ತನ್ನ ಬಾಸ್​ ಜತೆ ಮಲಗಲು ನಿರಾಕರಿಸಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್

ಪತ್ನಿಯನ್ನು ದುಷ್ಟರಿಂದ ಕಾಪಾಡಬೇಕಾದ ಪತಿಯೇ ನೀಚತನ ತೋರಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ತನ್ನ ಬಾಸ್​ ಜತೆ ಪತ್ನಿ ಮಲಗಲು ನಿರಾಕರಿಸಿದ ಕಾರಣ ಕೋಪಗೊಂಡ ವ್ಯಕ್ತಿಗೆ ಆಕೆಗೆ ತ್ರಿವಳಿ ತಲಾಖ್​ ನೀಡಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡಲು ಪತಿ ಎರಡನೇ ಪತ್ನಿಯಿಂದ 15 ಲಕ್ಷ ರೂ.ಕೇಳಿದ್ದ, ತ್ರಿವಳಿ ತಲಾಖ್ ಪಡೆದ ಮಹಿಳೆ ಆರೋಪಿಯ ಎರಡನೇ ಪತ್ನಿಯಾಗಿದ್ದು, ಜನವರಿಯಲ್ಲಿ ವಿವಾಹವಾಗಿದ್ದರು.

ತನ್ನ ಬಾಸ್​ ಜತೆ ಮಲಗಲು ನಿರಾಕರಿಸಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್
ಸಾಂದರ್ಭಿಕ ಚಿತ್ರ
Image Credit source: Times Of India

Updated on: Dec 24, 2024 | 10:01 AM

ತನ್ನ ಬಾಸ್ ಜತೆ ಮಲಗಲು ಎರಡನೇ ಪತ್ನಿ ಒಪ್ಪದ ಕಾರಣ ವ್ಯಕ್ತಿಯೊಬ್ಬ ಆಕೆಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡಿಸೆಂಬರ್ 19 ರಂದು 45 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಹೆಂಡತಿಯನ್ನು ಪಾರ್ಟಿಯಲ್ಲಿ ತನ್ನ ಬಾಸ್ ಜೊತೆ ಇರಲು ಹೇಳಿದ್ದ.

ಅಷ್ಟೇ ಅಲ್ಲದೆ ಎರಡನೇ ಪತ್ನಿ ಬಳಿ ಆಕೆಯ ಪೋಷಕರ ಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹಾಕಿದ್ದ. ಆಕೆಗೂ ಆತ ತಲಾಖ್ ನೀಡಿದ್ದಾನೆ. ಆರೋಪಿ ವಿರುದ್ಧ ರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 351(2), 351(3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆ ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಪತಿ ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸುವ ಮೊದಲು ಹೆಂಡತಿ ಮೊದಲ ಕೆಲವು ತಿಂಗಳು ಸಂತೋಷದ ಜೀವನ ಸಾಗಿಸುತ್ತಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂಪಾಯಿ ಬೇಕು ಎಂದು ಪತಿ ಹೇಳಿದ್ದು, ಆ ಮೊತ್ತವನ್ನು ಪೋಷಕರಿಂದ ಪಡೆಯಲು ಎರಡನೇ ಪತ್ನಿಗೆ ಪೀಡಿಸಿದ್ದಾನೆ.

ಮತ್ತಷ್ಟು ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ

ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ ನಂತರ ಪತಿ ತನ್ನ ಎರಡನೇ ಹೆಂಡತಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತಕ್ಷಣ ತಲಾಖ್ ನೀಡಿದ ಬಳಿಕ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.

ಡಿಸೆಂಬರ್ 19 ರಂದು ಪತಿ ವಿರುದ್ಧ ಪ್ರಕರಣ ದಾಖಲಿಸಲು ಪತ್ನಿ ಸಂಭಾಜಿ ನಗರ ಠಾಣೆಗೆ ತೆರಳಿದ್ದರು. ಮರುದಿನ ಪ್ರಕರಣವನ್ನು ಕಲ್ಯಾಣ್‌ನ ಬಜಾರ್‌ಪೇತ್ ಠಾಣೆಗೆ ವರ್ಗಾಯಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ