ಜೀವ ಉಳಿಸಬೇಕಿದ್ದ ಏರ್ಬ್ಯಾಗ್ನಿಂದಲೇ ಬಾಲಕನ ಪ್ರಾಣ ಹೋಯ್ತು
ಜೀವನ ಎಷ್ಟು ಅನಿರೀಕ್ಷಿತ ತಿರುವುಗಳನ್ನು ಪಡೆದುಬಿಡುತ್ತದೆ. ಹಾಗೆಯೇ ಸಾವು ಕೂಡ ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಜೀವ ಉಳಿಸಬೇಕಿದ್ದ ಏರ್ಬ್ಯಾಗ್ 6 ವರ್ಷದ ಬಾಲಕನ ಜೀವ ತೆಗೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಪೋಷಕರ ಜತೆ ಬಾಲಕನೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಗ ಮತ್ತೊಂದು ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಆ ಕಾರಿನ ಹಿಂಬಾಗ ಬಾಲಕನಿದ್ದ ಕಾರಿನ ಬಾನೆಟ್ಗೆ ಬಿದ್ದ ಪರಿಣಾಮ ಕೂಡಲೇ ಏರ್ಬ್ಯಾಗ್ ಓಪನ್ ಆಗಿತ್ತು, ಆದರೆ ಆ ಏರ್ಬ್ಯಾಗ್ನಿಂದಲೇ ಬಾಲಕ ಸಾವನ್ನಪ್ಪಿದ್ದಾನೆ.
ಜೀವ ಉಳಿಸಬೇಕಿದ್ದ ಏರ್ಬ್ಯಾಗ್ ಬಾಲಕನ ಜೀವ ತೆಗೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬಾಲಕ ಕಾರೊಂದರಲ್ಲಿ ಪೋಷಕರ ಜತೆ ಪ್ರಯಾಣಿಸುತ್ತಿದ್ದ, ಮತ್ತೊಂದು ಕಡೆ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ತುಂಡಾಗಿ ಬಂದು ಬಾಲಕನಿದ್ದ ಕಾರಿನ ಬಾನೆಟ್ಗೆ ಅಪ್ಪಳಿಸಿತ್ತು. ಇದರ ಪರಿಣಾಮ ಕಾರಿನಲ್ಲಿದ್ದ ಏರ್ ಬ್ಯಾಗ್ ತೆರೆದುಕೊಂಡಿತ್ತು, ಡ್ರೈವರ್ ಸೀಟ್ನಲ್ಲಿದ್ದವರ ಪ್ರಾಣವೇನೋ ಉಳಿದಿತ್ತು, ಆದರೆ ಪ್ಯಾಸೆಂಜರ್ ಸೀಟ್ನಲ್ಲಿ ಬಾಲಕ ಕುಳಿತಿದ್ದ ಕಡೆ ಏರ್ ಬ್ಯಾಗ್ ಸ್ಫೋಟಗೊಂಡಿತ್ತು. ಈ ಕಾರಣದಿಂದ ಬಾಲಕ ಸಾವನ್ನಪ್ಪಿದ್ದಾರೆ.
ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಬರುಷ್ಟರಲ್ಲೇ ಮೃತಪಟ್ಟಿದ್ದ. ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಆರೋಪಿ ಚಾಲಕ ವೃತ್ತಿಯಲ್ಲಿ ವೈದ್ಯನಾಗಿದ್ದು, ಸೊಲ್ಲಾಫುರದಿಂದ ಘನ್ಸೋಲಿಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದರು.
ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 (ವೇಗದ ಚಾಲನೆ), 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (BNS) ಮತ್ತು ಮೋಟಾರು ವಾಹನಗಳ ಕಾಯಿದೆಯ ವಿಭಾಗ 184 (ಅಪಾಯಕಾರಿ ಚಾಲನೆ) ಅಡಿಯಲ್ಲೂ ಪ್ರಕರಣವಿದೆ. ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಮತ್ತಷ್ಟು ಓದಿ: ಕುಡಿದ ಮತ್ತಿನಲ್ಲಿ ಟ್ರಕ್ ಓಡಿಸಿ ಫುಟ್ಪಾತ್ ಮೇಲೆ ಮಲಗಿದ್ದ ಮೂವರನ್ನು ಕೊಂದ ಚಾಲಕ
ಮಹಾರಾಷ್ಟ್ರದ ಮತ್ತೊಂದು ಅಪಘಾತದಲ್ಲಿ, ಸೋಮವಾರ ಮುಂಜಾನೆ ಪುಣೆ ನಗರದ ಫುಟ್‌ಪಾತ್‌ನಲ್ಲಿ ಮಲಗಿದ್ದ ಜನರ ಮೇಲೆ ಟ್ರಕ್ ಹರಿದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಮತ್ತು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಘೋಲಿ ಪ್ರದೇಶದ ಫುಟ್‌ಪಾತ್‌ನಲ್ಲಿ ಮಧ್ಯರಾತ್ರಿ 12.55ಕ್ಕೆ ಈ ಘಟನೆ ನಡೆದಿದ್ದು, ಅಲ್ಲಿ ಹಲವರು ಮಲಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸಂತ್ರಸ್ತರಲ್ಲಿ ಅಮರಾವತಿ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸೇರಿದ್ದಾರೆ. ಕಾರ್ಮಿಕರು ಕೆಲಸ ಅರಸಿ ಎರಡು ದಿನಗಳ ಹಿಂದೆ ಪುಣೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಟ್ರಕ್ ಚಾಲಕನನ್ನು ಗಜಾನನ್ ಟೋಟ್ರೆ (26) ಎಂದು ಗುರುತಿಸಲಾಗಿದೆ ಮತ್ತು ಆತನನ್ನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ