ಸುತ್ತಿಗೆಯಿಂದ ಲಿವ್​ಇನ್ ಸಂಗಾತಿ ಕೊಂದು, ಮಗನ ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ವ್ಯಕ್ತಿಯೊಬ್ಬ ಲಿವ್​ ಇನ್ ಸಂಗಾತಿಯ ಹತ್ಯೆ ಮಾಡಿ, ಮಗನನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಶನಿವಾರ ಸಂಜೆ ನಡೆದಿದೆ. ಸಚಿನ್ ವಿನೋದಕುಮಾರ್ ರಾವತ್, ನಜ್ನಿನ್, 29, ಮತ್ತು ಅವರ ಮಗ ಯುಗ್ ಅವರ ಮೃತದೇಹಗಳು ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್‌ನಲ್ಲಿನ ಕೊಠಡಿಯಲ್ಲಿ ಸಿಬ್ಬಂದಿಗೆ ಪತ್ತೆಯಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುತ್ತಿಗೆಯಿಂದ ಲಿವ್​ಇನ್ ಸಂಗಾತಿ ಕೊಂದು, ಮಗನ ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಕೊಲೆ

Updated on: Apr 14, 2024 | 11:17 AM

ವ್ಯಕ್ತಿಯೊಬ್ಬ ಲಿವ್​ ಇನ್ ಸಂಗಾತಿಯ ಹತ್ಯೆ ಮಾಡಿ, ಮಗನನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಶನಿವಾರ ಸಂಜೆ ನಡೆದಿದೆ. ಸಚಿನ್ ವಿನೋದಕುಮಾರ್ ರಾವತ್, ನಜ್ನಿನ್, 29, ಮತ್ತು ಅವರ ಮಗ ಯುಗ್ ಅವರ ಮೃತದೇಹಗಳು ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್‌ನಲ್ಲಿನ ಕೊಠಡಿಯಲ್ಲಿ ಸಿಬ್ಬಂದಿಗೆ ಪತ್ತೆಯಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾವತ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅವರ ಲೈವ್-ಇನ್ ಸಂಗಾತಿ ನಾಜ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು, ರಕ್ತಸಿಕ್ತವಾದ ಸುತ್ತಿಗೆಯೂ ಕೂಡ ಅಲ್ಲಿಯೇ ಬಿದ್ದಿತ್ತು. ಆದರೆ 3 ವರ್ಷದ ಮಗುವಿನ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ರಾವತ್ ನಜ್ನಿನ್ ಮೇಲೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಂದು, ಬಳಿಕ ಮಗನ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಮತ್ತಷ್ಟು ಓದಿ: ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಅಪರಾಧ ಮರೆಮಾಚಲು ಚಿತ್ರಹಿಂಸೆ

ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿರುವ ರಾವತ್ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈತ ಮಧ್ಯಪ್ರದೇಶ ಮೂಲದ ನಜ್ನಿನ್ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ.

ರಾವತ್ ತನ್ನ ಹೆಂಡತಿಗೆ ವಿಚ್ಛೇದನ ನೀಡಲಿಲ್ಲ ಮತ್ತು ನಾಜ್ನಿನ್ ಜೊತೆ ಇರಲು ಪ್ರಾರಂಭಿಸಿದ್ದ. ಸ್ವಲ್ಪ ದಿನಗಳ ನಂತರ ಆತ ಅಲ್ಲಿಗೆ ಬರುವುದನ್ನು ನಿಲ್ಲಿಸಿದ್ದ, ಅಂತಿಮವಾಗಿ ಇಬ್ಬರೂ ಬೇರೆ ಬೇರೆಯಾಗಿ ಇರಲು ನಿರ್ಧರಿಸಿದ್ದರು. ಅದಕ್ಕೆ 500 ರೂ.ಗಳ ಸ್ಟ್ಯಾಂಪ್​ ಪೇಪರ್​ ಮೇಲೆ ಸಹಿ ಮಾಡಿದ್ದರು, ಆ ಪೇಪರ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತ ರಾವತ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us