) ಮೃತ ಬಾಲಕ. ಬಸ್ ನಿಲ್ದಾಣದ ಬಳಿ ರಸ್ತೆ ಮಧ್ಯೆ ಡಿವೈಡರ್ ದಾಟುವಾಗ ಘಟನೆ ಸಂಭವಿಸಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಬಾಮೈದ, ಅತ್ತೆಯನ್ನು ಬಂಧಿಸಿದ ಬೆಂಗಳೂರು ಪೊಲೀಸ್
ರಸ್ತೆ ಮಧ್ಯೆ ಅಳವಡಿಸಿದ್ದ ಕಬ್ಬಿಣದ ರಾಡ್ಗೆ ಅಂಟಿಕೊಂಡಿದ್ದ ವಿದ್ಯುತ್ ತಂತಿ, ಈ ವೇಳೆ ಕಬ್ಬಿಣದ ರಾಡ್ನಿಂದ ವಿದ್ಯುತ್ ಪ್ರವಹಿಸಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾಕ್ನಿಂದ ಬಾಲಕ ಮೃತಪಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕಲಬುರಗಿ ಪಾಲಿಕೆ ಮತ್ತು ಜೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಕಲಬುರಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:33 pm, Fri, 13 December 24