Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕನ ನಡುವೆ ಬಿಸಿಬಿಸಿ ವಾಗ್ವಾದ

Karnataka Assembly Session: ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕನ ನಡುವೆ ಬಿಸಿಬಿಸಿ ವಾಗ್ವಾದ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 13, 2024 | 2:45 PM

Karnataka Assembly Session: ತಾನು ಪ್ರಸ್ತಾಪಿಸಬೇಕೆಂದಿರುವ ವಿಷಯ ಅಜೆಂಡಾದಲ್ಲೇ ಇಲ್ಲ ಎಂದು ಅಶೋಕ ಹೇಳಿದಾಗ ಸಿದ್ದರಾಮಯ್ಯ ಅಸಹನೆಯಿಂದಲೇ ಇದೆ ಕಣ್ರೀ ಅನ್ನುತ್ತಾರೆ. ಹಿಂದೆ ನೀವು ಸಹ ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನವನ್ನು ಹೀಗೆ ನಡೆಸಿದ್ರಾ ಅಂತ ಅಶೋಕ ಕೋಪದಿಂದ ಕೇಳಿದಾಗ ಸಿದ್ದರಾಮಯ್ಯ ನೀವು ಹೇಳಿದಂತೆ ಸದನವನ್ನು ನಡೆಸಲಾಗಲ್ಲ ಅನ್ನುತ್ತಾರೆ.

ಬೆಳಗಾವಿ: ವಿಧಾನಮಂಡಲದ ಇವತ್ತಿನ ಕಾರ್ಯಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ನಡುವೆ ಬಿಸಿಬಿಸಿ ವಾಗ್ವದ ನಡೆಯಿತು. ಮಳೆಹಾನಿ ಬಗ್ಗೆ ಕಂದಾಯ ಸಚಿವರು ಸದನಕ್ಕೆ ಮಾಹಿತಿ ನೀಡುತ್ತಿದ್ದಾರೆ ಮತ್ತು ವಿಷಯದ ಮೇಲೆ ಬೇರೆ ಶಾಸಕರು ಮಾತಾಡಬಯಸಿದ್ದಾರೆ, ಅಶೋಕ ಅವರು ಹೇಳುತ್ತಿರೋದು ಸಹ ಬಹಳ ಮಹತ್ವದ ವಿಷಯ, ಅದರ ಮೇಲೂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿಯವರು ಹೇಳುತ್ತಿರುವಾಗಲೇ ಅಶೋಕ ಕೋಪೋದ್ರಿಕ್ತರಾಗುತ್ತಾರೆ. ಅವರು ಮಧ್ಯೆ ಪ್ರವೇಶಿದ್ದಕ್ಕೆ ಸಿದ್ದರಾಮಯ್ಯ ಕೂಡ ಸಹನೆ ಕಳೆದುಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಒನ್​ ನೇಷನ್, ಒನ್ ಎಲೆಕ್ಷನ್: ಕೇಂದ್ರದ ನಡೆಗೆ ಸಿಎಂ ಸಿದ್ದರಾಮಯ್ಯ ಕಿಡಿ